ADVERTISEMENT
Sunday, August 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

‘ಅಂಡಮಾನ್’ ಹೆಸರಿನ ಹಿಂದಿದೆ ರೋಚಕ ಕಥೆ..! ಇಲ್ಲಿಯ ಜೈಲು ವರ್ಲ್ಡ್‌ ಫೇಮಸ್ಸು..!

Namratha Rao by Namratha Rao
June 4, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

‘ಅಂಡಮಾನ್’ ಹೆಸರಿನ ಹಿಂದಿದೆ ರೋಚಕ ಕಥೆ..! ಇಲ್ಲಿಯ ಜೈಲು ವರ್ಲ್ಡ್‌ ಫೇಮಸ್ಸು..!

ಭಾರತ ತನ್ನ ಅತ್ಯದ್ಭುತ ಪ್ರಾಕೃತಿಕ ತಾಣಗಳಿಗೆ ಹೆಸರುವಾಸಿ. ಅದರಲ್ಲೂ ಇಲ್ಲಿಯ ಸುಂದರ ಸಮುದ್ರ ತೀರಗಳಿಗೆ ಭೇಟಿ ನೀಡಲು ದೇಶ- ವಿದೇಶಗಳಿಂದ ಪ್ರವಾಸಿಗರು ಆಗಮಿಸ್ತಿರುತ್ತಾರೆ.  ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲೊಂದಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ತಮ್ಮ ಅತ್ಯದ್ಭುತ ಕಡಲ ಕಿನಾರೆಗಳಿಗೆ ಫೇಮಸ್. ಏಷ್ಯಾದ ಸುಂದರ ಬೀಚುಗಳಲ್ಲೊಂದಾದ ರಾಧಾನಗರ ಬೀಚ್ ಇರುವುದು ಇಲ್ಲಿಯೇ. ಕಡಿಮೆ ಜನಸಂಖ್ಯೆ ಹೊಂದಿರುವ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಬೀಚ್ ಗಳನ್ನು ಹೊರತುಪಡಿಸಿ ಸಾಕಷ್ಟು ಪ್ರವಾಸಿ ತಾಣಗಳಿವೆ.

Related posts

ವಂದೇ ಮಾತರಂ ಗೀತೆಯ ಸಾಲುಗಳು ಏಕದೇವೋಪಾಸನೆಯನ್ನು ನಂಬುವವರ ಧಾರ್ಮಿಕ ಭಾವನೆಗೆ ವಿರುದ್ಧವಾಗಿರಬಹುದು ಎಂದ ಶರ್ಮಿಳಾ ಟ್ಯಾಗೋರ್ ವಾದಕ್ಕೆ ಕಂಗನಾ ರನೌತ್ ಖಡಕ್ ಉತ್ತರ

ವಂದೇ ಮಾತರಂ ಗೀತೆಯ ಸಾಲುಗಳು ಏಕದೇವೋಪಾಸನೆಯನ್ನು ನಂಬುವವರ ಧಾರ್ಮಿಕ ಭಾವನೆಗೆ ವಿರುದ್ಧವಾಗಿರಬಹುದು ಎಂದ ಶರ್ಮಿಳಾ ಟ್ಯಾಗೋರ್ ವಾದಕ್ಕೆ ಕಂಗನಾ ರನೌತ್ ಖಡಕ್ ಉತ್ತರ

August 23, 2026
ಮೋದಿ ಸರ್ಕಾರದ ಇ20 ನೀತಿಯಿಂದ ಸಕ್ಕರೆ ಮತ್ತು ಬೆಲ್ಲದ ಬೆಲೆ ಏರಿಕೆ: ನಿಮ್ಮ ಎಥೆನಾಲ್ ನೀತಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂದ ಕಾಂಗ್ರೆಸ್ ನಾಯಕ ಜೈರಾಂ ರಮೇಶ್

