Andre Russell : ಬೆತ್ತಲೆ ಫೋಟೋ ಹಂಚಿಕೊಂಡ ವೆಸ್ಟ್ ಇಂಡೀಸ್ ಆಟಗಾರ…
ಸ್ಪೋಟಕ ಬ್ಯಾಟಿಂಗ್ ಮತ್ತು ಸಿಕ್ಸರ್ ಗಳಿಂದಲೇ ಪ್ರೇಕ್ಷರನ್ನ ರಂಜಿಸುವ ಆಟಗಾರರಲ್ಲಿ ವೆಸ್ಟ್ ಇಂಡೀಸ್ ನ ಆಂಡ್ರೆ ರಸೆಲ್ ಸಹ ಒಬ್ಬರು. ಅಲ್ಲದೆ, ರಸ್ಸೆಲ್ ಏಂಕಾಗಿಯಾಗಿ ಪಂದ್ಯ ಗೆಲ್ಲಿಸೋ ಸಾಮಾರ್ಥ್ಯ ಹೊಂದಿರುವ ದೈತ್ಯ ಬ್ಯಾಟರ್.
ಇದೀಗ ಆಂಡ್ರೆ ರಸೆಲ್ ಸೋಶಿಯಲ್ ಮೀಡಿಯಾದಲ್ಲಿ ಇದ್ದಕ್ಕಿದ್ದಂತೆ ಭಾರಿ ಚರ್ಚೆಯಲ್ಲಿದ್ದಾರೆ. ರಸ್ಸೆಲ್ ತನ್ನ Instagram ಸ್ಟೋರಿಯಲ್ಲಿ ಸಂಪೂರ್ಣವಾಗಿ ಬೆತ್ತಲೆಯಾಗಿರುವ ಫೋಟೋವನ್ನು ಹಂಚಿಕೊಂಡು ಸುದ್ದಿಯಾಗಿದ್ದಾರೆ. ಅಲ್ಲದೇ, ತನ್ನ ಖಾಸಗಿ ಭಾಗವನ್ನು ಎಮೋಜಿಯೊಂದಿಗೆ ಮುಚ್ಚಿಕೊಂದಿದ್ದಾರೆ.
ಶಾಪಿಂಗ್ ಮಾಲ್ನಲ್ಲಿ ತೆಗೆದಿರುವ ನಗ್ನ ಸೆಲ್ಫಿಯನ್ನು ಆಂಡ್ರೆ ರಸೆಲ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಕನ್ನಡಿಯ ಮುಂದೆ ನಿಂತು ಫೋಟೋ ತೆಗೆದುಕೊಂಡಿರುವ ರಸೆಲ್, ತನ್ನ ಖಾಸಗಿ ಭಾಗವನ್ನು ತಲೆಬುರುಡೆಯ ಆಟಿಕೆ ಎಮೋಜಿಯಿಂದ ಕವರ್ ಮಾಡಿದ್ದಾರೆ. ಈ ಫೋಟೋ ನೋಡಿದ ಕ್ರಿಕೆಟ್ ಅಭಿಮಾನಿಗಳು ಶಾಕ್ ಆಗಿದ್ದಾರೆ. ಪೋಟೋ ವೈರಲ್ ಆಗುತ್ತಿದ್ದಂತೆ ಡಿಲಿಟ್ ಮಾಡಿಕೊಂಡಿದ್ದಾರೆ.
ರಸೆಲ್ ನಗ್ನ ಫೋಟೋಗೆ ಕ್ರಿಕೆಟ್ ಅಭಿಮಾನಿಗಳು ಟೀಕಿಸಿ ಮತ್ತು ಟ್ರೋಲ್ ಮಾಡಿ ಕಮೆಂಟ್ ಮಾಡುತ್ತಿದ್ದಾರೆ.
Andre Russell: West Indies player who shared a nude photo…








