ಕಿವಿಗೆ ಸಖತ್ ಇಂಪು ನೀಡ್ತಿದೆ “ಅಮೃತ ಅಪಾರ್ಟ್ ಮೆಂಟ್ಸ್” ನ “ಶುರುವಾಗಬೇಕು ಮತ್ತೊಮ್ಮೆ ನಮ್ಮ ಒಲವು” ಹಾಡು..!
ಹೊಸತನದೊಂದಿಗೆ , ಹೊಸಬರ ತಂಡದಿಂದಲೇ ಮೂಡಿಬಂದಿರುವ ಕನ್ನಡದ ಹೊಸ ಸಿನಿಮಾ ಸಿನಿಮಾ ಅಮೃತ್ “ಅಪಾರ್ಟ್ ಮೆಂಟ್ಸ್” ಸಿನಿಮಾದ “ಶುರುವಾಗಬೇಕು ಮತ್ತೊಮ್ಮೆ ನಮ್ಮ ಒಲವು” ಸಿನಿಮಾದ ಹಾಡು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿ ಪ್ರೇಕ್ಷಕರನ್ನ ಮೋಡಿ ಮಾಡ್ತಿದೆ..
ಸಖತ್ ಮೆಲೋಡಿಯಸ್ ಆಗಿರುವ ಈ ಹಾಡು ಕಿವಿಗಳಿಗೆ ಇಂಪು ನೀಡ್ತಿದೆ. ಇಷ್ಟು ಮಧುರವಾದ ಹಾಡಿಗೆ ವಾಣಿ ಹರಿಕೃಷ್ಣ , ಅಜಯ್ ವಾರಿಯರ್ ಧ್ವನಿಯಾಗಿದ್ದಾರೆ. ಸಾಫ್ಟ್ ಮ್ಯೂಸಿಕ್ ಜೊತೆಗೆ ಮನಮುಟ್ಟುವ ಲಿರಿಕ್ಸ್ ಜನರಿಗೆ ಹೆಚ್ಚು ಇಷ್ಟವಾಗ್ತಿದೆ.
ಇನ್ನೂ ಗಂಡ-ಹೆಂಡತಿಯ ಮಧ್ಯದ ಮುನಿಸು ಕರಗುವ ಸನ್ನಿವೇಶಕ್ಕೆ ತಕ್ಕಂತೆ, ಇಡೀ ಸಿನೆಮಾದ ಕಥೆಯ ಸಾರಾಂಶವನ್ನು ಹೇಳುವಂತಹ, ಪ್ರೇಕ್ಷನ ಮನ ತಟ್ಟುವಂತಹ ಒಂದು ವಿಶೇಷ ಹಾಡು ಇದಾಗಿದೆ. ಅಲ್ದೇ ಇಂತಹ ಒಂದು ವಿನೂತನ ಪ್ರೇಮಗೀತೆಗೆ, ಹೂ-ಹೃದಯದ ಪ್ರೇಮಕವಿ ಕೆ.ಕಲ್ಯಾಣರವರೇ ಸೂಕ್ತ ಎಂದು ಎನಿಸಿ ಅವರ ಬಳಿ ಹೋದೆ ಎಂದು ಹೇಳ್ತಾರೆ ನಿರ್ದೇಶಕ ಗುರುರಾಜ್ ಕುಲಕರ್ಣಿ ಅವರು.
ಯುವಪ್ರೇಮಿಗಳ ಪ್ರೀತಿ-ಪ್ರೇಮ-ಮುನಿಸು-ತಲ್ಲಣಗಳ ಭಾವಕ್ಕೆ ತಕ್ಕಂತೆ ಗೀತೆಯ ಸಾಲುಗಳನ್ನು ಕೆ.ಕಲ್ಯಾಣ ಬರೆದಿದ್ದಾರೆ. ಅದಕ್ಕೆ ಪೂರಕವಾಗಿ ಸಂಗೀತ ನಿರ್ದೇಶಕ ಎಸ್.ಡಿ.ಅರವಿಂದ ಕೇಳುಗರನ್ನು ಮೋಡಿ ಮಾಡುವಂತಹ ಸಂಗೀತ ನೀಡಿದ್ದಾರೆ.
ನವೆಂಬರ ತಿಂಗಳ ಕೊನೆಯ ವಾರದಲ್ಲಿ “ಅಮೃತ ಅಪಾರ್ಟಮೇಂಟ್ಸ್” ಸಿನಿಮಾ ಬಿಡುಗಡೆಯಾಗಲಿದ್ದು, ಚಿತ್ರ ತಂಡ ಪ್ರೇಕ್ಷಕರ ಮನಸ್ಸು ಗೆಲ್ಲುವ ಉತ್ಸಾಹದಲಿದೆ. ಗುರುರಾಜ್ ಅವರು ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
ಸಿನಿಮಾದಲ್ಲಿ KGF ನಲ್ಲಿ ನಟಿಸಿರುವ ತಾರಕ್ ಪೊನ್ನಪ್ಪ ನಾಯಕನಾಗಿ ಕಾಣಿಸಿಕೊಂಡಿದ್ರೆ ನಾಯಕಿಯಾಗಿ ಊರ್ವಶಿ ಸ್ಯಾಂಡಲ್ ವುಡ್ ಪಾದಾರ್ಪಣೆ ಮಾಡ್ತಾಯಿದ್ದಾರೆ.