Andhrapradesh : 2024 ರ ಲೆಕ್ಷನ್ ಮತ ಹಾಕದಿದ್ರೆ…. ಮಾಜಿ ಸಿಎಂ ಚಂದ್ರಬಾಬು ನಾಯ್ಡು ಶಾಕಿಂಗ್ ನಿರ್ಧಾರ..!!!
ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ತಾವು 2024 ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬಾರದೇ ಇದ್ದಲ್ಲಿ ಅದೇ ನನ್ನ ಕೊನೆಯ ಚುನಾವಣೆಯಾಗಬಹುದು ಎಂದು ಹೇಳಿದ್ದಾರೆ..
ಹೌದು..!
ತೆಲುಗು ದೇಶಂ ಪಕ್ಷದ ( TDP) ಮುಖ್ಯಸ್ಥರಾದ ಚಂದ್ರಬಾಬು ನಾಯ್ಡು ಅವರು ಇತ್ತೀಚೆಗೆ ಕರ್ನೂಲ್ ನಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸಿದ್ದಾಗ ರೀತಿ ಹೇಳಿದ್ದಾರೆ..
ಇದು ತನಗೆ ಹಾಗೂ ಪತ್ನಿ ಮತ್ತು ಅವರ ನಂಬಿಕೆಗಳಿಗೆ ಕಳಂಕ ತಂದಿದೆ. ಸಭೆಯು ಗೌರವಾನ್ವಿತ ಸಭೆಯಲ್ಲ, ಬದಲಿಗೆ ಕೌರವ ಸಭೆಯಾಗಿದೆ.. ಮತ್ತೆ ವಿಧಾನಸಭೆಯನ್ನು ಗೌರವಾನ್ವಿತವಾಗಿ ಸಭೆಯನ್ನಾಗಿ ಮಾಡಲು ನಾವು ಅಧಿಕಾರಕ್ಕೆ ಬರಲು ಮತ ಹಾಕುವುದು ನಿಮ್ಮ ಕೈಲಿದೆ ಎಂದು ಜನರನ್ನುದ್ದೇಶಿಸಿ ಹೇಳಿದ್ದಾರೆ.
ಸಾರ್ವಜನಿಕರೇ, ನಾನು ವಿಧಾನಸಭೆಗೆ ಹೋಗಬೇಕಾದರೆ, ರಾಜ್ಯಕ್ಕೆ ನ್ಯಾಯ ಒದಗಿಸಬೇಕಾದರೆ ನಾನು ರಾಜಕೀಯದಲ್ಲಿ ಇರಬೇಕೆಂದು ಹೇಳುತ್ತೇನೆ. ನನ್ನನ್ನು ಗೆಲ್ಲಿಸದಿದ್ದರೆ ಇದೇ ನನ್ನ ಕೊನೆಯ ಚುನಾವಣೆಯಾಗಿರುತ್ತದೆ. ಇದನ್ನು ನಾನು ನಿಮಗೆ ಸ್ಪಷ್ಟವಾಗಿ ಹೇಳುತ್ತಿದ್ದೇನೆ ಎಂದಿದ್ದಾರೆ.








