ಭಾರತ ಸುರಕ್ಷಿತವಲ್ಲ ಎಂದವರು ಅಫ್ಘಾನ್ ಗೆ ಹೋಗಲಿ ಎಂದ ಅನಂತ್ ನಾಗ್ – ಹಿರಿಯ ನಟನ ಹೇಳಿಕೆ ಖಂಡಿಸಿದ ಚೇತನ್
ಇಡೀ ಅಫ್ಗಾನ್ ಅನ್ನೇ ಸ್ಮಶಾಣದಂತೆ ಮಾಡಿ ಹೆಣಗಳ ರಾಶಿಗಳ ಮೇಲೆ ಸಾಮ್ರಾಜ್ಯಕಟ್ಟುಕೊಂಡು ಅಕ್ಷರಸಹ ಅಲ್ಲಿನ ಜನರಿಗೆ ನರಕ ದರ್ಶನ ಮಾಡಿಸುತ್ತಿರುವ ತಾಲಿಬಾನರು ಸದ್ಯ ಅಲ್ಲಿ ಸರ್ಕಾರ ರಚನೆಗೆ ಮುಂದಾಗಿದ್ದಾರೆ.. ಈ ನಡುವೆ ಇಡೀ ವಿಶ್ವಾದ್ಯಂತ ಅಫ್ಗಾನ್ ನಲ್ಲಿ ನಡೆಯುತ್ತಿರುವ ವಿದ್ಯಾಮಾನಗಳ ಬಗ್ಗೆಯೇ ಚರ್ಚೆಯಾಗ್ತಿದೆ. ಅಂತೆಯೇ ಬಾರತದಲ್ಲೂ ಕೂಡ. ಆದ್ರೆ ಇತ್ತೀಚೆಗೆ ಕೆಲವರು ಭಾರತದಲ್ಲಿ ಹಿಂದು ಟೆರರಿಸಮ್ ಇದೆ ಎಂಬ ಹೇಳಿಕೆಗಳನ್ನ ನೀಡುತ್ತಾ ಅಫ್ಗಾನ್ ನ ವಿದ್ಯಮಾನಗಳಿಗೆ ಭಾರತವನ್ನು ಹೋಲಿಸಿ ಮಾತನಾಡಿದ್ದಾರೆ.. ಇದು ಬಾರತೀಯರು ಅನೇಕ ಸೆಲೆಬ್ರಿಟಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಇಂತಹ ಹೇಳಿಕೆಗಳ ವಿರುದ್ಧ ಸ್ಯಾಂಡಲ್ ವುಡ್ ನ ನಟಿ ಪ್ರಣೀತಾ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿ ಕಿಡಿಕಾರಿದ್ದರು.. ಅಲ್ಲದೇ ಸ್ಯಾಂಡಲ್ ವುಡ್ ನ ಹಿರಿಯ ನಟ ಅನಂತ್ ನಾಗ್ ಅವರು ಅಫ್ಗಾನ್ ವಿದ್ಯಮಾನಗಳ ಕುರಿತು ಸಂದರ್ಶನ ವೊಂದ್ರಲ್ಲಿ ಮಾತನಾಡಿದ್ದು, ಭಾರತ ಸುರಕ್ಷಿವಲ್ಲ ಎಂದವರು ಅಲ್ಲಿಗೆ ಹೋಗಲಿ ಎಂದು ಬಾರತ ಸುರಕ್ಷಿತವಲ್ಲ ಎಂದು ಹೇಳ್ತಿದ್ದ ಕೆಲ ನಟರ ವಿರುದ್ಧ ಕಿಡಿಕಾರಿದ್ದಾರೆ.. ಅಲ್ಲದೇ ಈ ಹೇಳಿಕೆಯನ್ನ ಒಮ್ಮೆ ಬಾಲಿವುಡ್ ನಟ ಅಮಿರ್ ಖಾನ್ ಸಹ ನೀಡಿದ್ದರು.
