ಪ್ರಣಬ್ ಮುಖರ್ಜಿ ಅವರಿಗೆ ರೇಖಾಚಿತ್ರದೊಂದಿಗೆ ವಿದಾಯ ಹೇಳಿದ ಡೈರಿ ಬ್ರಾಂಡ್ ಅಮುಲ್
ಹೊಸ ದಿಲ್ಲಿ, ಸೆಪ್ಟೆಂಬರ್02: ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಮ್ಮ 84 ನೇ ವಯಸ್ಸಿನಲ್ಲಿ ಸೋಮವಾರ ನಿಧನರಾದರು. ಮಂಗಳವಾರ ಮಧ್ಯಾಹ್ನ ದೆಹಲಿಯಲ್ಲಿ ಪೂರ್ಣ ಮಿಲಿಟರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿತು. ಡೈರಿ ಬ್ರಾಂಡ್ ಅಮುಲ್ ಮುಖರ್ಜಿಗೆ ರೇಖಾಚಿತ್ರದೊಂದಿಗೆ ವಿದಾಯ ಹೇಳಿದೆ.
ಮುಖರ್ಜಿ ಅವರ ರಾಜಕೀಯ ವೃತ್ತಿಜೀವನವನ್ನು ರೇಖಾಚಿತ್ರ ಒಳಗೊಂಡಿದೆ. ಭಾರತದ ಪ್ರಕಾಶಮಾನವಾದ ರತ್ನಗಳಲ್ಲಿ ಒಬ್ಬರಾದ ನಿಮಗೆ ವಿದಾಯ ಎಂದು ಬರೆಯಲಾಗಿದೆ. ಪ್ರಣಬ್ ಮುಖರ್ಜಿ 1935 – 2020 ಎಂದು ಬರೆದು ಈ ಮಹಾನ್ ನೇತಾರನಿಗೆ ಭಾವಪೂರ್ಣ ಅಂತಿಮ ನಮನವನ್ನು ಸಲ್ಲಿಸಲಾಗಿದೆ.
ಪ್ರಣಬ್ ಮುಖರ್ಜಿ ಆಗಸ್ಟ್ 10 ರಂದು ದೆಹಲಿ ಕಂಟೋನ್ಮೆಂಟ್‌ನ ಸೇನೆಯ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದರು ಮತ್ತು ಮೆದುಳಿನ ಹೆಪ್ಪುಗಟ್ಟುವಿಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ನಂತರ ಅವರಿಗೆ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿದ್ದು, ಶಸ್ತ್ರಚಿಕಿತ್ಸೆಗೆ ಮೊದಲು ಕೋವಿಡ್-19 ಸೋಂಕು ದೃಢಪಟ್ಟಿತ್ತು.
#Amul Topical: Tribute to a great politician, President and a statesman. pic.twitter.com/Aprtog3jbA
— Amul.coop (@Amul_Coop) September 1, 2020
ಮುಖರ್ಜಿ ಅವರ ರಾಜಕೀಯ ಜೀವನವು ಐದು ದಶಕಗಳಲ್ಲಿ ವ್ಯಾಪಿಸಿದೆ. ಅವರು ಭಾರತ ಸರ್ಕಾರದಲ್ಲಿ ಹಲವಾರು ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದರು. 2009 ರಿಂದ 2012 ರವರೆಗೆ ಕೇಂದ್ರ ಹಣಕಾಸು ಸಚಿವರಾಗಿದ್ದ ಅವರು 2012 ಮತ್ತು 2017 ರ ನಡುವೆ ಭಾರತದ 13 ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು.
ಮುಖರ್ಜಿ ಅವರಿಗೆ 2008 ರಲ್ಲಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಮತ್ತು ಕಳೆದ ವರ್ಷ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.








