ADVERTISEMENT
Tuesday, March 31, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ನಾನು ಹುಚ್ಚನ ಥರಾ ಕಾಣುತ್ತೇನಾ..? 300 ಪಂದ್ಯಗಳನ್ನು ಆಡಿದ್ದೇನೆ.. ಮಾತು ಕೇಳದ ಕುಲದೀಪ್‍ಗೆ ಚಳಿ ಬಿಡಿಸಿದ್ದ ಧೋನಿ..!

admin by admin
August 18, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram
ನಾನು ಹುಚ್ಚನ ಥರಾ ಕಾಣುತ್ತೇನಾ..? 300 ಪಂದ್ಯಗಳನ್ನು ಆಡಿದ್ದೇನೆ.. ಮಾತು ಕೇಳದ ಕುಲದೀಪ್‍ಗೆ ಚಳಿ ಬಿಡಿಸಿದ್ದ ಧೋನಿ..!
ಮಹೇಂದ್ರ ಸಿಂಗ್ ಧೋನಿ. ಎಲ್ಲಾ ಲೆಕ್ಕಚಾರಗಳನ್ನು ಬುಡಮೇಲು ಮಾಡುವ ಗ್ರೇಟ್ ಗ್ಯಾಂಬ್ಲರ್. ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿಕೊಂಡು ಪಂದ್ಯ ಮುಗಿಸುವ ವಿಶ್ವ ಕ್ರಿಕೆಟ್‍ನ ಅದ್ಭುತ ಮ್ಯಾಚ್ ಫಿನಿಶರ್. 4-5  ವರ್ಷಗಳ ಹಿಂದೆ ಕೂಲ್ ಕ್ಯಾಪ್ಟನ್ ಆಗಿದ್ದವರು ಬಳಿಕ  ಟೀಮ್ ಇಂಡಿಯಾದ ಚಾಣಕ್ಯ ವಿಕೆಟ್ ಕೀಪರ್ ಆಗಿದ್ದರು.  . ಅಷ್ಟೇ ಅಲ್ಲ, ವಿಕೆಟ್ ಹಿಂದುಗಡೆಯಿಂದಲೇ ಪಂದ್ಯದ ಗತಿಯನ್ನು ಕ್ಷಣ ಮಾತ್ರದಲ್ಲಿ ಅರಿತುಕೊಳ್ಳುವ ಮೈಂಡ್ ರೀಡರ್. ಇದೀಗ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. ಈಗ ಏನಿದ್ರೂ ಅವರ ಹೆಜ್ಜೆ ಗುರುತುಗಳು ಒಂದೊಂದಾಗಿ ನೆನಪು ಮಾಡಿಕೊಳ್ಳುತ್ತವೆ.

 

ಹೌದು, ಎದುರಾಳಿ ಆಟಗಾರರಿಗೆ ಮಹೇಂದ್ರ ಸಿಂಗ್ ಧೋನಿಯ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಆದ್ರೆ ಅದೇ ಎದುರಾಳಿ ಆಟಗಾರರ ಮನಸ್ಸನ್ನು ಮಹೇಂದ್ರ ಸಿಂಗ್ ಧೋನಿ ತುಂಬಾ ಸುಲಭಾಗಿ ಅರ್ಥಮಾಡಿಕೊಳ್ಳುತ್ತಾರೆ. ಇದು ಎಂಎಸ್‍ಡಿಗೆ ಒಲಿದು ಬಂದಿರುವ ಕಲೆ. ಶಾಲಾ ತಂಡದ ಗೋಲು ಕೀಪರ್ ಆಗಿದ್ದ ಧೋನಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಆಗಿದ್ದು ಹಳೆಯ ಕಥೆ.

Related posts

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

March 30, 2026
ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

March 30, 2026

ಬಳಿಕ ಟೀಮ್ ಇಂಡಿಯಾ ನಾಯಕನಾಗಿ ಮೂರು ಮಾದರಿಯ ಕ್ರಿಕೆಟ್‍ನಲ್ಲೂ ಟೀಮ್ ಇಂಡಿಯಾವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದು ಇತಿಹಾಸ ಪುಟ ಸೇರಿಕೊಂಡಿದೆ. ವರ್ತಮಾನದಲ್ಲಿ ಟೀಮ್ ಇಂಡಿಯಾದ ಹಿರಿಯಣ್ಣನಾಗಿ ಯುವ ಆಟಗಾರರಿಗೆ ಸ್ಪೂರ್ತಿಯನ್ನು ನೀಡುತ್ತಿದ್ದಾರೆ.