ಇನ್ನೂ ಅಫ್ಗಾನ್ ನಲ್ಲಿ ಜನರು ಆ ಉಗ್ರರಿಂದ ತಪ್ಪಿಸಿಕೊಳ್ಳಲು ವಿಮಾನಗಳ ಹಿಂದೆ ಓಡ್ತಾಯಿದ್ದಾರೆ.. ಈ ಪ್ರಯತ್ನದಲ್ಲಿ ಕುಟುಂಬದವರನ್ನೂ ಲೆಕ್ಕಿಸದ ಪರಿಸ್ಥಿತಿ ಇದೆ.. ವಿಮಾನಗಳಿಗೆ ಕೆಳಗೆ ಬಿದ್ದು ಜನ ಸಾಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮೋದಿ ಅವರು ಮುಸ್ಲ್ಮಾನರಿಗೆ 180 ದಿನದ ವೀಸಾ ಕೊಡ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಹಾಗಾಗಿ ನಾವು ಆಶಾದಾಯವಾಗಿ ಇರೋಣ ಎಂದಿದ್ದಾರೆ. ಅಲ್ಲದೇ ಇಲ್ಲಿ ಕೆಲವರು ನಟರಿದ್ದಾರೆ.. ನಮಗೆ ಭಾರತದಲ್ಲಿ ಸುರಕ್ಷತೆ ಇಲ್ಲ. ಇಲ್ಲಿರಲು ಭಯವಾಗ್ತಿದೆ ಅಂತಿದ್ದಾರೆ. ಅಂಥವರು ಬೇಕಿದ್ರೆ ಅಫ್ಘಾನಿಸ್ತಾನಕ್ಕೆ ಹೋಗಬಹುದು ಎಂದು ಕಿಡಿಕಾರಿದ್ದಾರೆ.
ಆದ್ರೆ ಅನಂತ್ ನಾಗ್ ಅವರ ಹೇಳಿಕೆಯನ್ನು ನಟ ಹಾಗೂ ಸಾಮಾಜಿಕ ಹೋರಾಟಗಾರ ಆದಿನಗಳು ಚೇತನ್ ತೀವ್ರವಾಗಿ ಖಂಡಿಸಿದ್ದಾರೆ. ಟ್ವೀಟ್ ಮಾಡಿ ಹೇಳಿಕೆ ಖಂಡಿಸಿರುವ ಚೇತನ್ “ಖ್ಯಾತ ಚಲನಚಿತ್ರ ನಟರಾದ ಅನಂತ್ ನಾಗ್ ಅವರು ತಾಲಿಬಾನ್ ಬಗ್ಗೆ ಮಾತನಾಡಿದ ವಿಡಿಯೋ ಈಗಷ್ಟೇ ನೋಡಿದೆ. ಇತಿಹಾಸ/ಭೌಗೋಳಿಕ ರಾಜಕೀಯದ ಬಗ್ಗೆ ಅವರ ಆಲೋಚನೆಗಳು ಹಿಂಜರಿತ, ಸೀಮಿತ ಮತ್ತು ಪಂಥೀಯವಾಗಿ ಕಾಣುತ್ತವೆ. ಭಾರತೀಯ ನಟರು ಇಲ್ಲಿ ಸುರಕ್ಷತೆ ಇಲ್ಲ ಎಂದು ಬಾವಿಸುವವರು ಅಲ್ಲಿ ಸ್ವರ್ಗಕ್ಕೆ ( ಅಫ್ಗಾನಿಸ್ತಾನ) ಹೋಗಿ ಎಂದಿದ್ದಾರೆ. ಆದ್ರೆ ಇದು ಸಹಿಸ್ಣುತೆಯ ಕ್ರೂರತೆಯನ್ನು ವಿಮರ್ಶಿಸುತ್ತಿರುವುದು ವಿಪರ್ಯಾಸ ಎಂದು ಹೇಳುವ ಮೂಲಕ ಹಿರಿಯ ನಟರ ವಿರುದ್ಧ ಕಿಡಿಕಾರಿದ್ದಾರೆ.
ತಾಲಿಬಾನಿಗಳಿಗೂ ಹಿಂದೂ ಟೆರರಿಸಮ್ ಗೂ ಹೆಚ್ಚು ವ್ಯತ್ಯಾಸವಿಲ್ಲ ಎಂದವರಿಗೆ ತಿರುಗೇಟು ನೀಡಿದ ಪ್ರಣಿತಾ..!