ಬೆಂಗಳೂರು: ಹುಡುಗ, ಹುಡುಗಿಯರ ಸರ್ವಿಸ್ ಬೇಕೆಂದು ಮೆಸೆಜ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು ಪೂರ್ವ ವಿಭಾಗ ಸೆನ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆನಂದ್ ಶರ್ಮಾ ಬಂಧಿತ ಆರೋಪಿ. ಈ ವ್ಯಕ್ತಿ ಹಲವಾರು ಮೊಬೈಲ್ ನಂಬರ್ ಬಳಸಿ, ಹುಡುಗಿಯರ ಸರ್ವಿಸ್ ಬೇಕಾ? ಎಂದು ಕರೆ ಮಾಡುತ್ತಿದ್ದ. ಈತ ಕರೆ ಮಾಡುತ್ತಿದ್ದ ಬಗ್ಗೆ ಸುಭಿ ಎಂಬ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೊಬೈಲ್ ನಂಬರ್ ಆಧರಿಸಿ ಶೇಷಾದ್ರಿಪುರಂ ವಿ ಸ್ಟೇಜ್ ಪಿಜಿ ಬಳಿ ಆರೋಪಿಯನ್ನ ಪೂರ್ವ ವಿಭಾಗ CEN ಪೊಲೀಸರು ಬಂಧಿಸಿದ್ದಾರೆ. ಸದ್ಯ ಆರೋಪಿ ಬಂಧಿಸಿ ತನಿಖೆ ಕೈಗೊಂಡಿದ್ದಾರೆ.








