Aniruddh : ಜೊತೆ ಜೊತೆಯಲಿ ನಟ ಅನಿರುದ್ಧ ಕಿರುತೆರೆಯಿಂದ ದೂರ – ನಿರ್ಮಾಕರ ಖಡಕ್ ನಿರ್ಧಾರ…!!!
ವರ್ಷಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ನಟಿಸಿ ಖ್ಯಾತಿ ಗಳಿಸಿ ನಂತರ ಸಿನಿಮಾರಂಗದಿಂದ ಬ್ರೇಕ್ ಪಡೆದುಕೊಂಡಿದ್ದ ಅನಿರುದ್ಧ ಅವರು ಮತ್ತೆ ಬಣ್ಣದ ಜಗತ್ತಿಗೆ ಕಮ್ ಬ್ಯಾಕ್ ಮಾಡಿದ್ದು ಮಾತ್ರ ಕಿರುತೆರೆಯ’ ಜೊತೆ ಜೊತೆಯಲಿ’ ಧಾರಾವಾಹಿಯ ಮೂಲಕ..
ಈ ಧಾರಾವಾಹಿ ಅಷ್ಟೇ ಬೇಗ ಜನರ ಫೇವರೇಟ್ ಆಯ್ತು.. ಆರ್ಯವರ್ಧನ್ ಆಗಿಯೇ ಅನಿರುದ್ಧ ಫೇಮ್ ಗಳಿಸಿದರೂ ಸಹ.. ಸಿನಿಮಾಗಳಿಗಿಂತ ಧಾರವಾಹಿ ಮೂಲಕವೇ ಆರ್ಯವರ್ಧನ್ ಫೇಮಸ್ ಆದರು.. ಅಪಾರ ಅಭಿಮಾನಿಗಳನ್ನೂ ಸಂಪಾದಿಸಿದ್ರು..
ಆದ್ರೀಗ ಅನಿರುದ್ಧ ಅವರನ್ನ ಜೊತೆ ಜೊತೆಯಲಿ ಧಾರವಾಹಿಯಿಂದ ತೆಗೆದುಹಾಕಲಾಗಿದೆ.. ಅಷ್ಟೇ ಅಲ್ದೇ ಅವರ ಮೇಲೆ 2 ವರ್ಷಗಳ ಕಾಲ ನಿಷೇಧವನ್ನೂ ಹೇರಲಾಗಿದೆ…
ಇನ್ಮುಂದೆ ಕಿರುತೆರೆಯ ಯಾವುದೇ ಕಾರ್ಯಕ್ರಮಗಳಲ್ಲಿ ಅನಿರುದ್ಧ್ ಗೆ ಅವಕಾಶ ಕೊಡದಂತೆ ನಿರ್ಧಾರ ತೆಗೆದುಕೊಳ್ಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ ನಿರ್ಮಾಕರು.. ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಬಾಸ್ಕರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಜೊತೆ ಜೊತೆಯಲಿ ಧಾರವಾಹಿ ತಂಡದ ಜೊತೆ ಅನಿರುದ್ಧ್ ಕಿರಿಕ್ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.. ನಟ ಅನಿರುದ್ಧ್ ಅವರು ಜೊತೆ ಜೊತೆಯಲಿ ಸೀರಿಯಲ್ ನ ನಿರ್ದೇಶಕ ಮಧು ಉತ್ತಮ್ ಗೆ ಮೂರ್ಖ ಅಂತ ಕರೆದಿದ್ದಾರೆ ಎನ್ನಲಾಗಿದೆ.
ಹೀಗಾಗಿಯೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗ್ತಿದೆ.. ಸ್ಕ್ರಿಪ್ಟ್ ವಿಚಾರಕ್ಕೆ ನಿರ್ದೇಶಕರಿಗೆ ನಿಂದಿಸಿ ಶೂಟಿಂಗ್ ಸೆಟ್ ನಿಂದ ಹೊರ ಹೋಗಿದ್ದರು.. ದಾರವಾಹಿ ದೃಶ್ಯ ಬದಲಾವಣೆ ಮಾಡುವಂತೆ ನಿರ್ದೇಶಕ ಮಧು ಉತ್ತಮ್ ಜತೆ ಅನಿರುಧ್ದ್ ಕಿರಿಕ್ ತೆಗೆದುಪಕೊಂಡಿದ್ದರು ಎನ್ನಲಾಗ್ತಿದೆ..
ಹಲವು ಭಾರಿ ಜಗಳ ಆಡಿ ಶೂಟಿಂಗ್ ಸೆಟ್ ನಿಂದ ಹೊರ ನೆಡೆದಿದ್ದ ಅನಿರುದ್ದ್. ಕಳೆದ ಎರಡು ದಿನದ ಹಿಂದೆ ಕೂಡ ಧಾರವಾಹಿ ತಂಡದ ಜೊತೆ ಜಗಳ ಆಡಿಕೊಂಡು ಶೂಟಿಂಗ್ ಮಾಡದೇ ಹೊರ ನಡೆದಿದ್ರು. ಇದನ್ನ ಸಹಿಸಿ ಸಹಿಸಿ ಸಾಕಾಗಿದೆ. ಹಲವು ಭಾರಿ ಈ ಘಟನೆ ಆಗಿದೆ ಎಂದು ತಂಡ ಬೇಸರಗೊಂಡಿರೋದಾಗಿ ತಿಳಿದುಬಂದಿದೆ..