ಸುಮಾರು 14 ವರ್ಷಗಳಿಂದ ಟೀಮ್ ಇಂಡಿಯಾದಲ್ಲಿ ಣಿಸಿಕೊಳ್ಳುತ್ತಿರುವ ಧೋನಿ ಯಾವತ್ತಾದ್ರೂ ತಾಳ್ಮೆಯನ್ನು ಕಳೆದುಕೊಂಡಿರುವುದು ನೋಡಿದ್ದೀರಾ ? ಸಹ ಆಟಗಾರನಿಗೆ ಬೈದಿರುವುದನ್ನು ಗಮನಿಸಿದ್ದೀರಾ ? ಅಂತಹ ಯಾವುದೇ ಸನ್ನಿವೇಶಗಳು ಕ್ರಿಕೆಟ್ ಅಭಿಮಾನಿಗಳ ಗಮನಕ್ಕೆ ಬಂದಿಲ್ಲ. ಬಂದ್ರೂ ಇದೆಲ್ಲಾ ಆಟದಲ್ಲಿ ಮಾಮೂಲಿ ಅಂತ ಸುಮ್ಮನಾಗುತ್ತಾರೆ.

ಹಾಗಂತ ಧೋನಿ ಯಾವಾಗಲೂ ಕೂಲ್ ಆಗಿಯೇ ಇರುತ್ತಾರೆ ಅಂತ ಅಂದುಕೊಳ್ಳಬೇಡಿ. ಯಾಕಂದ್ರೆ ಧೋನಿ ಕೂಡ ಮನುಷ್ಯನೇ. ತಲೆಕೆಟ್ರೆ ಧೋನಿ ಬೈಯುವ ಸ್ಟೈಲ್ಲೇ ಬೇರೆ. ಒಂದು ಬಾರಿ ಏನಾದ್ರೂ ಸಿಟ್ಟು ಮಾಡ್ಕೊಂಡು ಧೋನಿ ಬೈದು ಬಿಟ್ರೆ ಅದು ಮುಟ್ಟಿನೋಡುವಂತಿರುತ್ತದೆ. ಹಾಗಂತ ಧೋನಿ ಸುಮ್ಮನೆ ಯಾರಿಗೂ ಬೈಯುವುದಿಲ್ಲ. ವಿಕೆಟ್ ಹಿಂದುಗಡೆ ನಿಂತುಕೊಂಡು ತಂಡದ ಆಟಗಾರರಿಗೆ ಆಗಾಗ ಟಿಪ್ಸ್ ಕೂಡ ಕೊಡುತ್ತಿರುತ್ತಾರೆ. ಒಂದು ವೇಳೆ ಅವರ ಮಾತನ್ನು ಕೇಳದೇ ಇದ್ರೆ ಮಾತ್ರ ಧೋನಿಯವರ ಪಿತ್ತ ನೆತ್ತಿಗೇರುತ್ತದೆ. ಅದ್ರಲ್ಲೂ ತಾನೇ ಬೆಳೆಸಿದ ಹುಡುಗ ತನಗೆ ಉಲ್ಟಾ ಹೊಡೆಯುತ್ತಾನೆ ಅಂದ ಮೇಲೆ ಧೋನಿ ಬಿಡಿ ಯಾರು ಕೂಡ ಸುಮ್ಮನಿರುವುದಿಲ್ಲ.ಅಂತಹುದ್ದೇ ಒಂದು ಘಟನೆ ಇತ್ತೀಚೆಗೆ ನಡೆದಿದೆ. ಅಂದ ಹಾಗೇ ಈ ವಿಚಾರವನ್ನು ಹೇಳಿದ್ದು ಯಾರು ಗೊತ್ತಾ ? ಅಷ್ಟಕ್ಕೂ ಮೈದಾನದಲ್ಲಿ ಧೋನಿಯವರಿಂದ ಬೈಸಿಕೊಂಡಿದ್ದು ಯಾರು ಗೊತ್ತಾ ? ಹೇಳಿದ್ರೆ ಅಚ್ಚರಿಪಡುತ್ತೀರಾ. ಯಾಕಂದ್ರೆ ಬೈಸಿಕೊಂಡ ಆಟಗಾರ ಧೋನಿಯ ಆಪ್ತ ಸ್ನೇಹಿತರಲ್ಲಿ ಒಬ್ಬರು.

