ಉಡುಪಿ : ರಾಜ್ಯದ ಎಲ್ಲೆಡೆ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಕಾರ್ಯಕರ್ತನೊಬ್ಬ ಕಾಲಿಗೆ ಮೊಬೈಲ್ (Mobile) ಕಟ್ಟಿಕೊಂಡು ಲುಂಗಿ ತೊಟ್ಟು, ಕೇಸರಿ ಶಾಲು ಹಾಕಿಕೊಂಡು ಸಿಕ್ಕಿ ಹಾಕಿಕೊಂಡಿದ್ದಾನೆ.
ಯುವಕನನ್ನು ಪೊಲೀಸರು (Police) ತಡೆದು ಮರಳಿ ಕಳುಹಿಸಿದ ಘಟನೆ ಉಡುಪಿ (Udupi) ಜಿಲ್ಲೆಯಲ್ಲಿ ನಡೆದಿದೆ. ಕರ್ನಾಟಕ ವಿಧಾನಸಭೆ ಚನಾವಣೆಯ (Karnataka Election) ಫಲಿತಾಂಶ (Result) ಆರಂಭವಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ಏಜೆಂಟ್ ಕಾಲಿಗೆ ಮೊಬೈಲ್ ಕಟ್ಟಿಕೊಂಡು ಲುಂಗಿ ತೊಟ್ಟು ಮತ ಎಣಿಕಾ ಕೇಂದ್ರಕ್ಕೆ ಬಂದಿದ್ದ. ಕೂಡಲೇ ಆತನ ಬಳಿಯಿದ್ದ ಮೊಬೈಲ್ ಪತ್ತೆ ಹಚ್ಚಿದ್ದಾರೆ.
ಈ ಹಿನ್ನೆಲೆಯಲ್ಲಿ ಸದಾಶಿವ ಕಂಚಿಕೋಡು ಎಣಿಕಾ ಕೇಂದ್ರದ ದ್ವಾರದಲ್ಲೇ ಏಜೆಂಟ್‌ನನ್ನು ಪೊಲೀಸರು ತಡೆ ಹಿಡಿದು ಮರಳಿ ಕಳುಹಿಸಿದ್ದಾರೆ.








