Andhra
ಸರ್ಕಾರ ಎಷ್ಟೇ ಕಠಿಣ ಕ್ರಮ ಕೈಗೊಂಡ್ರೂ ಜನರು ಮಾಡಿದ್ದೇ ಮಾಡ್ತಾರೆ. ಸಿಕ್ಕ ಸಿಕ್ಕ ಕೆಡಯಲ್ಲೆಲ್ಲಾ ಕಸ ಎಸೆದು ಹೋಗ್ತಾರೆ. ಎಷ್ಟೇ ದಂಡ ವಿಧಿಸುವ ಎಚ್ಚರಿಕೆ ಕೊಟ್ರೂ ಅದಕ್ಕೆ ನಮ್ ಜನರು ಕ್ಯಾರೇ ಅನ್ನೋದಿಲ್ಲ. ಆದ್ರೆ ಅಂತಹ ದೀಟ್ ವ್ಯಕ್ತಿಗಳಿಗೆ ಬಿಸಿ ಮುಟ್ಟಿಸಲು ಆಂಧ್ರದಲ್ಲಿ ಪಾಲಿಕೆ ತೆಗೆದುಕೊಂಡಿರುವ ಕ್ರಮ ತಿಳಿದ್ರೆ ನೀವೇ ಶಾಕ್ ಆಗ್ತೀರಾ, ಆಶ್ಚರ್ಯಕ್ಕೂ ಒಳಗಾಗ್ತೀರಾ. ನೀವು ಹಾಕಿದ ಕಸ ನಿಮಗೆ ಉಡುಗೊಎ ರೂಪದಲ್ಲಿ ವಾಪಸ್ ಬಂದ್ರೆ ಹೇಗಿರುತ್ತೆ ಅಲ್ವಾ. ಆದ್ರೆ ಇಂತದ್ದೊಂದು ಕಾನೂನನ್ನ ಆಂಧ್ರ ಸರ್ಕಾರ ಜಾರಿಗೊಳಿಸಿರೋದು ಮಾತ್ರ ಸುಳ್ಳಲ್ಲ.
ವಾಹನ ಸವಾರರೇ ಹುಷಾರ್ ..! ನೀವು ತಿಳಿದುಕೊಳ್ಳಲೇ ಬೇಕಾದ ವಿಚಾರ, ಯಾಮಾರಿದ್ರೆ ʼಡ್ರೈವಿಂಗ್ ಲೈಸೆನ್ಸ್ʼ ರದ್ದಾಗಬಹುದು..!
ಇಂತದ್ದೊಂದು ಕಾನೂನನ್ನು ಆಂಧ್ರ ಪ್ರದೇಶದ ಕಾಕಿನಾಡ ನಗರ ಪಾಲಿಕೆ ಜಾರಿಗೆ ತಂದಿದೆ. ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪಾಲಿಕೆ ಸಾಕಷ್ಟು ಪ್ರಯತ್ನ ಪಡುತ್ತಿದೆ. ಹಲವು ರೀತಿಯ ಕ್ರಮಗಳನ್ನು ಜಾರಿಗೆ ತಂದಿದೆ. ಹಾಗಿದ್ದರೂ ಜನರು ಪಾಲಿಕೆಗೆ ಸಹಕರಿಸದ ಹಿನ್ನೆಲೆಯಲ್ಲಿ ವಿನೂತನ ರೀತಿಯ ಕ್ರಮವನ್ನು ಅನುಸರಿಸಲಾಗುತ್ತಿದೆ. ಪಾಲಿಕೆ ಅಧಿಕಾರಿ ಸ್ವಾಪ್ನಿಲ್ ದಿನಕರ ಅವರು ನಗರ ವೀಕ್ಷಣೆಗೆ ತೆರಳಿದ್ದಾಗ ಮಹಿಳೆಯೊಬ್ಬರು ರಸ್ತೆ ಮೇಲೆ ಕಸ ಎಸೆಯುವುದು ಕಂಡುಬಂದಿದೆ. ತಕ್ಷಣ ಆಕೆಯ ಬಳಿಗೆ ಹೋದ ಅಧಿಕಾರಿಗಳು ಆಕೆಗೆ ಬೈದು, ಕಸವನ್ನು ವಾಪಾಸು ಅವರ ಮನೆಯ ಕಾಂಪೌಂಡ್ ಒಳಗೆ ಹಾಕಿದ್ದಾರೆ.
ಮಹಿಳೆ ಸುಮ್ಮನೆ ಕಸವನ್ನು ಎತ್ತಿಕೊಂಡು ಒಳನಡೆದಿದ್ದಾರೆ. ಈ ನಿಯಮ ಆ ಒಂದು ಮಹಿಳೆಗೆ ಮಾತ್ರವಲ್ಲ, ನಗರದ ಪ್ರತಿಯೊಬ್ಬ ಸಾರ್ವಜನಿಕರಿಗೆ ಅನ್ವಯಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೀವು ಕಸ ಎಸೆಯುವುದು ಅಧಿಕಾರಿಗಳ, ಪೌರ ಕಾರ್ಮಿಕರ ಕಣ್ಣಿಗೆ ಬಿದ್ದರೆ, ಆ ಕಸವನ್ನು ನಿಮ್ಮ ಮನೆಗೆ ವಾಪಾಸು ತಂದು ಹಾಕಲಾಗುವುದು ಎಂದು ತಿಳಿಸಿದ್ದಾರೆ. ಒಟ್ಟಾರೆ ಎಲ್ಲೆಡೆ ಈ ರೀತಿಯಾಗಿ ಶಿಕ್ಷೆ ವಿಧಿಸಿದ್ರೆ ಕಟ್ಟುನಿಟ್ಟಿನ ಕ್ರಮ ಪಾಲಿಸಿದ್ರೆ ಆಗಲಾದರೂ ಜನರು ಸಿಕ್ಕ ಸಿಕ್ಕ ಕಡೆಗಳಲ್ಲಿ ಕಸ ಬಿಸಾಡುವುದು ಕಡಿಮೆಯಾಗಬಹುದು.
Andhra
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel