Amithabh bacchan Birthady
ಬಾಲಿವುಡ್ ನ ಶೆಹೆನ್ ಶಾ , ಆಂಗ್ರಿ ಯಂಗ್ ಮ್ಯಾನ್ , ಬಾಲಿವುಡ್ ನ ಬಿಗ್ (Amithabh bacchan )ಅಂತಲೇ ಖ್ಯಾತಿ ಪಡೆದುರುವ ನಟ ಅಮಿತಾಬ್ ಬಚ್ಚನ್ ಅವರು ಇಂದು 78ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.. ಶೋಲೆ, ದೀವಾರ್ ಅಂತಹ ಸಿನೆಮಾಗಳ ಮೂಲಕ ಹೆಚ್ಚು ಖ್ಯಾತಿ ಗಳಿಸಿರುವ ಅಮಿತಾಬ್ ಅವರು ಅನೇಕ ರಿಯಾಲಿಟಿ ಶೋಗಳನ್ನೂ ನಡೆಸಿಕೊಟ್ಟಿದ್ದಾರೆ. ಅದರಲ್ಲಿ ಇಡೀ ದೇಶಾದ್ಯಂತ ಅತ್ಯಂತ ಯಶಸ್ಸು ಕಂಡ ಶೋ ಕೋನ್ ಬನೇಗಾ ಕೊರೋಡ್ ಪತಿ..
ಇಂತಹ ಅಮಿತಾಬ್ ಅವರ ಕೈಯ್ಯಲ್ಲಿ ಈಗಲೂ ಸಾಲು ಸಾಲು ಸಿನೆಮಾಗಳಿವೆ. ಬರ್ತಡೇಗೂ ಎರಡು ದಿನ ಮುಂಚೆ ಅಷ್ಟೇ ಸೌತ್ ಇಂಡಿಯಾದ ದೊಡ್ಡ ಪ್ರಾಜೆಕ್ಟ್‌ವೊಂದಕ್ಕೆ ಬಚ್ಚನ್ ಅವರು ಸಹಿ ಮಾಡಿದ್ದಾರೆ. ಬಿಟೌನ್‌ನ ಬಹುಬೇಡಿಕೆಯ ಹಾಗೂ ಅತ್ಯಂತ ಬ್ಯುಸಿ ನಟ ಅಮಿತಾಬ್ ಬಚ್ಚನ್ ಅವರು..
ಇದೀಗ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಿರುವ ಅಮಿತಾಬ್ ಬ್ರಹ್ಮಾಸ್ತ್ರದಲ್ಲಿ ಕಾಣಿಸಿಕೊಳ್ತಾಯಿದ್ದಾರೆ.. ಈ ಸಿನೆಮಾದಲ್ಲಿ ರಣ್ಬೀರ್ ಕಪೂರ್ , ಆಲಿಯಾ ಭಟ್ ಹಾಗೂ ಅಮಿತಾಬ್ ಬಚ್ಚನ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿನ ತಮ್ಮ ಪಾತ್ರದ ಶೂಟಿಂಗ್ ಸಹ ಮುಗಿಸಿಕೊಟ್ಟಿದ್ದಾರೆ ಬಿಗ್ ಬಿ.
ಮೈಸೂರಿನಲ್ಲಿ ಎರಡನೇ ಹಂತದ ಚಿತ್ರೀಕರಣ ಮುಗಿಸಿದ ‘ಮದಗಜ’
ವಿಶೇಷ ಅಂದ್ರೆ ಈ ಚಿತ್ರದಲ್ಲಿ ತೆಲುಗು ನಟ ನಾಗಾರ್ಜುನ ಸಹ ನಟಿಸಿದ್ದಾರೆ. ಇನ್ನೂ ಇಮ್ರಾನ್ ಹಶ್ಮಿ ನಾಯಕರಾಗಿ ನಟಿಸಿರುವ ‘ಚೆಹ್ರೆ’ ಸಿನಿಮಾದಲ್ಲೂ “ಬಿಟೌನ ಮೆಗಾಸ್ಟಾರ್” ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಸಹ ಬಹುತೇಕ ಮುಗಿದಿದೆ. ಬಚ್ಚನ್ ಬರ್ತ್ ಡೇ ಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರಿಂದ ಶುಭಾಷಯಗಳ ಮಹಾಪೂರವೇ ಹರಿದುಬರ್ತಾಯಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel