ಜಗನ್ ಮಹತ್ವದ ನಿರ್ಧಾರ : ಕೊರೊನಾದಿಂದ ಅನಾಥವಾದ ಮಗು ಹೆಸರಲ್ಲಿ 10 ಲಕ್ಷ ರೂ. ಎಫ್ ಡಿ
ಆಂಧ್ರಪ್ರದೇಶ : ಹೆಮ್ಮಾರಿ ಕೊರೊನಾ ಮರಣಕೇಕೆಯಲ್ಲಿ ಅದೆಷ್ಟೋ ಮಕ್ಕಳು ಅನಾಥವಾಗಿವೆ.
ಸಣ್ಣ ವಯಸ್ಸಿನಲ್ಲೇ ಪೋಷಕರನ್ನು ಕಳೆದಕೊಂಡ ಮಕ್ಕಳ ಬದುಕು ಸದ್ಯ ಶೂನ್ಯವಾಗಿದೆ.
ಹೀಗೆ ಕೊರೊನಾದಿಂದ ತಂದೆ ತಾಯಿಯನ್ನ ಕಳೆದುಕೊಂಡು ತಬ್ಬಲಿಗಳಾಗಿರುವ ಮಕ್ಕಳ ಭವಿಷ್ಯಕ್ಕೆ ಆಂಧ್ರದ ಜಗನ್ ಮೋಹನ್ ರೆಡ್ಡಿ ಸರ್ಕಾರ ಮಾನವೀಯ ನೆಲೆಗಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ.
ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಜಗನ್ ಸರ್ಕಾರ, ತಬ್ಬಲಿಯಾದ ಪ್ರತಿ ಮಗುವಿನ ಹೆಸರಿನಲ್ಲಿ 10 ಲಕ್ಷ ರೂ. ಹಣವನ್ನು ಬ್ಯಾಂಕ್‍ನಲ್ಲಿ ಫಿಕ್ಸೆಡ್ ಡೆಪಾಸಿಟ್ (ಎಫ್ ಡಿ) ಮಾಡಲಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಆಂಧ್ರ ಪ್ರದೇಶ್ ಸರ್ಕಾರ ನಿರ್ದೇಶನ ನೀಡಿದೆ.
ಈ ಕುರಿತು ಜಗನ್ ಮೋಹನ್ ರೆಡ್ಡಿ, ಬ್ಯಾಂಕ್ ಗಳ ಜತೆ ಮಾತುಕತೆ ನಡೆಸಿ ಹಣಕಾಸಿನ ಪ್ಯಾಕೇಜ್ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಲ್ಲದೆ ಮಗುವಿಗೆ 25 ವರ್ಷ ತುಂಬುವವರೆಗೆ ಈ ಮೊತ್ತವು ಫಿಕ್ಸೆಡ್ ಡೆಪಾಸಿಟ್ ಇರುತ್ತದೆ. ಈ ಠೇವಣಿಯಯಿಂದ ಆ ಮಗುವನ್ನು ಸಾಕುವವರಿಗೆ/ಪಾಲಕರಿಗೆ ಹೆಚ್ಚಿನ ಬಡ್ಡಿ ಒದಗಿಸುವ ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಿದ್ದಾರೆ.










