ಉದ್ಯೋಗದ ಆಮಿಷವೊಡ್ಡಿ ಮಹಿಳೆಯ ಮೇಲೆ ಅತ್ಯಾಚಾರ – ಆರೋಪಿ ಬಂಧನ
ಸೂರತ್: ಉದ್ಯೋಗದ ಆಮಿಷವೊಡ್ಡಿ ಮಹಿಳೆ ಮೇಲೆ ಯುವಕನೊಬ್ಬ ಅತ್ಯಾಚಾರ ಎಸಗಿದ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ.
ಭಾನುವಾರ ರಾತ್ರಿ ಸಾರ್ಥನಾ ಪೊಲೀಸರಿಗೆ ವಿವಾಹಿತ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮೋಟಾ ವರಾಚಾದ ಸಾಯಿ-ಶ್ರದ್ಧಾ ರೆಸಿಡೆನ್ಸಿ ನಿವಾಸಿ ನೀಲೇಶ್ ಲಾಥಿಯಾ ವಿರುದ್ಧ ಅತ್ಯಾಚಾರದ ಆರೋಪವನ್ನು ದಾಖಲಿಸಿದ್ದಾರೆ.
ಪೊಲೀಸರ ಪ್ರಕಾರ, ಪತಿ ಮತ್ತು ಮಗುವಿನೊಂದಿಗೆ ವಾಸಿಸುತ್ತಿರುವ 35 ವರ್ಷದ ಮಹಿಳೆ ಒಂದು ವರ್ಷದ ಹಿಂದೆ 23 ವರ್ಷದ ನೀಲೇಶ್ ಜೊತೆ ಸಂಪರ್ಕಕ್ಕೆ ಬಂದಿದ್ದಳು.
ಆರೋಪಿಯು ಮಹಿಳೆಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಹೋಟೆಲ್‌ನಲ್ಲಿ ಭೇಟಿಯಾಗುವಂತೆ ಹೇಳಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನೀಲೇಶ್ ಮಹಿಳೆಯ ನಗ್ನ ಚಿತ್ರಗಳನ್ನು ಸಹ ಕ್ಲಿಕ್ ಮಾಡಿ ನಂತರ ಆಕೆಯನ್ನು ಬ್ಲಾಕ್ ಮೇಲ್ ಮಾಡಲು ಬಳಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಅತ್ಯಾಚಾರವಾದ ಹತ್ತು ದಿನಗಳ ನಂತರ, ನೀಲೇಶ್ ಮತ್ತೆ ಮಹಿಳೆಯನ್ನು ಸಂಪರ್ಕಿಸಿ ಬ್ಲಾಕ್ ಮೇಲ್ ಮಾಡಿದ್ದಾನೆ. ತನ್ನ ಬೇಡಿಕೆಗಳನ್ನ ಈಡೇರಿಸದಿದ್ದರೆ ಆಕೆಯ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಇನ್ನು ಲೈಂಗಿಕ ಶೋಷಣೆ ತಾಳಲಾರದೆ ಮಹಿಳೆ ಧೈರ್ಯ ತಂದುಕೊಂಡು ಪತಿಗೆ ವಿಷಯ ತಿಳಿಸಿದ್ದಾಳೆ. ಭಾನುವಾರ, ಮಹಿಳೆ ನಿಲೇಶ್ ವಿರುದ್ಧ ಸಾರ್ಥನಾ ಪೊಲೀಸರಿಗೆ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲಿಂಗ್ ದೂರು ದಾಖಲಿಸಿದ್ದಾರೆ.








