ಲಂಡನ್, ಮೇ 24 : ಲಂಡನ್ ನ ಕೋರ್ಟ್ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರಿಗೆ ಸಾಲ ಒಪ್ಪಂದದ ಪ್ರಕಾರ 21 ದಿನಗಳೊಳಗೆ ಚೀನಾದ ಮೂರು ಬ್ಯಾಂಕುಗಳಿಗೆ ಸುಮಾರು 717 ಮಿಲಿಯನ್ ಡಾಲರ್ ನೀಡುವಂತೆ ಆದೇಶ ನೀಡಿದೆ.
ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಲಂಡನ್ ನ ಕೋರ್ಟ್ ವಿಚಾರಣೆ ನಡೆಸಿತು.2012ರ ಫೆಬ್ರವರಿಯಲ್ಲಿ ಇಂಡಸ್ಟ್ರಿಯಲ್ ಆ್ಯಂಡ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ(ಐಸಿಬಿಸಿ), ಚೀನಾ ಡೆವಲಪ್‌ಮೆಂಟ್ ಬ್ಯಾಂಕ್ ಮತ್ತು ಎಕ್ಸ್ ಪೋರ್ಟ್-ಇಂಪೋರ್ಟ್ ಬ್ಯಾಂಕ್ ಆಫ್ ಚೀನಾ, ಬ್ಯಾಂಕುಗಳಿಂದ ತೆಗೆದುಕೊಂಡ ಸಾಲಗಳಿಗೆ ವೈಯಕ್ತಿಕ ಖಾತ್ರಿ ನೀಡಲು ಅನಿಲ್ ಅಂಬಾನಿ ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಸಾಲ ಒಪ್ಪಂದ ಉಲ್ಲಂಘಿಸಿದ್ದಾರೆ ಎಂದು ಕೋರ್ಟ್ ನಲ್ಲಿ ದಾವೆ ಹೂಡಿತ್ತು.
ವಿಚಾರಣೆ ನಡೆಸಿದ ಯುಕೆ ಹೈಕೋರ್ಟ್ ಮತ್ತು ಲಂಡನ್ ವೇಲ್ಸ್ ನಲ್ಲಿ ಆದೇಶ ನೀಡಿದ ನ್ಯಾಯಾಧೀಶ ನಿಗೆಲ್ ಟೀರ್, ಪ್ರತಿವಾದಿಯ ಮೇಲೆ ಸಾಲದ ಖಾತರಿಗೆ ಸಂಬಂಧ ಪಟ್ಟ ಆರೋಪವಿದ್ದು, ಅವರು ತಪ್ಪಿತಸ್ಥ ಎಂದು ಸಾಬೀತಾಗಿದೆ.
ಅನಿಲ್ ಅಂಬಾನಿಯವರು ಸಾಲ ಒಪ್ಪಂದದ ಪ್ರಕಾರ 21 ದಿನಗಳೊಳಗೆ ಚೀನಾದ ಬ್ಯಾಂಕಿಗೆ ಮೊತ್ತವನ್ನು ಭರಿಸಬೇಕು ಎಂದು ತೀರ್ಪು ನೀಡಿದರು.ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ (ಆರ್‌ಕಾಮ್) ಪಡೆದ ಕಾರ್ಪೊರೇಟ್ ಸಾಲವು ವೈಯಕ್ತಿಕ ಖಾತರಿಗೆ ಸಂಬಂಧ ಪಟ್ಟದಾಗಿದ್ದು, ಅನಿಲ್ ಅಂಬಾನಿಯವರು ತಮ್ಮ ಪರವಾಗಿ ಯಾವುದೇ ವೈಯಕ್ತಿಕ ಸಾಲ ಪಡೆದಿಲ್ಲ.
ಚೀನಾದ ಇಂಡಸ್ಟ್ರಿಯಲ್ ಅಂಡ್ ಕಮರ್ಷಿಯಲ್ ಬ್ಯಾಂಕ್ ಗಳಿಂದ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ (ಆರ್‌ಕಾಮ್) ಪಡೆದ ಕಾರ್ಪೊರೇಟ್ ಸಾಲಕ್ಕೆ ವೈಯಕ್ತಿಕ ಖಾತರಿ ನೀಡಲಾಗಿದೆ ಎಂದು ಅನಿಲ್ ಅಂಬಾನಿ ವಕ್ತಾರರು ತಿಳಿಸಿದ್ದಾರೆ.ಭಾರತದಲ್ಲಿ ಲಂಡನ್ ಕೋರ್ಟ್ ತೀರ್ಪು ಸದ್ಯಕ್ಕೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಅನಿಲ್ ಅಂಬಾನಿ ಅವರು ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.








