ಮೋದಿಯವರು ಪ್ರಧಾನಿಯಾಗಿದ್ದು ನಮ್ಮ ಪುಣ್ಯ : ಆನಂದ್ ಸಿಂಗ್
ಬಳ್ಳಾರಿ : ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿದ್ದು ನಮ್ಮ ಪುಣ್ಯ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಬಳ್ಳಾರಿಯಲ್ಲಿ ನಡೆದ ಗ್ರಾಮ ಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು, ಗ್ರಾಮ ಸ್ವರಾಜ್ ಮಹಾತ್ಮ ಗಾಂಧಿ ಅವರ ಕನಸು.

ಗ್ರಾಮಗಳು ಅಭಿವೃದ್ಧಿ ಆಗದೋ ಅಲ್ಲಿಯವರೆಗೆ ದೇಶ ಬೆಳೆಯೋಲ್ಲ ಅಂದಿದ್ರು, ಆ ಕನಸು, ನನಸು ಮಾಡೋಕೆ ಬಿಜೆಪಿ ಹೊರಟಿದೆ ಎಂದು ಹೇಳಿದರು. ಸಚಿವಸ್ಥಾನ ತ್ಯಾಗ ಮಾಡ್ಲಿ : `ಸಾಹುಕಾರ್’ ವಿರುದ್ಧ ಬುಸುಗುಟ್ಟಿದ ರೇಣುಕಾಚಾರ್ಯ
70 ವರ್ಷಗಳ ಹಿಂದೆಯಿಂದ ಹಲವು ಪಕ್ಷಗಳು ದೇಶವನ್ನಾಳಿವೆ. ಗ್ರಾಮ ಸ್ವರಾಜ್ ಯೋಜನೆಯನ್ನು ನೆನಪಿಸಿಕೊಳ್ಳಲಿಲ್ಲಾ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಇನ್ನು ಮೋದಿಜೀ, ಗೃಹ ಮಂತ್ರಿ ಅಮಿಶ್ ಶಾ ಗ್ರಾಮಸ್ವರಾಜ್ ಅನ್ನು ಕೈಗೆತ್ತಿಕೊಂಡಿದ್ದಾರೆ. ಮೋದಿಯವರು ಪ್ರಧಾನಿಯಾಗಿದ್ದು, ನಮ್ಮ ಪುಣ್ಯ.
ಅವರು 130 ಕೋಟಿ ಜನರ ಬಗ್ಗೆ ಯೋಚಿಸುತ್ತಾರೆ. ಪಕ್ಷ ಬಲಪಡಿಸಲು ಮುಂದಾಗಿದ್ದಾರೆ ಎಂದು ಮೋದಿಯನ್ನು ಹಾಡಿಹೊಗಳಿದರು.
ಪಕ್ಷದ ಕಾರ್ಯಕರ್ತರು, ತಮ್ಮ ಬೆವರು ಸುರಿಸಿ, ನಮ್ಮಂತಹ ಜನಪ್ರತಿನಿಧಿಗಳನ್ನು ಗೆಲ್ಲಿಸಿದ್ದೀರಿ, ನಿಮಗೆ ನಾವು ಅಭಾರಿ. ಲಿಂಗಾಯತರಿಗೆ ಕೇಂದ್ರದ ಒಬಿಸಿ ಮೀಸಲಾತಿ ಸಿಗಬೇಕು: ಗೃಹ ಸಚಿವ ಬೊಮ್ಮಾಯಿ
ನಿಮಗೆ ಆತ್ಮ ವಿಶ್ವಾಸ ತುಂಬೋ ಕೆಲಸ ಬಿಜೆಪಿ ಮಾಡುತ್ತದೆ ಎಂದು ಆನಂದ್ ಸಿಂಗ್ ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








