ಅಸ್ಥಿಪಂಜರದ ಸ್ನಾಯುವಿನ ನಿರ್ವಹಣೆಗೆ ಸಸ್ಯ ಪ್ರೋಟೀನ್ ಗಳಿಗಿಂತ ಪ್ರಾಣಿ ಪ್ರೋಟೀನ್ ಗಳು ಪರಿಣಾಮಕಾರಿ
ಹೊಸದಿಲ್ಲಿ, ಜುಲೈ 20: ವಯಸ್ಸಾದಂತೆ ಅಸ್ಥಿಪಂಜರದ ಸ್ನಾಯುವಿನ ದ್ರವ್ಯರಾಶಿಯ ನಿರ್ವಹಣೆಯನ್ನು ಬೆಂಬಲಿಸುವಲ್ಲಿ ಸಸ್ಯ ಪ್ರೋಟೀನ್ಗಳಿಗಿಂತ ಪ್ರಾಣಿ ಪ್ರೋಟೀನ್ಗಳು ಹೆಚ್ಚು ಪರಿಣಾಮಕಾರಿ ಎಂದು ಹೊಸ ಸಂಶೋಧನೆಗಳು ತೋರಿಸಿದೆ.
ಸಂಶೋಧನೆಯನ್ನು ದಿ ಫಿಸಿಯೋಲಾಜಿಕಲ್ ಸೊಸೈಟಿಯ ವರ್ಚುವಲ್ ಫ್ಯೂಚರ್ ಫಿಸಿಯಾಲಜಿ 2020 ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾಯಿತು.
2006 ರಿಂದ ಯುಕೆಯಲ್ಲಿ ಸಸ್ಯಾಹಾರಿಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ, ಅಂದರೆ ಗ್ರೇಟ್ ಬ್ರಿಟನ್ನಲ್ಲಿ ಸುಮಾರು 600,000 ಸಸ್ಯಾಹಾರಿಗಳಿದ್ದಾರೆ. ಸಸ್ಯ ಆಧಾರಿತ ಆಹಾರವು ಪರಿಸರಕ್ಕೆ ಪ್ರಯೋಜನಕಾರಿ ಎಂದು ನಮಗೆ ತಿಳಿದಿದ್ದರೂ, ವಯಸ್ಸಾದವರಲ್ಲಿ ಸ್ನಾಯುಗಳನ್ನು ಬಲವಾಗಿಡಲು ಈ ಆಹಾರಗಳು ಎಷ್ಟು ಆರೋಗ್ಯಕರವೆಂದು ನಮಗೆ ತಿಳಿದಿಲ್ಲ.
ವಯಸ್ಸಾದಂತೆ ಸ್ನಾಯುಗಳ ನಷ್ಟ, ಅಮೈನೊ ಆಮ್ಲಗಳಿಂದ ನಿರ್ಮಿಸಲ್ಪಡುವ ಸ್ನಾಯು ಪ್ರೋಟೀನ್ಗಳ ಕಡಿತ ಉಂಟಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದು ಈ ಅಮೈನೋ ಆಮ್ಲಗಳು ನಾವು ತಿನ್ನುವ ಪ್ರೋಟೀನ್ ನಿಂದ ಮತ್ತು ನಾವು ಮಾಡುವ ವ್ಯಾಯಾಮದಿಂದ ರೂಪುಗೊಳ್ಳುತ್ತವೆ ಎಂದು ಹೇಳಿದ್ದಾರೆ.
ಲಂಡನ್ ನ ಕಿಂಗ್ಸ್ ಕಾಲೇಜಿನ ಆಲಿವರ್ ವಿಟಾರ್ಡ್ ಸೋಯಾ ಮತ್ತು ಗೋಧಿ ಪ್ರೋಟೀನ್ಗಳ ಬಗ್ಗೆ ದಿ ಫಿಸಿಯೋಲಾಜಿಕಲ್ ಸೊಸೈಟಿಯ ಫ್ಯೂಚರ್ ಫಿಸಿಯಾಲಜಿ 2020 ಸಮ್ಮೇಳನದಲ್ಲಿ ಸಂಶೋಧನೆಯನ್ನು ಪ್ರಸ್ತುತಪಡಿಸುತ್ತಿದ್ದು, ಸ್ನಾಯುಗಳನ್ನು ನಿರ್ಮಿಸುವ ಪ್ರತಿಕ್ರಿಯೆಯನ್ನು ಸಾಧಿಸಲು ಈ ಸಸ್ಯ ಪ್ರೋಟೀನ್ಗಳು ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಾಗಿದೆ ಎಂದು ತಿಳಿದುಬಂದಿದೆ.

