ನಗರದ ಕೆಲವು ರಸ್ತೆಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ತಡೆ | ಪರ್ಯಾಯ ಮಾರ್ಗದ ವ್ಯವಸ್ಥೆ
ಬೆಂಗಳೂರು: ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದು, ನಗರದ ರೇಸ್ ಕೋರ್ಸ್ ರಸ್ತೆಯ ಎರಡೂ ಬದಿಗಳಲ್ಲಿ ಬಿಜೆಪಿ ಬಾವುಟಗಳು ಮತ್ತು ತೋರಣಗಳು ರಾರಾಜಿಸುತ್ತಿವೆ. ಹಾಗೇ ಖಾಕಿ ಪಡೆ ಪರೇಡ್ ಶುರುವಿಟ್ಟುಕೊಂಡಿದೆ.
ನಗರದದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿದ್ದು, ರೇಸ್ ಕೋರ್ಸ್ ರಸ್ತೆ, ಚಾಲುಕ್ಯ ಸರ್ಕಲ್ ಸೇರಿಂದತೆ ಅಮಿತ್ ಶಾ ಸಂಚರಿಸುವ ಮತ್ತು ಅವರ ಕಾರ್ಯಕ್ರಮಗಳು ಇರುವ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಹಾಗೇ ಯಾವುದೇ ಅಹಿತರ ಘಟನೆಯಾಗದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಸುಗಮ ಸಂಚಾರ ವ್ಯವಸ್ಥೆಗೆ ಅಡಚಣೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ.
ಅಮಿತ್ ಶಾ ಸಂಚರಿಸುವ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಸಂಚಾರಕ್ಕೆ ನಿರ್ಭಂದಿಸಲಾಗಿದ್ದು, ಜನರಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಜನರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು 1000ಕ್ಕೂ ಹೆಚ್ಚು ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಹಾಗೇ ಟ್ರಾಫಿಕ್ ವಿಭಾಗದಿಂದ 30 PSI, 20 ಇನ್ ಸ್ಪೆಕ್ಟರ್ ಗಳು, 5 ಎಸಿಪಿ, 300ಕ್ಕೂ ಹೆಚ್ಚು ಹೆಡ್ ಕಾನ್ ಸ್ಟೆಬಲ್, 200 ಎಎಸ್ ಐಗಳು, 400ಕ್ಕು ಹೆಚ್ಚು ಪಿಸಿಗಳನ್ನು ನೇಮಿಸಲಾಗಿದೆ. ಭದ್ರತೆಗಾಗಿ ನಗರದಾದ್ಯಂತ ಲಾ ಅಂಡ್ ಆರ್ಡರ್ ನ 1,500ಕ್ಕೂ ಹೆಚ್ಚು ಪೊಲೀಸರ ನಿಯೋಜಿಸಲಾಗಿದೆ. 5 ಡಿಸಿಪಿಗಳು, 50 ಇನ್ ಸ್ಪೆಕ್ಟರ್ಗಳು, 10 ಎಸಿಪಿಗಳು, 500 ಹೆಡ್ ಕಾನಸ್ಟೆಬಲ್, 300 ಎಎಸ್ ಐ, 700ಕ್ಕೂ ಹೆಚ್ಚು ಪಿಸಿಗಳನ್ನು ನೇಮಿಸಲಾಗಿದೆ. ಅಲ್ಲದೇ 5 ಕೆಎಸ್ ಆರ್ಪಿ ತುಕುಡಿ, 4 ಸಿಎಆರ್ ತುಕುಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.








