Amruth Apartments
ಬೆಳ್ಳಿತೆರೆಗಪ್ಪಳಿಸಲು ಮತ್ತೊಂದು ಕನ್ನಡದ ಫ್ಯಾಮಿಲಿ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಸಜ್ಜಾಗಿದೆ.
ಹೌದು ಕುತೂಹಲಗಳಿಂದ ಭರಪೂರವಾಗಿರುವ ಸ್ಯಾಂಡಲ್ ವುಡ್ ನ ಹೊಸ ಚಿತ್ರ ಅಮೃತ್ ಅಪಾರ್ಟ್ ಮೆಂಟ್.
ಜಿ-9 ಕಮ್ಯುನಿಕೆಷನ್ ಮೀಡಿಯಾ ಆಂಡ್ ಎಂಟರಟೆನಮೆಂಟ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ಅಮೃತ್ ಅಪಾರ್ಟ್ ಮೆಂಟ್ಸ್ನ ಶೂಟಿಂಗ್ ಈಗಾಗಲೇ ಮುಕ್ತಾಯಗೊಂಡಿದೆ.

ಅಲ್ಲದೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೂ ಮುಗಿಸಿಕೊಂಡು, ಸೆನ್ಸಾರ್ ಮನೆಗೆ ತಲುಪಿದೆ ಅಮೃತ್ ಅಪಾರ್ಟ್ ಮೆಂಟ್ಸ್.
ಕನ್ನಡದಲ್ಲಿ ಅಭಿಮಾನಿಗಳನ್ನ ಮನರಂಜಿಸಿದ್ದ ಲಾಸ್ಟ್ ಬಸ್ ಸಿನಿಮಾ ಸಹ ನಿರ್ಮಾಪಕರಾದ ಗುರುರಾಜ ಕುಲಕರ್ಣಿ ಅವರು, ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

ಈ ಮೂಲಕ ಚೊಚ್ಚಲ ಸಿನಿಮಾ ನಿರ್ದೇಶಿರುವ ಗುರುರಾಜ್ ಅವರು ಅಮೃತ್ ಅಪಾರ್ಟ್ ಮೆಂಟ್ಸ್ ( Amruth Apartments) ಚಿತ್ರಕ್ಕೆ ಖುದ್ದು ಬಂಡವಾಳ ಹೂಡಿದ್ದು, ಕಥೆ ರಚಿಸಿದ್ದಾರೆ.
ಈ ಚಿತ್ರದಲ್ಲಿ ತಾರಕ ಪೊನ್ನಪ್ಪ, ಊರ್ವಶಿ ಗೋವರ್ಧನ ನಾಯಕ ನಾಯಕಿಯಾಗಿ ನಟಿಸಿದ್ದಾರೆ.
ವಿಶಿಷ್ಟ ನಟನೆಗೆ ಹೆಸರಾಗಿರುವ ರಾಜ್ಯ ಪ್ರಶಸ್ತಿ ವಿಜೇತ, ಬಾಲಾಜಿ ಮನೋಹರ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಈ ಚಿತ್ರದ ಮತ್ತೊಂದು ವಿಶೇಷತೆ.
ಇನ್ನೂ 65 ದಿನಗಳ ಕಾಲ ಬೆಂಗಳೂರಿನ ಸುತ್ತಮುತ್ತಲೂ ಸಿನಿಮಾದ ಶೂಟಿಂಗ್ ಕಾರ್ಯ ನೆರವೇರಿದೆ.

ಇದೊಂದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಜೊತೆಗೆ ಥ್ರಿಲ್ಲಿಂಗ್ ಚಿತ್ರಗಳ ಇಷ್ಟಪಡುವರಿಗೆ ಮನರಂಜನೆಯ ರಸದೌತಣವನ್ನೇನೀಡಲಿದೆ.
ಬಹುಮುಖ ಪ್ರತಿಭೆಯ ಸಂಪತ್ ಕುಮಾರ್ ತಮ್ಮ ಎಂದಿನ ನೈಜ ನಟನೆಯಿಂದ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಸಿನಿಮಾರಂಗದಿಂದ ದೂರಾಗಿ ಮತ್ತೊಂದು ಗುರಿ ಮುಟ್ಟಿದ “ಶಾಸ್ತ್ರಿ ಚೆಲುವೆ” ಮಾನ್ಯ ಜೀವನ ಹೇಗಿದೆ ಗೊತ್ತಾ..?
ಮಾನಸಾ ಜೋಷಿ ಪೋಲಿಸ್ ಎ.ಸಿ.ಪಿ, ಪಾತ್ರದಲ್ಲಿ ತಮ್ಮ ಗತ್ತು-ಗೈರತ್ತು ತೋರಿದ್ದಾರೆ. ಸೀತಾ ಕೋಟೆ ಲಾಯರ್ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ಉಳಿದಂತೆ ರಂಗಭೂಮಿ ಕಲಾವಿದರಾದ, ಸಿತಾರಾ, ಮಾಲತೇಶ, ರಾಜ ನೀನಾಸಂ, ಜಗದೀಶ ಜಾಲಾ, ರಂಗಸ್ವಾಮಿ, ಶಂಕರ ಶೆಟ್ಟಿ, ವೈಷ್ಣವಿ ಮೊದಲಾದ ಕಲಾವಿದರು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಈ ಚಿತ್ರಕ್ಕೆ ಬಿ, ಎಸ್, ಕೆಂಪರಾಜ್ ಅವರ ಸಂಕಲನವಿದ್ದು, ಅರ್ಜುನ್ ಅಜಿತ್ ಅವರ ಛಾಯಾಗ್ರಹಣವಿದೆ.
ಎಸ್. ಡಿ ಅರವಿಂದ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ಇನ್ನೂ ಸೌಂಡ್ ಡಿಸೈನರ್ ರಾಜನ್ ವಿಶೇಷ ಎಫೆಕ್ಟ್ಸ್ ಗಳನ್ನು ಈ ಚಿತ್ರಕ್ಕಾಗಿಯೇ ಬಳಿಸಿದ್ದು, ಈ ಸಿನಿಮಾ ಪ್ರೇಕ್ಷಕರನ್ನ ಭರ್ಜರಿಯಾಗಿ ರಂಜಿಸಲಿದೆ.







