ಲಕ್ನೋ: ವಿವಾದಿತ ಸಂಭಲ್ ಮಸೀದಿಯ ಬಳಿ ಹಳೇ ದೇವಾಲಯ ಪತ್ತೆಯಾಗಿದೆ.
ಸಂಭಲ್ (Sambhal) ಶಾಹಿ ಜಾಮಾ ಮಸೀದಿಯ ಸುತ್ತ ಒತ್ತುವರಿ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ಸುಮಾರು 46 ವರ್ಷಗಳ ಹಿಂದಿನ ದೇವಾಲಯ ಹಾಗೂ ಅದರ ಕುರುಹು ಪತ್ತೆಯಾಗಿವೆ.
ಸಂಭಲ್‌ನಲ್ಲಿ ಹಿಂಸಾಚಾರ ನಡೆದಿದ್ದ ಮಸೀದಿ ಸುತ್ತಮುತ್ತ ಸರ್ಕಾರ ಒತ್ತುವರಿ ತೆರವು ಕಾರ್ಯ ಆರಂಭಿಸಿದೆ. ದೇವಾಲಯದಲ್ಲಿ ಶಿವ ಮತ್ತು ಹನುಮಂತನ ವಿಗ್ರಹಗಳು ಪತ್ತೆಯಾಗಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಭಲ್ ಸಿಒ ಅನುಜ್ ಕುಮಾರ್ ಚೌಧರಿ ಮಾತನಾಡಿ, ಈ ಪ್ರದೇಶದಲ್ಲಿ ದೇವಸ್ಥಾನವನ್ನು ಅತಿಕ್ರಮಣ ಮಾಡಿರುವ ಕುರಿತು ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಸ್ಥಳ ಪರಿಶೀಲಿಸಿದಾಗ ದೇವಸ್ಥಾನ ಪತ್ತೆಯಾಗಿದೆ ಎಂದಿದ್ದಾರೆ.
ದೇವಾಲಯದಲ್ಲಿ ಶಿವ ಮತ್ತು ಹನುಮಂತನ ವಿಗ್ರಹಗಳಿವೆ. ಈ ಪ್ರದೇಶದಲ್ಲಿ ಹಿಂದೂ ಕುಟುಂಬಗಳು ವಾಸವಿದ್ದವು. ಕಾರಣಾಂತರಗಳಿಂದ ಈ ಪ್ರದೇಶವನ್ನು ತೊರೆದಿದ್ದರು. ದೇವಾಲಯದ ಪಕ್ಕದಲ್ಲಿ ಬಾವಿ ಕೂಡ ಪತ್ತೆಯಾಗಿದೆ.