ಅಷ್ಟಕ್ಕೂ ಧೋನಿಯ ಆಪ್ತವಲಯಲ್ಲಿ ಕಾಣಿಸಿವುದು ಸುರೇಶ್ ರೈನಾ, ರವೀಂದ್ರ ಜಡೇಜಾ, ಅಶ್ವಿನ್ ಹೀಗೆ ಆಟಗಾರರ ಪಟ್ಟಿ ಬೆಳೆಯುತ್ತಾ ಹೊಗುತ್ತೆ. ಅದ್ರೆ ಅವರು ಯಾರು ಕೂಡ ಅಲ್ಲ. ಬದಲಾಗಿ ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್ ಬೌಲರ್, ಚೈನಾಮೆನ್ ಖ್ಯಾತಿಯ ಕುಲದೀಪ್ ಯಾದವ್. ಈ ವಿಚಾರವನ್ನು ಸ್ವತಃ ಕುಲದೀಪ್ ಯಾದವ್ ಅವರೇ ಬಹಿರಂಗಪಡಿಸಿದ್ದಾರೆ.

ಕುಲದೀಪ್ ಯಾದವ್ ಧೋನಿ ಸಿಟ್ಟು ಮಾಡ್ಕೊಂಡು ಬೈದಿರುವುದನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ಹಾಗಂತ ಕುಲದೀಪ್ ಯಾದವ್‍ಗೆ ಏನು ಬೇಸರವಾಗಿಲ್ಲ. ಯಾಕಂದ್ರೆ ಧೋನಿ ಬೈದಿರೋದು ಕುಲದೀಪ್ ಯಾದವ್‍ಗೆ ಅವರಿಗೆ ಪ್ಲಸ್ ಪಾಯಿಂಟ್ ಕೂಡ ಆಗಿದೆ. ಬೈದ ನಂತರದ ಫಲಿತಾಂಶವನ್ನು ನೋಡಿದಾಗ ಧೋನಿ ಯಾಕೆ ಬೈದಿದ್ದಾರೆ ಅಂತ ಮನವರಿಕೆಯಾಯ್ತು. ಅಲ್ಲದೆ ಧೋನಿಯ ಚಾಣಕ್ಯ ಪ್ರತಿಭೆ ಎಂತಹುದ್ದು ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಯ್ತು. ಧೋನಿಯವರ ಅನುಭವ, ಯುವ ಆಟಗಾರರಿಗೆ ನೀಡುವ ಬೆಂಬಲ, ತಂಡಕ್ಕೆ ಯಾವ ರೀತಿ ರೋಲ್ ಮಾಡೆಲ್ ಆಗ್ತಾರೆ ಎಂಬುದು ಸಹ ಕುಲದೀಪ್ ಯಾದವ್‍ಗೆ ಮನದಟ್ಟಾಗಿದೆ. ಅಷ್ಟಕ್ಕೂ ಧೋನಿ ಕುಲದೀಪ್‍ಗೆ  ಯಾವಾಗ ಬೈದಿರೋದು. ಯಾಕೆ ಬೈದಿರೋದು ? ಕುಲದೀಪ್ ಯಾದವ್ ಏನು ತಪ್ಪು ಮಾಡಿದ್ರು ? ಈ ಪ್ರಶ್ನೆಗೆ ಕುಲದೀಪ್ ಉತ್ತರ ನೀಡೋದು ಹೀಗೆ. ಧೋನಿ ಭಯ್ಯಾ ನನಗೆ ಯಾವಾಗಲೂ ಟಿಪ್ಸ್ ಕೊಡ್ತಾ ಇದ್ರು. ವಿಕೆಟ್ ಹಿಂದುಗಡೆ ನಿಂತಕೊಂಡು ಸಲಹೆ ಮಾರ್ಗದರ್ಶನ ನೀಡ್ತಾ ಇದ್ರು. ಅದೊಂದು ಪಂದ್ಯದಲ್ಲಿ ಮಾತ್ರ ನಾನು ಧೋನಿಯರ ಮಾತನ್ನು ಸರಿಯಾಗಿ ಆಲಿಸಿಕೊಳ್ಳುತ್ತಿರಲಿಲ್ಲ. ಅದು ಶ್ರೀಲಂಕಾ ವಿರುದ್ದ ಇಂಧೋರ್‍ನಲ್ಲಿ ನಡೆಯುತ್ತಿದ್ದ ಟಿ-ಟ್ವೆಂಟಿ ಪಂದ್ಯ. ಆ ಪಂದ್ಯದಲ್ಲಿ ಲಂಕಾ ಬ್ಯಾಟ್ಸ್‍ಮೆನ್‍ಗಳು ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಸೂಚನೆ ನೀಡ್ತಾ ಇದ್ರು. ಆಗ ಧೋನಿ ನನಗೆ ಸಲಹೆ, ಸೂಚನೆಗಳನ್ನು ನೀಡುತ್ತಿದ್ರು. ಆದ್ರೂ ಚೆಂಡು ಸೀಮಾ ರೇಖೆ ದಾಟುತ್ತಿತ್ತು. ಕೊನೆಗೆ ಧೋನಿ ಕುಲದೀಪ್‍ಗೆ ಫೀಲ್ಡಿಂಗ್ ಸ್ವಲ್ಪ ಚೆಂಚ್ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ಆದ್ರೆ ಧೋನಿಯ ಮಾತನ್ನು ಕುಲದೀಪ್ ಕೇಳಲಿಲ್ಲ. ಕುಲದೀಪ್ ಯಾದವ್ ಅವರು ಮುಂದಿನ ಎಸೆತ ಎಸೆಯುವ ಆತುರದಲ್ಲಿದ್ದರು.