ಮೋದಿ ಸರ್ಕಾರದ ಇ20 ನೀತಿಯಿಂದ ಸಕ್ಕರೆ ಮತ್ತು ಬೆಲ್ಲದ ಬೆಲೆ ಏರಿಕೆ: ನಿಮ್ಮ ಎಥೆನಾಲ್ ನೀತಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂದ ಕಾಂಗ್ರೆಸ್ ನಾಯಕ ಜೈರಾಂ ರಮೇಶ್

August 23, 2026

‘ಅಂಡಮಾನ್’ ಹೆಸರಿನ ಹಿಂದಿದೆ ರೋಚಕ ಕಥೆ..!

ಒಂದಾನೊಂದು ಕಾಲದಲ್ಲಿ ಮಲೇಷಿಯಾ ಹಾಗು ಸೋಮಾಲಿಯಾ ಕಡಲ್ಗಳ್ಳರು ಗುಲಾಮರನ್ನು ಪಡೆಯುವ ಉದ್ದೇಶಕ್ಕಾಗಿ ಇಲ್ಲಿಗೆ ಬಂದಿದ್ದರಂತೆ. ಆಗ ಸ್ಥಳೀಯ ಜನರ ಮುಖ ಲಕ್ಷಣವು ಮಂಗಗಳೊಂದಿಗೆ ಹೋಲಿಕೆಯಾಗುತ್ತಿದ್ದುದನ್ನು ಕಂಡು ಅವರೆಲ್ಲ ಈ ಪ್ರದೇಶಕ್ಕೆ ಮಂಗ ಮುಖದ ಜನರುಗಳು ವಾಸಿಸುವ ಭೂಮಿ ಎಂಬರ್ಥದಲ್ಲಿ ಇದಕ್ಕೆ ಹಂಡುಮಾನ್ ಅಂದ್ರೆ ಹನುಮಾನ್ ಎಂಬ ಹೆಸರಿನ್ನಿಟ್ಟಿದ್ದರು ಎಂದು ಹೇಳಲಾಗುತ್ತದೆ. ಕ್ರಮೇಣ ಈ ಹೆಸರು ಆಡುಭಾಷೆಯಲ್ಲಿ ಅಂಡಮಾನ್ ಎಂದು ಬದಲಾಯಿತು ಎನ್ನಲಾಗುತ್ತದೆ. 

ಬಂಗಾಳ ಕೊಲ್ಲಿಯಲ್ಲಿವೆ ಈ ಸುಂದರ ದ್ವೀಪಗಳು..!

ಬಂಗಾಳ ಕೊಲ್ಲಿ ಹಾಗು ಅಂಡಮಾನ್ ಸಮುದ್ರದ ಸಂಗಮ ಸ್ಥಳದಲ್ಲಿರುವ ಈ ದ್ವೀಪಗಳ ಸಮೂಹವು ಇಂಡೋನೇಷಿಯಾ ದೇಶದ ಆಚೆ ಎಂಬ ಪ್ರದೇಶದಿಂದ ಕೇವಲ 150 ಕಿ.ಮೀ ದೂರದಲ್ಲಿದೆ. ಅಂಡಮಾನ್ ಹಾಗು ನಿಕೋಬಾರ್ ಎರಡು ಪ್ರತ್ಯೇಕವಾದ ದ್ವೀಪ ಸಮೂಹಗಳಾಗಿದ್ದು ಕ್ರಮವಾಗಿ ಉತ್ತರಕ್ಕೂ ಹಾಗು ದಕ್ಷಿಣಕ್ಕೂ ಸ್ಥಿತವಾಗಿವೆ. ಈ ದ್ವೀಪ ಸಮೂಹವನ್ನು ಹಡುಗು ಅಥವಾ ವಿಮಾನ ಪ್ರಯಾಣದ ಮೂಲಕ ಮಾತ್ರ ತಲುಪಬಹುದಾಗಿದೆ. 1950 ರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹವು ಭಾರತದ ಅವಿಭಾಜ್ಯ ಅಂಗವಾಗಿ 1956 ರಲ್ಲಿ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲ್ಪಟ್ಟವು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳಲ್ಲಿ ಒಟ್ಟಾರೆಯಾಗಿ 572 ದ್ವೀಪಗಳಿವೆ. ಇದರ ಒಟ್ಟಾರೆ ವಿಸ್ತೀರ್ಣ 7,950 ಚ.ಕಿ.ಮೀ.

