9 ಜನರ ಪ್ರಾಣ ಉಳಿಸಿದ ಎರಡು ವರ್ಷದ ಬಾಲಕಿ……
ಎರಡುವರೇ ವರ್ಷದ ಪುಟ್ಟ ಬಾಲಕಿಯೊಬ್ಬಳು ನಮ್ನೆಲ್ಲ ತೊರೆದು ವಿದಾಯ ಹೇಳಿದ್ದಾಳೆ , ವಿದಾಯ ಹೇಳುವ ಮುನ್ನ 9 ಜನರ ಪಾಲಿಗೆ ಜೀವದಾನ ಮಾಡಿ ಹೋಗಿದ್ದಾಳೆ ಇಂಥಹ ಅಪರೂಪದ ಘಟನೆ ನಡೆದಿರುವುದು ಚಂಡೀಗಢದಲ್ಲಿ.
ಡಿಸೆಂಬರ್ 12 ರಂದು ಪಂಜಾಬ್ ನ ಮೊಹಾಲಿ ಎಂಬಲ್ಲಿ ರಸ್ತೆ ಅಪಘಾತವಾಗಿತ್ತು. ಈ ದುರ್ಗಘಟನೆಯಲ್ಲಿ ಇಂದೇ ಕುಟುಂಬದ 66 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಅಪಘಾತದಲ್ಲಿ ಎರಡೂವರೆ ವರ್ಷದ ಬಾಲಕಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದಳು ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು.
ಅನಾಯಕ ಎಂಬ ಮುದ್ದು ಮಗಳನ್ನ ಕಳೆದುಕೊಂಡ ತಂದೆ ಮಗುವಿನ ಅಂಗಾಂಗಗಳನ್ನ ದಾನ ಮಾಡುವ ಗಟ್ಟಿ ನಿರ್ಧಾರವನ್ನ ಕೈಗೊಂಡಿದ್ದರು. ಈ ನಿರ್ಧಾರದಿಂದ ಅನಾಯಕ 9 ಜನರಿಗೆ ಜೀವ ನೀಡಿ ಹೊರಟು ಹೋಗಿದ್ದಾಳೆ. ಪಿಜಿಐ ಆಸ್ಪತ್ರೆಯ ವೈದ್ಯರು ಅಂಗಾಗ ದಾನ ಪ್ರಕ್ರಿಯೇ ಪ್ರಾರಂಭಿಸಿದ್ದು ಬಾಲಕಿಯ ಹೃದಯವನ್ನ ಚೆನೈಗೆ ಯಕೃತ್ ನ ಅಹಮ್ಮದಬಾದ್ ಗೆ ಕಳುಹಿಸಿದ್ದಾರೆ.. ರೋಗಿಗಳಿಗೆ ಮೇದೋಜೀರಕ ಗ್ರಂಥಿ ಮೂತ್ರಪಿಂಡ ಮತ್ತು ಕಣ್ಣಿನ ಕಸಿ ಮಾಡಲು ಹೊಂದಾಣಿಕೆ ಮಾಡಲಾಗುತ್ತಿದೆ.
ಪ್ರೀತಿಯ ಮಗಳನ್ನ ಕಳೆದುಕೊಂಡು ತುಂಬಾ ದುಖಃವಾಗುತ್ತಿದೆ. 9 ಜನರಿಗೆ ಅವಳ ಅಂಗಾಂಗಗಳಿಂದ ಹೊಸ ಜೀವನ ಸಿಗುತ್ತಿದೆ. ಈ ಮೂಲಕವಾದರೂ ನನ್ನ ಮಗಳು ಜೀವಂತವಾಗಿರುತ್ತಾಳೆ ಎಂದು ಮಗಳ ತಂದೆ ಅಮಿತ್ ಗುಪ್ತಾ ಹೇಳಿದ್ದಾರೆ. ಅಮಿತ್ ಪ್ತಾ ಕಾರ್ಯಕ್ಕೆ ಆಸ್ಪತ್ರೆಯ ವೈದ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಎಲ್ಲರಿಗೂ ಸ್ಪೂರ್ತಿ ನೀಡುತ್ತದೆ ಎಂದು ಹೇಳಿದ್ದಾರೆ..








