ಗುಜರಾತ್ ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿ ಅಮುಲ್ ಹಾಲಿನ ಬೆಲೆ ಏರಿಕೆ…
ಗುಜರಾತ್ ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿ ಅಮುಲ್ ಹಾಲಿನ ದರವನ್ನು ಹೆಚ್ಚಿಸಲಾಗಿದೆ. ಹಾಲಿನ ಬೆಲೆ (ಪೂರ್ಣ ಕೆನೆಯ ಎಮ್ಮೆ ಹಾಲು) ಲೀಟರ್ಗೆ 2 ರೂ ಹೆಚ್ಚಾಗಿದೆ. ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ ಎಂಡಿ R S ಸೋಧಿ ಇದನ್ನು ಖಚಿತಪಡಿಸಿದ್ದಾರೆ.
ಗುಜರಾತ್ ಕೋ ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್, ಅಮುಲ್ ಬ್ರ್ಯಾಂಡ್ ಅಡಿಯಲ್ಲಿ ಅಮುಲ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಈಗ ಒಂದು ಲೀಟರ್ ಫುಲ್ ಕ್ರೀಮ್ ಅಮುಲ್ ಹಾಲಿನ (ಅಮುಲ್ ಗೋಲ್ಡ್) ಪ್ಯಾಕೆಟ್ ಗೆ 61 ರೂಪಾಯಿ ಬದಲಿಗೆ 63 ರೂಪಾಯಿ ಪಾವತಿಸಬೇಕಾಗುತ್ತದೆ. ಆದರೆ, ವಿಧಾನಸಭೆ ಚುನಾವಣೆ ತಯಾರಿ ಹಿನ್ನಲೆಯಲ್ಲಿ ಗುಜರಾತ್ ನಲ್ಲಿ ಬೆಲೆ ಏರಿಕೆ ಮಾಡಲಾಗಿಲ್ಲ.
ಈ ವರ್ಷದ ಆಗಸ್ಟ್ 17 ರಂದು ಅಮುಲ್ ಹಾಲಿನ ದರವನ್ನು ಲೀಟರ್ಗೆ 2 ರೂಪಾಯಿ ಹೆಚ್ಚಿಸುವುದಾಗಿ ಘೋಷಿಸಿತು. ಇನ್ನೂ ಅಮುಲ್ ಹೊರತುಪಡಿಸಿ, ಮದರ್ ಡೈರಿಯು ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಲೀಟರ್ ಹಾಲಿನ ಬೆಲೆಯನ್ನು 2 ರೂಪಾಯಿ ಹೆಚ್ಚಿಸಿದೆ. ಹಾಲು ಸಂಗ್ರಹಣೆ ಮತ್ತು ಉತ್ಪಾದನೆಯ ವೆಚ್ಚದಿಂದಾಗಿ ಬೆಲೆಗಳು ಹೆಚ್ಚಾಗುತ್ತಿವೆ ಎಂದು ಡೈರಿ ಹೇಳಿದೆ.
Amul: Amul milk prices rise in all states except Gujarat