ಏಜಾಜ್ ದಾಖಲೆ… ಅನಿಲ್ ಕುಂಬ್ಳೆ ಹೇಳಿದ್ದೇನು..? Anil Kumble saaksha tv
ಮುಂಬೈನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಮತ್ತು ಟೀಂ ಇಂಡಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಬೌಲರ್ ಗಳ ಅಬ್ಬರ ಜೋರಾಗಿದೆ.
ಮೊದಲು ಕಿವೀಸ್ ಸ್ಪಿನ್ನರ್ ಏಜಾಜ್ ಪಟೇಲ್ ಭಾರತವನ್ನು ಒಂಟಿ ಸಲಗದಂತೆ ಕಾಡಿದ್ರೆ, ಈಗ ಟೀಂ ಇಂಡಿಯಾದ ಬೌಲರ್ ಗಳು ಕಿವೀಸ್ ಬ್ಯಾಟರ್ ಗಳ ಕಿವಿ ಹಿಂಡುತ್ತಿದ್ದಾರೆ.
ಇನ್ನು ಈ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಬೌಲರ್ ಏಜಾಜ್ ಪಟೇಲ್ ದಾಖಲೆಗಳ ಸರಮಾಲೆಯನ್ನೇ ಹಾಕಿಕೊಂಡಿದ್ದಾರೆ.
ಟೀಂ ಇಂಡಿಯಾದ ಎಲ್ಲಾ ವಿಕೆಟ್ ಗಳನ್ನ ಪಡೆದ ಏಜಾಜ್, ಟೆಸ್ಟ್ ಕ್ರಿಕೆಟ್ನಲ್ಲಿ ಇನ್ನಿಂಗ್ಸ್ ಒಂದರಲ್ಲಿ ಎಲ್ಲಾ 10 ವಿಕೆಟ್ ಪಡೆದ ನ್ಯೂಜಿಲೆಂಡ್ನ ಮೊದಲ ಕ್ರಿಕೆಟರ್ ಆಗಿ ದಾಖಲೆ ಬರೆದ್ದಾರೆ.
ಮುಂಬೈ ಟೆಸ್ಟ್ನಲ್ಲಿ ಪಟೇಲ್ 47.5 ಓವರುಗಳ ಮ್ಯಾರಾಥಾನ್ ಬೌಲಿಂಗ್ ಸ್ಪೆಲ್ ಮಾಡಿದ್ದರು. 119 ರನ್ಗಳನ್ನು ನೀಡಿ ಎಲ್ಲಾ 10 ವಿಕೆಟ್ ಪಡೆದು ದಾಖಲೆ ಬರೆದರು.
ಅಷ್ಟೇ ಅಲ್ಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಎಲ್ಲಾ 10 ವಿಕೆಟ್ ಪಡೆದ ಮೊದಲ ಬೌಲರ್ ಅನ್ನುವ ಖ್ಯಾತಿಯನ್ನು ಪಟೇಲ್ ಮುಡಿಗೇರಿಸಿಕೊಂಡರು.
ಈ ಹಿಂದೆ ಇಂಗ್ಲೆಂಡ್ನ ಜಿಮ್ ಲೇಕರ್ 1956ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಓಲ್ಡ್ ಟ್ರಾಫರ್ಡ್ ಟೆಸ್ಟ್ನಲ್ಲಿ 53 ರನ್ ಕೊಟ್ಟು 10 ವಿಕೆಟ್ ಪಡೆದಿದ್ದರು.
ಭಾರತದ ಅನಿಲ್ ಕುಂಬ್ಳೆ ದೆಹಲಿಯ ಫಿರೋಜ್ ಷಾ ಮೈದಾನದಲ್ಲಿ 1999ರಲ್ಲಿ ಪಾಕಿಸ್ತಾನ ವಿರುದ್ಧ 74 ರನ್ ನೀಡಿ ಎಲ್ಲಾ 10 ವಿಕೆಟ್ ಪಡೆದುಕೊಂಡಿದ್ದರು.
ಇನ್ನು ಏಜಾಜ್ ಪಟೇಲ್ ಅವರ ಈ ಸಾಧನೆಯನ್ನು ಕುಂಬ್ಳೆ ಮೆಚ್ಚಿಕೊಂಡು ಟ್ಟಿಟ್ಟರ್ ಮೂಖೇನ ಶುಭಾಶಯ ತಿಳಿಸಿದ್ದಾರೆ.
ಅನಿಲ್ ಕುಂಬ್ಳೆ ತಮ್ಮ ಟ್ವೀಟ್ ನಲ್ಲಿ.. ವೆಲ್ ಕಂ ಟು ಕ್ಲಬ್ ಏಜಾಜ್ ಪಟೇಲ್, ನೀವು ಚೆನ್ನಾಗಿ ಬೌಲ್ ಮಾಡಿದ್ದೀರಾ. ವಿಶೇಷ ಶ್ರಮಕ್ಕೆ ತಕ್ಕ ಪ್ರತಿಫಲ ಎಂದಿದ್ದಾರೆ.