ಆಗ ಧೋನಿಯ ಇನ್ನೊಂದು ಮುಖ ಕುಲದೀಪ್ ಅವರಿಗೆ ದರ್ಶನವಾಯ್ತು. ಸೀದಾ ಕುಲದೀಪ್ ಯಾದವ್ ಬಳಿ ಬಂದು… ನಾನೇನು ಹುಚ್ಚನಾ.. ನಾನು ನಿನಗೆ ಹುಚ್ಚನಂತೆ ಕಾಣುತ್ತೇನಾ ? 300 ಏಕದಿನ ಪಂದ್ಯಗಳನ್ನು ಆಡಿದ್ದೇನೆ ಅಂತ ಮಹೇಂದ್ರ ಸಿಂಗ್ ಜೋರಾಗಿಯೇ ಹೇಳಿದ್ರು. ಹಿರಿಯ ಆಟಗಾರ, ಮಾಜಿ ನಾಯಕನ ಸಿಟ್ಟನ್ನು ಕಂಡ ಕುಲದೀಪ್ ಯಾದವ್ ಸುಮ್ಮನಾದ್ರು. ಅಷ್ಟೇ ಅಲ್ಲ, ಧೋನಿ ಹೇಳಿದಂತೆ ಫೀಲ್ಡಿಂಗ್ ಕೂಡ ಸೆಟ್ ಮಾಡಿದ್ರು. ಮುಂದಿನ ಎಸೆತದಲ್ಲಿ ಕುಲದೀಪ್ ಯಾದವ್ ವಿಕೆಟ್ ಉರುಳಿಸಿದ್ರು.

ಆಗ ಮತ್ತೆ ಧೋನಿ ಕುಲದೀಪ್ ಯಾದವ್ ಬಳಿ ಬಂದು… ನಿನಗೆ ನಾನು ಏನು ಹೇಳಿದ್ದೇನೆ ಎಂಬುದು ಈಗ ಅರ್ಥ ಆಯ್ತಾ ಎಂದು ಹೇಳಿದ್ರು. ಹೀಗೆ ಧೋನಿಯವರಿಂದ ತಾನು ಹೇಗೆ ಬೈಸಿಕೊಂಡೆ, ಯಾಕೆ ಬೈಸಿಕೊಂಡೆ. ಅವರ ಬೈದಿರುವುದರಿಂದ ಏನನ್ನು ಕಲಿತುಕೊಂಡೆ ಎಂಬುದನ್ನು ಕುಲದೀಪ್ ಯಾದವ್ ಬಹಿರಂಗಪಡಿಸಿದ್ರು. ಮೈದಾನದಲ್ಲಿ ಮಹೇಂದ್ರ ಸಿಂಗ್ ಮಾಡುವ ಗೇಮ್ ಪ್ಲಾನ್ ತಂಡಕ್ಕೆ ಮತ್ತು ಬೌಲರ್‍ಗಳಿಗೆ ಯಾವ ರೀತಿ ನೆರವಾಗುತ್ತೆ ಎಂಬ ವಿಚಾರಗಳನ್ನು ಈ ಕಾರ್ಯಕ್ರಮದಲ್ಲಿ ಚಾಹಲ್ ಮತ್ತು ಕುಲದೀಪ್ ಯಾದವ್ ಹೇಳಿಕೊಂಡ್ರು.