 ಈ ದ್ವೀಪ ಜಲ ಕ್ರೀಡೆಗಳಿಗೆ ಫೇಮಸ್ ..!

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಡೈವಿಂಗ್, ಸ್ನಾರ್ಕ್ಲಿಂಗ್, ಸ್ಕೂಬಾ ಡೈವಿಂಗ್ ಮತ್ತು ಸರ್ಫಿಂಗ್‌ನಂತಹ ಜಲ ಕ್ರೀಡೆಗಳನ್ನು ಆನಂದಿಸಲು ಭಾರತದಲ್ಲಿನ ಅತ್ಯುತ್ತಮ ಸ್ಥಳವಾಗಿದೆ. ಹ್ಯಾವ್ಲಾಕ್ ದ್ವೀಪದಲ್ಲಿ ಕೆಲವು ಅತ್ಯುತ್ತಮ ಕಡಲತೀರಗಳು ಮತ್ತು ಡೈವಿಂಗ್ ಲಭ್ಯವಿದೆ. ಅಲ್ಲದೇ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಸಮುದ್ರ ದಂಡೆಗಳು ನೋಡಲು ವಿಹಂಗಮವಾಗಿದ್ದು, ಉತ್ಕೃಷ್ಟವಾದ ರಜೆಯ ಅನುಭವವನ್ನು ಕರುಣಿಸುತ್ತವೆ.

ಇಲ್ಲಿಯ ಜೈಲು ವರ್ಲ್ಡ್‌ ಫೇಮಸ್ಸು..!

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಕೇವಲ ತನ್ನ ಅತ್ಯದ್ಭುತ ಸಮುದ್ರ ತೀರಗಳಿಗಷ್ಟೇ ಪ್ರಸಿದ್ಧಿ ಪಡೆದಿಲ್ಲ. ಬದಲಿಗೆ ಇಲ್ಲಿಯ ಸೆಲ್ಯುಲರ್ ಜೈಲು ಸಹ ಸದಾ ಪ್ರವಾಸಿಗರಿಂದ ಗಿಜುಗುಡುತ್ತಿರುತ್ತದೆ. ಇದೊಂದು ಸುಪ್ರಸಿದ್ಧವಾದ ರಾಷ್ಟ್ರೀಯ ಸ್ಮಾರಕವಾಗಿದೆ. ಹಿಂದಿನ ಸ್ವಾತಂತ್ರ್ಯ ಹೋರಾಟಗಾರರನ್ನು ಕೂಡಿ ಹಾಕಿ ಅವರಿಗೆ ನೀಡಲಾದ ಅಮಾನವೀಯ ಕೃತ್ಯಗಳ ಕರುಣಾಜನಕ ಕಥೆಯನ್ನು ಸಾರಿ ಹೇಳುತ್ತಿದೆ ಈ ಜೈಲು. ಸ್ವಾತಂತ್ರ್ಯಪ್ರಿಯ ಪ್ರವಾಸಿಗರಿಗೆ ಇದೊಂದು ಯಾತ್ರಾಕ್ಷೇತ್ರ ಎಂಬಂತಾಗಿದೆ.

ಇಲ್ಲಿಗೆ ಹೀಗೆ ತಲುಪಿ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ವಿಮಾನ ಮತ್ತು ಹಡಗುಗಳ ಮೂಲಕ ತಲುಪಬಹುದು. ದೇಶದ ಮುಖ್ಯನಗರಗಳಿಂದ ರಾಜಧಾನಿ ಪೋರ್ಟ್ಬ್ಲೇರ್ ಗೆ ನೇರವಾಗಿ ವಿಮಾನ ಸಂಪರ್ಕವಿದೆ. ಇನ್ನು ಚೆನ್ನೈ, ವಿಶಾಖಪಟ್ಟಣಂ  ನಿಂದ ಅಂಡಮಾನ್ ದ್ವೀಪಕ್ಕೆ ಕ್ರೂಸ್ ಮೂಲಕ ತೆರಳಬಹುದು. ಆದರೆ ತಿಂಗಳಲ್ಲಿ ಮೂರು ಅಥವಾ ನಾಲ್ಕು ಬಾರಿ ಮಾತ್ರ ಈ ಪ್ರಯಾಣ ಲಭ್ಯವಿರುತ್ತದೆ.

ಇಲ್ಲಿರುವ ಅದ್ಭುತವಾದ ಪ್ರಕೃತಿಯ ಸೊಬಗು, ವಿಶಿಷ್ಟವಾದ ಬುಡಕಟ್ಟು ಜನಾಂಗ, ವೈವಿಧ್ಯಮಯ ಜಲಜೀವ ರಾಶಿಗಳು, ಅತಿ ವಿರಳ ಜನಸಂಖ್ಯೆ, ನಿಶ್ಕಲ್ಮಶ ವಾತಾವರಣ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.

ಅಂಡಮಾನ್ ನಲ್ಲಿ ಉಳಿದುಕೊಳ್ಳಲು ಸಾಕಷ್ಟು ರೆಸಾರ್ಟ್ ಗಳಿವೆ. ಸೀ ಫುಡ್ ಪ್ರಿಯರಿಗೆ ಬಾಯಿ ಚಪ್ಪರಿಸುವಂತೆ ಮಾಡುವ ಪ್ರಸಿದ್ಧ ರೆಸ್ಟೋರೆಂಟ್ ಗಳಿವೆ.

ಅಂಡಮಾನಿನ ಹ್ಯಾವ್ಲಾಕ್ ನಡುಗಡ್ಡೆಯ ರಾಧಾನಗರ ಕಡಲ ತೀರವು ಅತ್ಯಂತ ರೋಮಾಂಚಕವಾದ ಹಾಗೂ ಕಣ್ಣಿಗೆ ಹಬ್ಬವನ್ನುಂಟು ಮಾಡುವ ಸುಂದರ ಕಡಲ ತೀರವಾಗಿದೆ. ಪ್ರತಿಷ್ಠಿತ ಟೈಮ್ ನಿಯತಕಾಲಿಕೆಯು ಈ ಕಡಲ ತೀರವನ್ನು 2004 ರಲ್ಲಿ ಏಷಿಯಾದ ಅತಿ ಸುಂದರ ಕಡಲ ತೀರ ಹಾಗೂ ಜಗತ್ತಿನ ಏಳನೆಯ ಅದ್ಭುತ ಕಡಲ ತೀರ ಎಂಬ ಪಟ್ಟವನ್ನು ಕಟ್ಟಿದೆ.

ಇನ್ನು ಇಲ್ಲಿ  ಕೃಷಿ ಮತ್ತು ಕೈಗಾರಿಕೆಗಳು ಅತಿ ಕಡಿಮೆ ಪ್ರಮಾಣದಲ್ಲಿ ನಡೆಯುತ್ತವೆ. ಅಂಡಮಾನ್ ಮತ್ತು ನಿಕೋಬಾರ್ ಸರ್ಕಾರಕ್ಕೆ ಪ್ರವಾಸೋದ್ಯಮವು ಅತಿ ಮುಖ್ಯವಾದ ಆದಾಯದ ಮೂಲವಾಗಿದೆ.

ನವದಂಪತಿಗಳ ಹಾಟ್ ಫೇವ್ರೇಟ್ ಈ ದ್ವೀಪಗಳು..!!

ಅಂಡಮಾನ್ ಮತ್ತು ನಿಕೋಬಾರ್ ಕೇವಲ ಕಡಲ ತೀರಗಳಿಗಷ್ಟೆ ಅಲ್ಲದೆ ವೈವಿಧ್ಯಮಯ ಪಕ್ಷಿಗಳು, ಬಣ್ಣ ಬಣ್ಣದ ಹೂವುಗಳು ಮತ್ತು ಹಲವು ದಟ್ಟ ಅರಣ್ಯಗಳು ಹಾಗೂ ಸಾಕಷ್ಟು ವೈವಿಧ್ಯಮಯ ಜೀವರಾಶಿಗಳಿಗೆ ಹೆಸರುವಾಸಿಯಾಗಿದೆ. ನವ ದಂಪತಿಗಳ ಪಾಲಿಗಂತೂ ಇದು ಸ್ವರ್ಗವೇ ಸರಿ. ಸಾಕಷ್ಟು ಟೂರಿಸಂ ಕಂಪನಿಗಳು ಅಂಡಮಾನ್ ಗೆಂತಲೇ ಹಲವು ಹನಿಮೂನ್ ಪ್ಯಾಕೇಜ್ ಗಳನ್ನು ಮಾಡಿವೆ. ಇಲ್ಲಿಯ ಅಲಂಕಾರಿಕ ಚಿಪ್ಪುಗಳ ಬೃಹತ್ ಮಾರುಕಟ್ಟೆ ಮನಸೂರೆಗೊಳ್ಳುತ್ತದೆ.

ಜಾಲಿಬಾಯ್ ದ್ವೀಪ, ಹ್ಯಾವ್ಲಕ್ ದ್ವೀಪ, ಸಿಕ್ಯೂ ದ್ವೀಪ, ರಾಸ್ ದ್ವೀಪ ಮತ್ತು ವಂದೂರು ಸೀ ಗಾರ್ಡನ್ ಹೆಚ್ಚು ಪ್ರಸಿದ್ದಿ ಪಡೆದ ಸ್ಥಳಗಳು.

ಇನ್ನು ಕೋವಿಡ್ ಹಿನ್ನೆಲೆಯಲ್ಲಿ ಇಲ್ಲಿಗೆ ಭೇಟಿ‌ ನೀಡಲು ಸದ್ಯ ಕೆಲವು ಶರತ್ತುಗಳನ್ನು ಸ್ಥಳೀಯ ಸರ್ಕಾರ ವಿಧಿಸಿದೆ. ೭೨ ಗಂಟೆಗಳ‌ ಮುನ್ನ ಮಾಡಿದ ಕೋವಿಡ್ ನೆಗೆಟಿವ್ ವರದಿ ಇದ್ದರೆ ಮಾತ್ರ ದ್ವೀಪಗಳಿಗೆ ಪ್ರವೇಶವಿದೆ. ಕೋವಿಡ್ ಪರಿಸ್ಥಿತಿಯಲ್ಲಿ ಕೆಲವು ರೆಸಾರ್ಟ್ ಗಳು ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಅಲ್ಲಿಗೆ ತೆರಳುವ ಮುನ್ನವೇ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವುದು ಒಳಿತು.

Tags: andaman nikobarilandindiaNaturetravelling
ShareTweetSendShare
Join us on:

Related Posts

ವಂದೇ ಮಾತರಂ ಗೀತೆಯ ಸಾಲುಗಳು ಏಕದೇವೋಪಾಸನೆಯನ್ನು ನಂಬುವವರ ಧಾರ್ಮಿಕ ಭಾವನೆಗೆ ವಿರುದ್ಧವಾಗಿರಬಹುದು ಎಂದ ಶರ್ಮಿಳಾ ಟ್ಯಾಗೋರ್ ವಾದಕ್ಕೆ ಕಂಗನಾ ರನೌತ್ ಖಡಕ್ ಉತ್ತರ

ವಂದೇ ಮಾತರಂ ಗೀತೆಯ ಸಾಲುಗಳು ಏಕದೇವೋಪಾಸನೆಯನ್ನು ನಂಬುವವರ ಧಾರ್ಮಿಕ ಭಾವನೆಗೆ ವಿರುದ್ಧವಾಗಿರಬಹುದು ಎಂದ ಶರ್ಮಿಳಾ ಟ್ಯಾಗೋರ್ ವಾದಕ್ಕೆ ಕಂಗನಾ ರನೌತ್ ಖಡಕ್ ಉತ್ತರ

by Shwetha
August 23, 2026
0

ನವದೆಹಲಿ: ಭಾರತದ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ವಂದೇ ಮಾತರಂ ಗೀತೆಯ ಕುರಿತು ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ನೀಡಿರುವ ಹೇಳಿಕೆ ಈಗ ಬಾಲಿವುಡ್ ಮತ್ತು ರಾಜಕೀಯ...

ಮೋದಿ ಸರ್ಕಾರದ ಇ20 ನೀತಿಯಿಂದ ಸಕ್ಕರೆ ಮತ್ತು ಬೆಲ್ಲದ ಬೆಲೆ ಏರಿಕೆ: ನಿಮ್ಮ ಎಥೆನಾಲ್ ನೀತಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂದ ಕಾಂಗ್ರೆಸ್ ನಾಯಕ ಜೈರಾಂ ರಮೇಶ್

ಮೋದಿ ಸರ್ಕಾರದ ಇ20 ನೀತಿಯಿಂದ ಸಕ್ಕರೆ ಮತ್ತು ಬೆಲ್ಲದ ಬೆಲೆ ಏರಿಕೆ: ನಿಮ್ಮ ಎಥೆನಾಲ್ ನೀತಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂದ ಕಾಂಗ್ರೆಸ್ ನಾಯಕ ಜೈರಾಂ ರಮೇಶ್

by Shwetha
August 23, 2026
0

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಇ20 (ಶೇ. 20ರಷ್ಟು ಎಥೆನಾಲ್ ಮಿಶ್ರಿತ ಇಂಧನ) ನೀತಿಯು ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ನೇರ ಕಾರಣವಾಗಿದೆ ಎಂದು ಕಾಂಗ್ರೆಸ್...

ಎಫ್‌ಐಆರ್ ಹಾಕಿದ್ರೂ ಬೆದರಬೇಡಿ, ನೈಸ್ ಟೋಲ್ ಕಟ್ಟಬೇಡಿ: ಡಿ.ಕೆ. ಶಿವಕುಮಾರ್ ಸರ್ಕಾರ ನಡೆಸುತ್ತಿದ್ದಾರೋ ಅಥವಾ ನೈಸ್ ಕಂಪನಿಯನ್ನೋ-ಹೆಚ್.ಡಿ. ಕುಮಾರಸ್ವಾಮಿ

ಎಫ್‌ಐಆರ್ ಹಾಕಿದ್ರೂ ಬೆದರಬೇಡಿ, ನೈಸ್ ಟೋಲ್ ಕಟ್ಟಬೇಡಿ: ಡಿ.ಕೆ. ಶಿವಕುಮಾರ್ ಸರ್ಕಾರ ನಡೆಸುತ್ತಿದ್ದಾರೋ ಅಥವಾ ನೈಸ್ ಕಂಪನಿಯನ್ನೋ-ಹೆಚ್.ಡಿ. ಕುಮಾರಸ್ವಾಮಿ

by Shwetha
August 23, 2026
0

ಬೆಂಗಳೂರು: ನೈಸ್ ರಸ್ತೆಯ ಅಕ್ರಮ ಟೋಲ್ ವಸೂಲಾತಿ ವಿರುದ್ಧ ಸಮರ ಸಾರಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಇದೀಗ ಮತ್ತಷ್ಟು ಆಕ್ರಮಣಕಾರಿ ನಿಲುವು ತಳೆದಿದ್ದಾರೆ. ಎಫ್‌ಐಆರ್ ದಾಖಲಾದರೂ...

