ಬಳ್ಳಾರಿ: ಬಸ್ಸಿನಲ್ಲಿ (Bus) ಸಿಕ್ಕ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದ ವ್ಯಕ್ತಿಯನ್ನು ಪೊಲೀಸರು ಸನ್ಮಾನಿಸಿದ್ದಾರೆ.
ವಿಜಯನಗರ (Vijayanagara) ಜಿಲ್ಲೆಯ ಹೊಸಪೇಟೆಯಲ್ಲಿ (Hospet) ಈ ಘಟನೆ ಬೆಳಕಿಗೆ ಬಂದಿದೆ. ಹೊಸಪೇಟೆ ತಾಲೂಕಿನ ಮಲಪನಗುಡಿಯ ರಾಘವೇಂದ್ರ ಬಸ್ನಲ್ಲಿ ಸಿಕ್ಕಿದ್ದ ಬಂಗಾರ, ಬೆಳ್ಳಿ ಆಭರಣದ ವಸ್ತುಗಳನ್ನು ಹಿಂದುರಿಗಿಸಿ ಪ್ರಾಮಾಣಿಕತೆ ಮೆರೆದ್ದ ರಾಘವೇಂದ್ರ ಎಂಬುವವರನ್ನು ಸನ್ಮಾನಿಸಲಾಗಿದೆ. ಇವರು 45 ಗ್ರಾಂ ಮೌಲ್ಯದ ಮೂರು ಬಂಗಾರದ ಚೈನ್, 5 ಗ್ರಾಂನ 1 ಜೊತೆ ಬಂಗಾರದ ಕಿವಿಯೋಲೆ, 10 ಗ್ರಾಂನ ಮೂರು ಬಂಗಾರದ ಉಂಗುರ, 80 ಗ್ರಾಂ ಮೌಲ್ಯದ ಬೆಳ್ಳಿ ಕಡಗ, ದೇವಿಯ ಮೂರ್ತಿ ಇದ್ದ ಬ್ಯಾಗ್ ನ್ನು ಹಿಂದಿರುಗಿಸಿದ್ದರು.
ಹೂವಿನ ಹಡಗಲಿಯ ಮುದುಕಪ್ಪ ಶೇಗಡಿ ಎನ್ನುವವರು ಹೂವಿನ ಹಡಗಲಿಯಿಂದ ಹೊಸಪೇಟೆಗೆ ಬಸ್ಸಿನಲ್ಲಿ ಮಗನ ಮನೆಗೆ ತೆರಳುತ್ತಿದ್ದರು. ಆದರೆ, ಹೊಸಪೇಟೆಯ ಚೆಕ್ ಪೋಸ್ಟ್ ಬಳಿ, ಬಸ್ ಇಳಿಯುವಾಗ ಮುದುಕಪ್ಪ ಬ್ಯಾಗ್ ಮರೆತು ಇಳಿದಿದ್ದಾರೆ. ಈ ವೇಳೆ ಬಸ್ ನಲ್ಲಿ ಕೋರಿಯರ್ ತರಲು ರಾಘವೇಂದ್ರ ಬಂದಿದ್ದರು. ಈ ವೇಳೆ ಅಪರಿಚತ ವ್ಯಕ್ತಿಯೊಬ್ಬರು ಬ್ಯಾಗ್ ನ್ನು ರಾಘವೇಂದ್ರನ ಕೈಗೆ ಬ್ಯಾಗ್ ಕೊಟ್ಟು ಬಸ್ ಇಳಿದು ಹೋಗಿದ್ದಾರೆ.
ಅದೇ ಸ್ಥಳದಲ್ಲಿ ರಾಘವೇಂದ್ರ ಬ್ಯಾಗ್ ಹಿಡಿದುಕೊಂಡು ಅರ್ಧ ಗಂಟೆ ಕಾದಿದ್ದ. ಅರ್ಧ ಗಂಟೆ ಕಾದ್ರೂ ಬಸ್ ನಿಲ್ದಾಣದ ಬಳಿ ಯಾರೂ ಬರಲಿಲ್ಲ. ಆಗ ಸಹಜವಾಗಿ ಬ್ಯಾಗ್ ಓಪನ್ ಮಾಡಿ ನೋಡಿದ ರಾಘವೇಂದ್ರಗೆ ಅದರಲ್ಲಿ ಚಿನ್ನಾಭರಣ ಇರುವುದು ಕಂಡಿದೆ. ಕೂಡಲೇ ಅದನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಆನಂತರ ಪೊಲೀಸರು ಕಳೆದುಕೊಂಡ ವ್ಯಕ್ತಿಗೆ ವಸ್ತುಗಳನ್ನೆಲ್ಲ ತಲುಪಿಸಿದ್ದಾರೆ. ರಾಘವೇಂದ್ರ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.