6 ಜನ ನೀರಾವರಿ ಅಧಿಕಾರಿಗಳ ಅಮಾನತಿಗೆ ಸೂಚಿಸಿದ ಆನಂದ್ ಸಿಂಗ್
ಕೊಪ್ಪಳ: ಕಾರ್ಖಾನೆಯೊಂದಕ್ಕೆ ತುಂಗಭದ್ರಾ ಜಲಾಶಯದಿಂದ ಅಕ್ರಮವಾಗಿ ನೀರು ನೀಡಿರುವ ಆರೋಪ ಕೇಳಿ ಬಂದಿರುವುದರಿಂದ 6 ಅಧಿಕಾರಿಗಳನ್ನು ಅಮಾನತುಗೊಳಿಸಿ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಸೂಚಿಸಿದ್ದಾರೆ.
ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯ ವಿವಿಧ ಕಡೆ ಕೆಲಸ ಮಾಡುವ ರಾಜ್ಯ ನೀರಾವರಿ ನಿಗಮದ 6 ಎಎಇಗಳು ಕರ್ತವ್ಯಲೋಪ ಆಧಾರದ ಮೇಲೆ ಅಮಾನತು ಮಾಡಿ ಎಂದು ತುಂಗಭದ್ರಾ ನಿರಾವರಿ ಕಚೇರಿಗೆ ಸೂಚಿಸಿದ್ದಾರೆ. ಸಚಿವ ಆನಂದ್ ಸಿಂಗ್ ಕಚೇರಿಗೆ ಸನಿರೀಕ್ಷಿತ ಭೇಟಿ ನೀಡಿದ ವೇಳೆ ಸೂಚಿಸಿದ್ದರು. ಈಗ ಮೇಲ್ ಮುಖಾಂತರವು ತಿಳಿಸಿದ್ದಾರೆ.
ಟಿಬಿ ಡ್ಯಾಂ ಡದಂಡೆಯ ಕಾಲುವೆಯ ಕೊನೆ ಭಾಗದ ಅಚ್ಚುಕಟ್ಟು ರೈತರಿಗೆ ನೀರು ದೊರೆಯುತ್ತಿಲ್ಲ ಎಂದು ರೈತರು ಆರೋಪಿಸಿದ್ದರು. ರೈತರ ದೂರನ್ನು ಆಧರಿಸಿ ಅಧಿಕಾರಿಗಳ ಅಮಾನತಿಗೆ ಆನಂದ ಸಿಂಗ್ ಸೂಚನೆ ನೀಡಿದ್ದಾರೆ. ಇನ್ನೂ ಡ್ಯಾಂ ನ ಹಿನ್ನೀರು ಪ್ರದೇಶಕ್ಕೆ ತೆರಳಿ ವೀಕ್ಷಿಸಿದ ಸಚಿವ ಆನಂದ ಸಿಂಗ್, ಜಲಾಶಯದಲ್ಲಿ ಕಾರ್ಖಾನೆಗಳು ಅಳವಡಿಸಿದ್ದ ನೀರಿನ ಮೋಟರ್ಗಗಳನ್ನು ಚೆಕ್ ಮಾಡಿದರು.
ಕಾರ್ಖಾನೆಗಳಿಗೆ ಅಧಿಕಾರಿಗಳು ಅಕ್ರಮವಾಗಿ ನೀರು ನೀಡುತ್ತಾರೆ ಎಂದು ಆರೋಪಿಸಿ ರೈತರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ ಅಧಿಕಾರಿಗಳ ವಿರುದ್ಧ ಗರಂ ಆದ ಆನಂದ್ ಸಿಂಗ್ ಅಮಾನತು ಮಾಡುವಂತೆ ಸೂಚಿಸಿದರು.








