ಪತ್ನಿ ಚುಡಾಯಿಸಿದ್ದಕ್ಕೆ ಎಣ್ಣೆ ಪಾರ್ಟಿಯಲ್ಲಿ ಬಿತ್ತು ಎರಡು ಹೆಣ….
ಮೈಸೂರು : ಪತ್ನಿ ಛೇಡಿಸಿದವನ್ನ ಎಣ್ಣೆ ಪಾರ್ಟಿಯಲ್ಲಿ ಕೊಚ್ಚಿ ಕೊಂದಿರುವ ಘಟನೆ ಮೈಸೂರಿನ ಬೋಗಾದಿ ರಸ್ತೆಯಲ್ಲಿ ನಡೆದಿದೆ. ಸ್ನೇಹಿತರ ನಡುವೆ ಎಣ್ಣೆ ಪಾರ್ಟಿಯಲ್ಲಿ ನಡೆದ ಜಗಳ ಡಬಲ್ ಮರ್ಡರ್ ನಲ್ಲಿ ಅಂತ್ಯಗೊಂಡಿದೆ. ಹೆಚ್.ಡಿ. ಕೋಟೆ ತಾಲೂಕಿನ ಕೊತ್ತೆಗಾಲ ಗ್ರಾಮದ ರವಿ ಮತ್ತು ಬಸವ ಹತ್ಯೆಯಾದವರು.
ಮೈಸೂರಿನ ಬೋಗಾದಿ ಮುಖ್ಯ ರಸ್ತೆಯಲ್ಲಿ ನಾಲ್ವರು ಸ್ನೇಹಿತರು ಮಧ್ಯ ಸೇವನೆ ಮಾಡುತ್ತ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಈ ವೇಳೇ ಮಹೇಶನ ಪತ್ನಿಯನ್ನ ಚುಡಾಯಿಸುತ್ತಿದ್ದದ್ದು ಪ್ರಸ್ತಾಪವಾಗಿದೆ. ಈ ಸಮಯದಲ್ಲಿ ಸ್ನೇಹಿತರ ನಡುವೆ ಜಗಳ ನಡೆದಿದೆ. ಮಹೇಶ ಪಿಕಾಸಿಯಿಂದ ರವಿ ತಲೆಗೆ ಜೋರಾಗಿ ಹೊಡೆದಿದ್ದಾನೆ. ಇದನ್ನ ಬಿಡಿಸಲು ಬಂದ ಬಸವ ನ ಮೇಲೂ ಹಲ್ಲೆ ಮಾಡಿದ್ದಾರೆ. ಇಬ್ಬರು ಕೂಡ ಕೊಲೆಯಾಗಿದ್ದಾರೆ.
ಈ ಪ್ರಕರಣದ ಸಂಬಂಧ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆ








