Andra pradesh : ತಂಗಿಯ ಕುಡಿತದ ಚಟಕ್ಕೆ ಬೇಸತ್ತು, ಕೊಂದು ನದಿಗೆಸೆದ ಅಣ್ಣಂದಿರು….
ಇಬ್ಬರು ಅಣ್ಣ ತಮ್ಮಂದಿರುವ ಸೇರಿಕೊಂಡು ಸ್ವಂತ ತಂಗಿಯನ್ನೇ ಕೊಂದಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಇಬ್ಬರು ಸಹೋದರರು ಸೇರಿ ತಂಗಿಯನ್ನ ಕೊಂದು ಮೃತದೇಹ ನದಿಗೆಸೆದು ಈಗ ಪೊಲೀಸರ ಅತಿಥಿಯಾಗಿದ್ದಾರೆ. 20 ವರ್ಷದ ನಜ್ಮಾ ಕೊಲೆಯಾದ ಯುವತಿ. ಶಾರುಖ್ ಖಾನ್ (32) ಹಾಗೂ ಸರ್ತಾಜ್ (28) ಬಂಧಿತರು. ಆಂಧ್ರಪ್ರದೇಶದ ಕಾಕ್ರಾಲ ಗ್ರಾಮದಲ್ಲಿ ಘಟನೆ ನಡೆದಿದೆ. ಮಾರ್ಚ್ 13ರಂದು ನದಿಯಲ್ಲಿ ನಜ್ಮಾ ಮೃತದೇಹ ತೇಲಿಕೊಂಡು ಬಂದ ನಂತರ ಸ್ಥಳಿಯರು ದೂರು ದಾಖಲಿಸಿದ್ದಾರೆ.
ಪೋಸ್ಟ್ ಮಾರ್ಟಮ್ ವರದಿಯಲ್ಲಿ ಮಹಿಳೆ ಐದು ದಿನಗಳ ಹಿಂದೆ ಮೃತಪಟ್ಟಿರುವುದು ಗೊತ್ತಾಗಿದೆ. ಪೊಲೀಸರು ಸರ್ತಾಜ್ ಮತ್ತು ಶಾರುಖ್ ಅವರನ್ನ ವಿಚಾರಣೆ ಮಾಡಿದಾಗ ಶಾಕಿಂಗ್ ವಿಚಾರಗಳು ಬೆಳಕಿಗೆ ಬಂದಿವೆ. ಮಾರ್ಚ್ 8ರಂದು ರಾತ್ರಿ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಚಾರ್ ಮೂರ್ತಿ ಚೌಕ್ ಸಮೀಪ ನದಿಯಲ್ಲಿ ಮೃತದೇಹ ಎಸೆದಿದ್ದಾಗಿ ಹೇಳಿದ್ದಾರೆ.
ನಜ್ಮಾ ವೈವಾಹಿಕ ಜೀವನದ ಸಮಸ್ಯೆಗಳಿಂದ ಪೋಷಕರು ನೊಂದಿದ್ದರು. ನಜ್ಮಾ ಅವರು ಕುಡಿತದ ದಾಸಿಯಾಗಿದ್ದನ್ನೂ ಅವರ ಕುಟುಂಬ ಇಷ್ಟಪಡುತ್ತಿರಲಿಲ್ಲ. ಮಾರ್ಚ್ 8ರಂದು ನಜ್ಮಾ ಅವರು ಗ್ರೇಟರ್ ನೋಯ್ಡಾದ ಜಗತ್ ಫಾರ್ಮ್ ಮಾರ್ಕೆಟ್ನಲ್ಲಿ ಮದ್ಯಪಾನ ಮಾಡಿ ಅರೆಪ್ರಜ್ಞಾವ್ಯಸ್ಥೆಯಲ್ಲಿ ಬಿದ್ದಿದ್ದರು. ನಂತರ ಅಣ್ಣಂದರಿಗೂ ತಂಗಿಗೂ ಜಗಳ ನಡೆದಿತ್ತು. ನಂತರ ತಂಗಿಯನ್ನ ಕೊಲೆ ಮಾಡಿ ದೇಹವನ್ನ ನದಿಯಲ್ಲಿ ಬಿಸಾಡಿದ್ದಾರೆ. ಇದೀಗ ಸಹೋದರರ ವಿರುದ್ಧ ಕೊಲೆ ಆರೋಪದಡಿ ದೂರು ದಾಖಲಾಗಿದೆ.
Andhra pradesh: Tired of sister’s drinking addiction, brothers killed her and threw her into the river.