Amitabh Bachchan : ಬಾಲಿವುಡ್ ಬಿಗ್ ಬಿ ರೊನಾಲ್ಡೋ, ಮೆಸ್ಸಿ ಅವರನ್ನ ಭೇಟಿಯಾದ ಕ್ಷಣ…
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಗುರುವಾರ ಸೌದಿ ಅರೇಬಿಯಾದಲ್ಲಿ ಫುಟ್ಬಾಲ್ ಪಂದ್ಯವನ್ನ ಉದ್ಘಾಟಿಸಿದರು. ಕ್ರಿಸ್ಟಿಯಾನೊ ರೊನಾಲ್ಡೋ ನಾಯಕತ್ವದ ರಿಯಾದ್ XI ಮತ್ತು ಲಿಯೋನೆಲ್ ಮೆಸ್ಸಿ ನೇತೃತ್ವದ ಪ್ಯಾರಿಸ್ ಸೇಂಟ್ ಜರ್ಮೈನ್ ನಡುವಿನ ಹೈ ವೋಲ್ಟೇಜ್ ಮ್ಯಾಚ್ ಉದ್ಘಾಟನೆಗಾಗಿ ನಟ ಅಮಿತಾಬ್ ಬಚ್ಚನ್ ಕಿಂಗ್ ಫಹದ್ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಭಾಗವಹಿಸಿದ್ದರು.
ಅಮಿತಾಬ್ ಬಚ್ಚನ್ ಅವರನ್ನ ಉದ್ಘಾಟನ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ನಟ ಅಮಿತಾಬ್ ಬಚ್ಚನ್ ಸೋಶೀಯಲ್ ಮೀಡಿಯಾದಲ್ಲಿ ಮೆಸ್ಸಿ, ರೊನಾಲ್ಡೊ, ಎಂಬಪ್ಪೆ ಸೇರಿದಂತೆ ಹಲವು ಸ್ಟಾರ್ ಆಟಗಾರಿಗೆ ಕೈ ಕುಲುಕಿರುವ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಇದು ನಂಬಲಾಗದ ಅನುಭವ ಎಂಥಹ ಸಂಜೆ ಕ್ರಿಸ್ಟಿಯಾನೋ ರೊನಾಲ್ಡೊ, ಲಿಯೋನೆಲ್ ಮೆಸ್ಸಿ, ಎಂಬಾಪೆ, ನೇಮಾರ್ ಎಲ್ಲರೂ ಒಟ್ಟಿಗೆ ಆಡುತ್ತಿದ್ದಾರೆ.. ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅನೇಕ ಸೆಲೆಬ್ರಿಟಿಗಳು ಬಿಗ್ ಬಿ ಅವರ ವೀಡಿಯೊಗಳು ಮತ್ತು ಫೋಟೋಗಳಿಗೆ ತಮ್ಮ ಕಾಮೆಂಟ್ ಹಾಕಿದ್ದಾರೆ. “ಅದ್ಭುತ. ಎಷ್ಟು ಸುಂದರ ಅನುಭವ. ಅವರು ನಿಮ್ಮನ್ನು ಭೇಟಿಯಾಗಲು ಸಿಕ್ಕಿದ್ದಾರೆ” ಎಂದು ಎಂದು ವಿರಾಟ್ ಕೊಹ್ಲಿ ಕಾಮೆಂಟ್ ಮಾಡಿದ್ದಾರೆ. ಇದರ ನಡುವೆ ಸೌದಿ ಫುಟ್ಬಾಲ್ ಕ್ಲಬ್ ಅಲ್ ನಾಸ್ರ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಕ್ರಿಸ್ಟಿಯಾನೊ ರೊನಾಲ್ಡೊ ಕ್ಲಬ್ ಜೊತೆ ಮೊದಲ ಪಂದ್ಯದಲ್ಲಿ ಗುರುತಿಸಿಕೊಂಡರು. ಕಳೆದ ವರ್ಷ FIFA ವಿಶ್ವಕಪ್ ನಂತರ ಅವರು ಮ್ಯಾಂಚೆಸ್ಟರ್ ಯುನೈಟೆಡ್‌ನಿಂದ ನಿರ್ಗಮಿಸಿದ್ದರು.
Amitabh Bachchan: The moment Bollywood Big B met Ronaldo, Messi…








