ಲವ್.. ಸಸ್ಪೆನ್ಸ್.. ಥ್ರಿಲ್ಲರ್ ಅಮೃತ್ ಅಪಾರ್ಟ್ ಮೆಂಟ್ಸ್ ಟೀಸರ್ ಔಟ್
ಜಿ-9 ಕಮ್ಯುನಿಕೆಷನ್ ಮೀಡಿಯಾ ಆಂಡ್ ಎಂಟರಟೆನಮೆಂಟ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ಅಮೃತ್ ಅಪಾರ್ಟ್ ಮೆಂಟ್ಸ್’ ಸಿನಿಮಾದ ಟೀಸರ್ ಮತ್ತು ಫಸ್ಟ್‍ಲುಕ್ ಪೋಸ್ಟರ್ ಇಂದು ರಿಲೀಸ್ ಆಗಿದೆ.
ಕನ್ನಡದಲ್ಲಿ ಅಭಿಮಾನಿಗಳನ್ನ ಮನರಂಜಿಸಿದ್ದ ಲಾಸ್ಟ್ ಬಸ್ ಸಿನಿಮಾ ಸಹ ನಿರ್ಮಾಪಕರಾದ ಗುರುರಾಜ ಕುಲಕರ್ಣಿ ಅವರು, ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.
ಇದು ಕುಲಕರ್ಣಿ ಅವರಯ ನಿರ್ದೇಶಿಸುತ್ತಿರುವ ಚೊಚ್ಚಲ ಸಿನಿಮಾವಾಗಿದ್ದು, ಕಥೆ ಬರೆದು ಬಂಡವಾಳ ಹೂಡಿದ್ದಾರೆ.
ಈ ಚಿತ್ರದಲ್ಲಿ ತಾರಕ್ ಪೊನ್ನಪ್ಪ, ಊರ್ವಶಿ ಗೋವರ್ಧನ ನಾಯಕ ನಾಯಕಿಯಾಗಿ ನಟಿಸಿದ್ದಾರೆ. ವಿಶಿಷ್ಟ ನಟನೆಗೆ ಹೆಸರಾಗಿರುವ ರಾಜ್ಯ ಪ್ರಶಸ್ತಿ ವಿಜೇತ, ಬಾಲಾಜಿ ಮನೋಹರ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಈ ಚಿತ್ರದ ಮತ್ತೊಂದು ವಿಶೇಷತೆಯಾಗಿದೆ.

ಬಹುಮುಖ ಪ್ರತಿಭೆಯ ಸಂಪತ್ ಕುಮಾರ್ ತಮ್ಮ ಎಂದಿನ ನೈಜ ನಟನೆಯಿಂದ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಇದೊಂದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಜೊತೆಗೆ ಥ್ರಿಲ್ಲಿಂಗ್ ಚಿತ್ರಗಳ ಇಷ್ಟಪಡುವರಿಗೆ ಮನರಂಜನೆಯ ರಸದೌತಣವನ್ನೇನೀಡಲಿದೆ.
ಮಾನಸಾ ಜೋಷಿ ಪೊಲೀಸ್ ಎ.ಸಿ.ಪಿ, ಪಾತ್ರದಲ್ಲಿ ತಮ್ಮ ಗತ್ತು-ಗೈರತ್ತು ತೋರಿದ್ದಾರೆ. ಸೀತಾ ಕೋಟೆ ಲಾಯರ್ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ಉಳಿದಂತೆ ರಂಗಭೂಮಿ ಕಲಾವಿದರಾದ, ಸಿತಾರಾ, ಮಾಲತೇಶ, ರಾಜ ನೀನಾಸಂ, ಜಗದೀಶ ಜಾಲಾ, ರಂಗಸ್ವಾಮಿ, ಶಂಕರ ಶೆಟ್ಟಿ, ವೈಷ್ಣವಿ ಮೊದಲಾದ ಕಲಾವಿದರು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಈ ಚಿತ್ರಕ್ಕೆ ಬಿ, ಎಸ್, ಕೆಂಪರಾಜ್ ಅವರ ಸಂಕಲನವಿದ್ದು, ಅರ್ಜುನ್ ಅಜಿತ್ ಅವರ ಛಾಯಾಗ್ರಹಣವಿದೆ. ಎಸ್. ಡಿ ಅರವಿಂದ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ಇನ್ನೂ ಸೌಂಡ್ ಡಿಸೈನರ್ ರಾಜನ್ ವಿಶೇಷ ಎಫೆಕ್ಟ್ಸ್ ಗಳನ್ನು ಈ ಚಿತ್ರಕ್ಕಾಗಿಯೇ ಬಳಿಸಿದ್ದು, ಈ ಸಿನಿಮಾ ಪ್ರೇಕ್ಷಕರನ್ನ ಭರ್ಜರಿಯಾಗಿ ರಂಜಿಸಲಿದೆ.
ಟೀಸರ್ ಹೇಗಿದೆ..?
ಸದ್ಯ ಬಿಡುಗಡೆಯಾಗಿರುವ ಟೀಸರ್ ನಲ್ಲಿ ಸಿನಿಮಾದಲ್ಲಿನ ಪ್ರಮುಖ ಪಾತ್ರಗಳ ದರ್ಶನವಾಗಿದೆ.
ನಿರ್ದೇಶಕ ಗುರುರಾಜ್ ಕುಲಕರ್ಣಿ ಅವರು ಪಕ್ಕಾ ಲೆಕ್ಕಾಚಾರದೊಂದಿಗೆ, ಸಿನಿಮಾ ಮಾಡಿರೋದು ಗೊತ್ತಾಗುತ್ತಿದೆ.
ಟೀಸರ್ ಸಿನಿಮಾ ಮೇಲಿನ ನಿರೀಕ್ಷೆಗಳನ್ನ ಹೆಚ್ಚಿಸಿದ್ದು, ಬಿ.ಎಸ್.ಕೆಂಪರಾಜ್ ಅವರ ಸಂಕಲನ ಅದ್ಭುತವಾಗಿದೆ.
ಮುಖ್ಯವಾಗಿ ಎಸ್.ಡಿ.ಅರವಿಂದ್ ಅವರ ಹಿನ್ನೆಲೆ ಸಂಗೀತ ನೋಡುಗರಿಗೆ ಹೊಸ ಅನುಭವ ನೀಡುತ್ತದೆ.









