Anand mahindra virat kohli | ನಿಜವಾದ ಹೀರೋಗಳು ಸೈಲೆಂಟ್ ಆಗಿ ಮುನ್ನುಗ್ಗುತ್ತಾರೆ
ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸಿಡಿಸಿದ ಸೆಂಚೂರಿಯನ್ನು ಇಡೀ ವಿಶ್ವವೇ ಸಂಭ್ರಮಿಸುತ್ತಿದೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರೆಟಿಗಳ ವರೆಗೂ ಎಲ್ಲರೂ ಸೋಶಿಯಲ್ ಮಿಡಿಯಾದಲ್ಲಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಇನ್ನಿಂಗ್ಸ್ ಆರಂಭದಿಂದಲೂ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಕೊಹ್ಲಿ 53 ಎಸೆತಗಳಲ್ಲಿ ಸೆಂಚೂರಿ ಗಡಿದಾಟಿದರು. ಕೊಹ್ಲಿ ಇನ್ನಿಂಗ್ಸ್ ನಲ್ಲಿ 12 ಬೌಂಡರಿ, ಆರು ಸಿಕ್ಸರ್ ಗಳಿವೆ. ಒಟ್ಟಾರೆಯಾಗಿ 61 ಎಸೆತಗಳಲ್ಲಿ 122 ರನ್ ಗಳಿಸಿದ ವಿರಾಟ್, ಟಿ 20 ಕೆರಿಯರ್ ನಲ್ಲಿ ಚೊಚ್ಚಲ ಶತಕ ಸಿಡಿಸಿದ್ರು.

ಈ ಹಿನ್ನೆಲೆಯಲ್ಲಿ ಪ್ರಮುಖ ಉದ್ಯಮಿ ಆನಂದ್ ಮಹೀಂದ್ರ ಅವರು ವಿರಾಟ್ ಕೊಹ್ಲಿ ಬಗ್ಗೆ ಆಸಕ್ತಿದಾಯಕ ಕಮೆಂಟ್ ಗಳನ್ನು ಮಾಡಿದ್ದಾರೆ. ನಿಜವಾದ ಹೀರೋಗಳು ಸೈಲೆಂಟ್ ಆಗಿ ಬರ್ತಾರೆ. ವಿಮರ್ಶಿಸಿದವರಿಗೆ ಮಾತಿನಿಂದಲ್ಲ ಪಂಚ್ ಡೈಲಾಗ್ ಗಳಿಂದ ಉತ್ತರ ಕೊಡುತ್ತಾರೆ, ಸೇಮ್ ವಿರಾಟ್ ಕೊಹ್ಲಿ ರೀತಿಯಲ್ಲಿ, ಕಂಗ್ರಾಟ್ಸ್… ಎಂದು ಬರೆದುಕೊಂಡಿದ್ದಾರೆ.
ಈ ಟ್ವೀಟ್ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನು ಮ್ಯಾಚ್ ವಿಷಯಕ್ಕೆ ಬಂದರೇ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 212 ರನ್ ಗಳಿಸಿತ್ತು. ವಿರಾಟ್ 61 ಎಸೆತಗಳಲ್ಲಿ 122 ರನ್ ಗಳಿಸಿದರು. ಅಫ್ಘಾನ್ ತಂಡ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿಲಷ್ಟೆ ಶಕ್ತವಾಯಿತು.








