ಗೆಳತಿ ಕರೆ ಸ್ವೀಕರಿಸಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಗೆಳಯ
ಸ್ನೇಹಿತೆ ಕರೆ ಸ್ವೀಕರಿಸಲಿಲ್ಲ ಎನ್ನುವ ಕಾರಣಕ್ಕೆ 24 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನ ಡಿಯೋನಾರ್ ಪ್ರದೇಶದಲ್ಲಿ ನಡೆದಿದೆ. ಮೃತಯುವಕನನ್ನ ಮಾನವ್ ಲಾಲ್ವಾನಿ ಎಂದು ಗುರುತಿಸಲಾಗಿದೆ.
ಮೃತ ಯುವಕ ತಡರಾತ್ರಿವರೆಗೂ ಮತ್ತು ಆತನ ಸ್ನೇಹಿತ – ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ಭಾಗವಹಿಸಿದ್ದ, ಪಾರ್ಟಿ ಮುಗಿಸಿ ಮನೆಗೆ ಬಂದ ಯುವಕ, ತನ್ನ ಸ್ನೇಹಿತೆಗೆ ಕರೆ ಮಾಡಿದ್ದಾನೆ. ಆದ್ರೆ, ಯುವತಿ ಆತನ ಕರೆಯನ್ನ ಸ್ವೀಕರಿಸಿಲ್ಲ. ಪಟ್ಟು ಬಿಡದ ಯುವಕ ಮತ್ತೆ ಮತ್ತೆ ಕರೆ ಮಾಡಿದ್ದಾನೆ.
ಆದ್ರೆ, ಯುವತಿ ಕರೆಗೆ ಪ್ರತಿಕ್ರಿಯಿಸದ ಕಾರಣ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ’ ಎಂದು ಟ್ರೋಂಬೇ ಪೊಲೀಸ್ ಠಾಣೆ ಹಿರಿಯ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.