ಒಟ್ಟು ಪ್ರೋಟೀನ್ ಸೇವನೆಯನ್ನು ಸರಿಹೊಂದಿಸದೆ ಪ್ರಾಣಿ ಆಧಾರಿತ ಪ್ರೋಟೀನ್ ಆಹಾರದಿಂದ ಸಸ್ಯ ಆಧಾರಿತ ಆಹಾರಕ್ಕೆ ಪರಿವರ್ತನೆ ಮಾಡುವುದು ವಯಸ್ಸಾದ ಸಮಯದಲ್ಲಿ ಸ್ನಾಯುವಿನ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆಹಾರದ ನಡವಳಿಕೆಯನ್ನು ಬದಲಿಸುವ ಬದಲು ಹೆಚ್ಚು ಸಮತೋಲಿತ ಮತ್ತು ಕಡಿಮೆ ಪ್ರಮಾಣದಲ್ಲಿ ಪ್ರಾಣಿ ಮತ್ತು ಸಸ್ಯ ಆಧಾರಿತ ಪ್ರೋಟೀನ್ಗಳನ್ನು ತಿನ್ನುವುದು ಉತ್ತಮ ಎಂದು ಸಂಶೋಧನೆಗಳು ತಿಳಿಸಿವೆ.
ವಿಟಾರ್ಡ್ ಮತ್ತು ಅವರ ಸಹೋದ್ಯೋಗಿಗಳು ಸ್ವಯಂಸೇವಕರಲ್ಲಿ ಅಧ್ಯಯನಗಳನ್ನು ನಡೆಸಿದ್ದು, ಪ್ರಾಣಿ ಆಧಾರಿತ ಪ್ರೋಟೀನ್ ಸೇವಿಸುವವರ ಜೊತೆಗೆ ಸಸ್ಯ ಆಧಾರಿತ ಪ್ರೋಟೀನ್ ಅನ್ನು ಸೇವಿಸುವುವರನ್ನು ಹೋಲಿಕೆ ಮಾಡಲಾಗಿದೆ. ಅಧ್ಯಯನದಲ್ಲಿ ಭಾಗವಹಿಸಿದವರ ಸ್ನಾಯುಗಳಲ್ಲಿನ ಬದಲಾವಣೆಗಳನ್ನು ಪರೀಕ್ಷಿಸಲು, ಅಮೈನೊ ಆಮ್ಲಗಳಿಂದ ಸ್ನಾಯುಗಳು ಎಷ್ಟು ಬೇಗನೆ ನಿರ್ಮಾಣಗೊಳ್ಳುತ್ತಿವೆ ಎಂಬುದನ್ನು ನೋಡಲು ಐಸೊಟೋಪ್ ವಿಧಾನ, ರಕ್ತದ ಮಾದರಿ ಮತ್ತು ಅಸ್ಥಿಪಂಜರದ ಸ್ನಾಯು ಬಯಾಪ್ಸಿಗಳು ಸೇರಿದಂತೆ ಹಲವಾರು ತಂತ್ರಗಳನ್ನು ಅವರು ಬಳಸಿದ್ದಾರೆ.
ಇಲ್ಲಿಯವರೆಗಿನ ಈ ಸಂಶೋಧನೆಯು ಸಸ್ಯ-ಆಧಾರಿತ ಸೋಯಾ ಮತ್ತು ಗೋಧಿ ಪ್ರೋಟೀನ್ ಮೂಲಗಳೊಡನೆ ಹೋಲಿಕೆ ಮಾಡಲಾಗಿದ್ದು, ಸಂಶೋಧಕರು ಓಟ್, ಕ್ವಿನೋವಾ ಮತ್ತು ಮೆಕ್ಕೆ ಜೋಳದಂತಹ ಇತರ ಸಸ್ಯ ಪ್ರೋಟೀನ್ಗಳ ಕುರಿತು ಹೆಚ್ಚಿನ ಸಂಶೋಧನೆ ನಡೆಸಲಿದ್ದಾರೆ.








