Sandalwood : ನಗರದ ತ್ಯಾಜ್ಯ ಸಮಸ್ಯೆ ಬಗ್ಗೆ ಧ್ವನಿ ಎತ್ತಿದ ಅನಿರುದ್ಧ
ನಗರದ ತ್ಯಾಜ್ಯ ಸಮಸ್ಯೆಗೆ ನಟ ಅನಿರುದ್ಧ್ ಧ್ವನಿಯಾಗಿದ್ದಾರೆ.. ಈಗಾಗಲೇ ಹಲವಾರು ಬ್ಲಾಕ್ ಸ್ಪಾಟ್ ತೆರವು ಮಾಡಲು ಸಹಕಾರ ನೀಡಲಾಗಿದೆ..
ಕಸ ಬಿದ್ದಿರುವ ಜಾಗದಲ್ಲಿ ವೀಡಿಯೋ ಮಾಡಿ, ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದಾರೆ…
ಈ ಬಾರಿ ಸೌತ್ ಎಂಡ್ ಸರ್ಕಲ್ ಬಳಿಯ ಪೈ ವಿಸ್ತಾ ಕನ್ವೆನ್ಷನ್ ಹಾಲ್ ಮುಂಭಾಗ ಕಸದ ರಾಶಿ ಕಂಡು , ಮುಖ್ಯರಸ್ತೆ ಬಳಿಯೇ ಕಸ ಸ್ವಚ್ಛಗೊಳಿಸದಿರುವುದಕ್ಕೆ ಬೇಸರ ಹೊರಹಾಕಿದ್ದಾರೆ..
ತ್ಯಾಜ್ಯ ರಾಶಿ ತೆರವುಗೊಳಿಸಲು ಮನವಿ ಮಾಡಿ ವಿಡಿಯೋದಲ್ಲಿ ಜಾಗೃತಿ ಮೂಡಿಸಿದ್ದಾರೆ.. ಅಂದ್ಹಾಗೆ ಸ್ಯಾಂಡಲ್ ವುಡ್ ನಟ ಅನಿರುದ್ಧ್ , ಹಲವು ತಿಂಗಳಿಂದ ಸ್ವಚ್ಛತಾ ಅಭಿಯಾನಕ್ಕೆ ಮುಂದಾಗಿದ್ಧಾರೆ..