ಒಟ್ಟಿನಲ್ಲಿ ತಾಳ್ಮೆಯ ಪ್ರತೀಕ ಎಂಬಂತಿದ್ದ ಮಹೇಂದ್ರ ಸಿಂಗ್ ಧೋನಿ ತಾಳ್ಮೆ ಕಳೆದುಕೊಂಡ್ರೆ ಸಹ ಆಟಗಾರರ ಚಳಿ ಕೂಡ ಬಿಡಿಸ್ತಾರೆ. ಯುವ ಆಟಗಾರರನ್ನು ಪಳಗಿಕೊಂಡು ತಂಡವನ್ನು ಉತ್ತುಂಗಕ್ಕೇರಿಸುತ್ತಿದ್ದ ಧೋನಿಯ ಯಶಸ್ಸಿನ ಗುಟ್ಟು ಕೂಡ ಇದೇ ಆಗಿರಬಹುದು.

 

Tags: #former Indian Captain MS Dhon#kukdeep yadav#Kya Main Pagal Hu Main 300 ODI Khela HubcciICCM.S Dhoniteam india
ShareTweetSendShare
Join us on:

Related Posts

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

by Shwetha
March 30, 2026
0

ತಿಂಗಳಿಡೀ ಕತ್ತೆ ಥರ ದುಡಿಯೋದೆ ಒಂದನೇ ತಾರೀಖು ಬರೋ ಆ ಸಂಬಳದ ಮೆಸೇಜ್ ನೋಡೋಕೆ ಅಲ್ವಾ? ಆದ್ರೆ ಏಪ್ರಿಲ್ ಒಂದರಿಂದ ನಮ್ಮ ನಿಮ್ಮೆಲ್ಲರ ಸಂಬಳದ ರೂಲ್ಸ್ ಕಂಪ್ಲೀಟ್...

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

by Shwetha
March 30, 2026
0

ರಾಜ್ಯದಲ್ಲಿ ಬಜೆಟ್ ಅಧಿವೇಶನ ಮುಕ್ತಾಯಗೊಂಡ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಚಿವರು ಹಾಗೂ ಶಾಸಕರು ಸಂಪೂರ್ಣವಾಗಿ ಚುನಾವಣಾ ಮೂಡ್‌ಗೆ ಜಾರಿದ್ದಾರೆ. ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ...

ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಮೊಟ್ಟೆ ಮಾಂಸ ತಿನ್ನುವಂತಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ

ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಮೊಟ್ಟೆ ಮಾಂಸ ತಿನ್ನುವಂತಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ

by Shwetha
March 30, 2026
0

ಮುಂಬರುವ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದ್ದು ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು...

ಖಾಲಿ ಇರುವ 8 ಸಾವಿರ ಪಿಎಸ್ಐ ಹುದ್ದೆ ಭರ್ತಿ ಅಪರಾಧಿಗಳ ವಿರುದ್ಧ ನಿಷ್ಠುರ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

ಖಾಲಿ ಇರುವ 8 ಸಾವಿರ ಪಿಎಸ್ಐ ಹುದ್ದೆ ಭರ್ತಿ ಅಪರಾಧಿಗಳ ವಿರುದ್ಧ ನಿಷ್ಠುರ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

by Shwetha
March 30, 2026
0

ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಪಿಎಸ್ಐಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಯುವಜನತೆಗೆ ಹಾಗೂ ಪೊಲೀಸ್ ಇಲಾಖೆಗೆ ಭರ್ಜರಿ ಸಿಹಿಸುದ್ದಿ...

ಎಚ್ಚರ ನಿಮ್ಮ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಇದ್ದರೆ ಜೈಲು ಫಿಕ್ಸ್ ಇಂದೇ ಈ ಕಾನೂನು ತಿಳಿದುಕೊಳ್ಳಿ

ಎಚ್ಚರ ನಿಮ್ಮ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಇದ್ದರೆ ಜೈಲು ಫಿಕ್ಸ್ ಇಂದೇ ಈ ಕಾನೂನು ತಿಳಿದುಕೊಳ್ಳಿ

by Shwetha
March 30, 2026
0

ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇರುವುದು ಸಾಮಾನ್ಯ. ಗ್ಯಾಸ್ ಖಾಲಿಯಾದರೆ ಊಟಕ್ಕೆ ಪರದಾಡಬೇಕು ಎಂಬ ಭಯದಿಂದ ಅನೇಕರು ಮೂರ್ನಾಲ್ಕು ಸಿಲಿಂಡರ್ ಗಳನ್ನು ಅಡ್ವಾನ್ಸ್ ಆಗಿ ಬುಕ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram