ಧಾರವಾಡ : ಕಲಘಟಗಿ ಪೊಲೀಸರಿಗೆ ಕೊರೊನಾ ಭೀತಿ ಶುರುವಾಗಿದೆ. ಆದ್ದರಿಂದ ಠಾಣೆಯ ಕೆಲ ಪೊಲೀಸರು ಕ್ವಾರಂಟೈನ್ ನಲ್ಲಿ ಇದ್ದಾರೆ. ಪೊಲೀಸರ ಜೊತೆ ಸಂಪರ್ಕ ಹೊಂದಿದ್ದ ವ್ಯಕ್ತಿ ಕೊರೊನಾ ಸೋಂಕು ಧೃಡವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರನ್ನು ಕ್ವಾರೆಂಟೈನ್ ಮಾಡಲಾಗಿದೆ.ಪಿ-3397 ಗೆ ಮೇ.31ರಂದು ಸೋಂಕು ಧೃಢ ಪಟ್ಟಿತ್ತು.ಅದಕ್ಕೂ ಮೊದಲೇ ಕಲಘಟಗಿ ಪೊಲೀಸರೊಟ್ಟಿಗೆ ಸಂಪರ್ಕವನ್ನು ಸೋಂಕಿತ ಹೊಂದಿದ್ದನು.
ಮೇ. 19 ರಂದು ದುಮ್ಮವಾಡ ಗ್ರಾಮದಲ್ಲಿ ನಡೆದಿದ್ದ ಅವಘಡದ ಸಂಬಂಧ ಸ್ಥಳ ಮಹಜರಿಗೆ ಹೋಗಿದ್ದರು. ಆ ವೇಳೆ ಪೊಲೀಸರೊಟ್ಟಿಗೆ ಪಂಚನಾಮೆ ನೆರವೇರಿಸಿದ್ದನು. ಇದಾದ ಬಳಿಕ 20ರಂದು ಠಾಣೆಗೆ ಬಂದಿದ್ದನು ಎಂದು ಟ್ರಾವೆಲ್ ಹಿಸ್ಟರಿಯಿಂದ ಬಯಲಾಗಿದೆ. ಸೋಂಕಿತನು 22ರಂದು ಅಸ್ವಸ್ಥನಾದಲಗಿದ್ದನು. ಆದ್ದರಿಂದ ಈತ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ತೆರಳಿದ್ದನು. ತದನಂತರ ಎಸ್.ಡಿ.ಎಂ. ಆಸ್ಪತ್ರೆಗೆ ಬಂದಾಗ ಈತನ ಗಂಟಲುದ್ರವ ಪರೀಕ್ಷೆ ಮಾಡಲಾಗಿತ್ತು. ಪರೀಕ್ಷೆಯ ನಂತರ ಸೋಂಕು ಧೃಢ ಪಟ್ಟಿವಾಗಿದೆ.








