ಚಿಕ್ಕಮಗಳೂರು : ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ಹಳ್ಳ ಕೊಳ್ಳಗಳು ಹುಕ್ಕಿ ಹರಿಯುತ್ತಿವೆ. ಇದರ ಮಧ್ಯೆ ಜಿಲ್ಲೆಯಲ್ಲಿ ಮಹಾಮಳೆಗೆ ಮೂರನೇ ಬಲಿಯಾಗಿದೆ. ಮೂಡಿಗೆರೆ ತಾಲೂಕಿನ ಜನ್ನಾಪುರದ ಅಗ್ರಹಾರ ದೇವಸ್ಥಾನದ ಸಮೀಪ ವೃದ್ಧೆವೊಬ್ಬರು ನದಿಗೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. 87 ವರ್ಷದ ರುದ್ರಮ್ಮ ಮೃತ ವೃದ್ಧೆಯಾಗಿದ್ದಾರೆ.
ಇಂದು ರುದ್ರಮ್ಮ ಜನ್ನಾಪುರದ ಅಗ್ರಹಾರ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಕಾಲು ಜಾರಿ ಹೇಮಾವತಿ ನದಿಗೆ ಬಿದ್ದು ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ. ಗೋಣಿಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆಸಿದ್ದು, ಸದ್ಯ ಶೋಧ ಕಾರ್ಯ ಮುಂದುವರಿದೆ.








