ಕೊರೊನಾ ಸೋಂಕು ಧೃಡಪಟ್ಟ ಬೆನ್ನಲ್ಲೇ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಪುತ್ರ ಅಭಿಷೇಕ್ ಬಚ್ಚನ್ ಜುಲೈ 11ರಿಂದ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊದಲೇ ಅಮಿತಾಬ್ ಬಚ್ಚನ್ ಅವರು ನಾನಾ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಹಿನ್ನೆಲೆ ಬೇಗ ಗುಣಮುಖರಾಗಲು ಸಾಧ್ಯವಾಗುತ್ತಿಲ್ಲ. ಇನ್ನೂ ಐಶ್ವರ್ಯ ರೈ ಬಚ್ಚನ್ ಹಾಗೂ ಪುತ್ರಿ ಆರಾಧ್ಯ ಚೇತರಿಕೆ ಕಂಡಿದ್ದು, ಈಗಾಗಲೇ ಆಸ್ಪತ್ರೆಯಿಂದ ಮನೆಗೆ ವಾಪಸ್ಸಾಗಿದ್ದಾರೆ. ಅಮಿತಾಬ್ ಅವರು ಈ ಕುರಿತು ಒಂದು ಖುಷಿ ಸಂಗಿತಿ ಹಾಗೂ ನೋವಿನ ಸಂಗತಿಯನ್ನು ಹಂಚಿಕೊಂಡಿದ್ದಾರೆ. ‘ನನ್ನ ಸೊಸೆ ಮತ್ತು ಮೊಮ್ಮಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನನ್ನ ಕಣ್ಣೀರನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇವರೇ ನಿನ್ನ ಆಶೀರ್ವಾದ ಅನಂತವಾದುದು’ ಎಂದು ಬಿಗ್ ಬಿ ಸಂತಸ ಹಂಚಿಕೊಂಡಿದ್ದಾರೆ.
ಅಲ್ಲದೇ ಅಳಬಾರದು ಎಂದ ಆರಾಧ್ಯಾ ಆರಾಧ್ಯಾ ಹೇಳಿದ ಮಾತನ್ನು ಕೂಡ ಅಮಿತಾಬ್ ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ. ನೀವೂ ಬೇಗ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬರುತ್ತೀರಿ ಎಂದು ಆತ್ಮವಿಶ್ವಾಸ ತುಂಬಿರುವ ಆರಾಧ್ಯಾ, ಅಳಬಾರದು ಎಂದು ಸಮಾಧಾನಪಡಿಸಿರುವ ಬಗ್ಗೆಯೂ ಪೋಸ್ಟ್ ನಲ್ಲಿ ತಿಳಿಸಿದ್ದಾರೆ ಅಮಿತಾಬ್ ಬಚ್ಚನ್. ‘ಪುಟಾಣಿ ಮತ್ತು ಸೊಸೆ ಇಬ್ಬರೂ ಮನೆಗೆ ಮರಳಿದರು. ನನ್ನ ಕಣ್ಗಳಲಿ ನೀರು ಬಂತು. ಇದರಿಂದ ಪುಟಾಣಿ ನನ್ನನ್ನು ಅಪ್ಪಿಕೊಂಡು, ಅಳಬಾರದು ಎಂದು ಹೇಳಿದಳು. ನೀವು ಬೇಗನೆ ಮನೆಗೆ ಬರುತ್ತೀರಿ ಎಂದು ಭರವಸೆ ನೀಡಿದಳು. ನಾನು ಅವಳನ್ನು ನಂಬಲೇಬೇಕು’ ಎಂದು ಭಾವುಕರಾಗಿ ಬರೆದಿದ್ದಾರೆ.
ಆರ್ ಸಿಬಿ ಕಲಿಗಳ ಜತೆ ಕನ್ನಡಿಗರ ನಂದಿನಿ ದರ್ಬಾರ್ ಐಪಿಎಲ್ ಮೂಲಕ ವಿಶ್ವಮಟ್ಟಕ್ಕೆ ಲಗ್ಗೆ ಇಡಲು ಕೆಎಂಎಫ್ ಮಾಸ್ಟರ್ ಪ್ಲಾನ್
ಬೆಂಗಳೂರು: ಕರ್ನಾಟಕದ ಹೆಮ್ಮೆಯ ಪ್ರತೀಕವಾಗಿರುವ ಕೆಎಂಎಫ್ ನ ನಂದಿನಿ ಬ್ರ್ಯಾಂಡ್ ಇದೀಗ ಕ್ರಿಕೆಟ್ ಜಗತ್ತಿನ ರಣಕಣಕ್ಕೆ ಇಳಿದಿದೆ. ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು...








