ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೆ ಮತ್ತೊಮ್ಮೆ ಕೋವಿಡ್ ಪಾಸಿಟಿವ್ ಧೃಢಪಟ್ಟಿದ್ದು , ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ಧಾರೆ.. 2020ರ ಜುಲೈನಲ್ಲೂ ಅಮಿತಾಬ್ ಬಚ್ಚನ್ ಅವರು ಕೋವಿಡ್ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲೇ ಕೆಲ ದಿನ ಅಡ್ಮಿಟ್ ಆಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು…
ಇದೀಗ ಮತ್ತೊಮ್ಮೆ ಸೋಂಕಿಗೆ ಒಳಗಾಗಿದ್ದಾರೆ.. ತಮಗೆ ಕೋವಿಡ್ ಪಾಸಿಟಿವ್ ಆಗಿರುವ ವಿಚಾರವನ್ನು ಟ್ವೀಟ್ ಮಾಡಿ ಅಮಿತಾಬ್ ಬಚ್ಚನ್ ಸ್ಪಷ್ಟಪಡಿಸಿದ್ದಾರೆ.. “ ನನಗೆ ಕೋವಿಡ್ ಪಾಸಿಟಿವ್ ಬಂದಿದೆ. ನನ್ನ ಜೊತೆ ಯಾರ್ಯಾರು ಸಂಪರ್ಕದಲ್ಲಿದಿರೋ ಅವರೆಲ್ಲರೂ ದಯವಿಟ್ಟು ಕೊರೊನಾ ಪರೀಕ್ಷೆಗೆ ಒಳಗಾಗುವಂತೆ ವಿನಂತಿಸಿಕೊಳ್ಳುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಅಭಿಮಾನಿಗಳು ಬಿಗ್ ಬಿ ಆದಷ್ಟು ಬೇಗ ಗುಣಮುಖರಾಗಲಿ ಎಂದು ಪಾರ್ಥಿಸುತ್ತಿದ್ದಾರೆ. ಈಗಲೂ ಸಿನಿಮಾರಂಗದಲ್ಲಿ ಅಮಿತಾಬ್ ಸಕ್ರಿಯರಾಗಿದ್ದಾರೆ.. ಅವರ ನಟನೆಯ ಬ್ರಹ್ಮಾಸ್ತ್ರ , ಗುಡ್ಬೈ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ..
ಜೊತೆಗೆ ಕೌನ್ ಬನೇಗಾ ಕರೋಡ್ಪತಿ ಸೀಸನ್ 14ರ ಚಿತ್ರೀಕರಣದಲ್ಲಿ ಅಮಿತಾಬ್ ಬ್ಯುಸಿಯಾಗಿದ್ದರು.. ಆದ್ರೆ ಈಗ ಕೋವಿಡ್ ಪಾಸಿಟಿವ್ ಬಂದ ಕಾರಣ ಐಸೋಲೇಷನ್ ನಲ್ಲಿದ್ದಾರೆ. ಹೀಗಾಗಿ ಶೂಟಿಂಗ್ ಮುಂದೂಡಲಾಗಿದೆ..