ಇನ್ಮುಂದೆ ಮಂಗಳೂರು ರೈಲ್ವೆ ಕರ್ನಾಟಕದ ಪಾಲು: ಪಾಲಕ್ಕಾಡ್ ಲಾಬಿಗೆ ಬ್ರೇಕ್, ಕೇರಳ ವಿರೋಧದ ನಡುವೆಯೂ ಕರಾವಳಿಗರ ದಶಕಗಳ ಕನಸು ನನಸು -ನಮಗೆ ಆದಾಯ ನಷ್ಟವಾಗುತ್ತೆ ಎಂದು ಮೋದಿ ಮೊರೆ ಹೋದ ಕೇರಳ CM

ಇನ್ಮುಂದೆ ಮಂಗಳೂರು ರೈಲ್ವೆ ಕರ್ನಾಟಕದ ಪಾಲು: ಪಾಲಕ್ಕಾಡ್ ಲಾಬಿಗೆ ಬ್ರೇಕ್, ಕೇರಳ ವಿರೋಧದ ನಡುವೆಯೂ ಕರಾವಳಿಗರ ದಶಕಗಳ ಕನಸು ನನಸು -ನಮಗೆ ಆದಾಯ ನಷ್ಟವಾಗುತ್ತೆ ಎಂದು ಮೋದಿ ಮೊರೆ ಹೋದ ಕೇರಳ CM

by Shwetha
August 23, 2026
0

ತಿರುವನಂತಪುರಂ: ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿದ್ದ ಮಂಗಳೂರು ಪ್ರದೇಶವನ್ನು ನೈರುತ್ಯ ರೈಲ್ವೆಗೆ ವರ್ಗಾವಣೆ ಮಾಡಿ ರೈಲ್ವೆ ಮಂಡಳಿ ತೆಗೆದುಕೊಂಡಿರುವ ನಿರ್ಧಾರಕ್ಕೆ ಕೇರಳ ಮುಖ್ಯಮಂತ್ರಿ ವಿಡಿ ಸತೀಶನ್ ತೀವ್ರ ಆಕ್ಷೇಪ...

ವಾಲ್ಮೀಕಿ ಹಗರಣ- ಸದನದಲ್ಲಿ ಸಾಕ್ಷಿ ನೀಡಲು ಯೋಗ್ಯತೆ ಇಲ್ಲದವರು ಈಗ ಪಾದಯಾತ್ರೆ ಮಾಡ್ತಿದ್ದಾರೆ: ಕುರ್ಚಿ ಉಳಿಸಿಕೊಳ್ಳಲು ಬಿಜೆಪಿ ನಾಯಕರ ಪಾದಯಾತ್ರೆ ನಾಟಕ- ಸಚಿವ ನಾಗೇಂದ್ರ ಪರ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್

ವಾಲ್ಮೀಕಿ ಹಗರಣ- ಸದನದಲ್ಲಿ ಸಾಕ್ಷಿ ನೀಡಲು ಯೋಗ್ಯತೆ ಇಲ್ಲದವರು ಈಗ ಪಾದಯಾತ್ರೆ ಮಾಡ್ತಿದ್ದಾರೆ: ಕುರ್ಚಿ ಉಳಿಸಿಕೊಳ್ಳಲು ಬಿಜೆಪಿ ನಾಯಕರ ಪಾದಯಾತ್ರೆ ನಾಟಕ- ಸಚಿವ ನಾಗೇಂದ್ರ ಪರ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್

by Shwetha
August 23, 2026
0

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಿಬಿಐ ರಾಜ್ಯಪಾಲರಿಗೆ ಪತ್ರ ಬರೆದಿರುವುದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram