ತಲಕಾವೇರಿ ಭಾಗದಲ್ಲಿ ಮಹಾಮಳೆ ಭಾರೀ ಅವಾಂತರ ಸೃಷ್ಟಿಸಿದೆ. ಭೂಕುಸಿತವಾಗಿದ್ದು, ಭೂಕುಸಿತದಲ್ಲಿ ಪ್ರಧಾನ ಅರ್ಚಕ ನಾರಾಯಾಣಾಚಾರ್ ಕುಟುಂಬ ಭೂಸಮಾಧಿ ಯಾಗಿರುವ ಬಗ್ಗೆ ಶಾಸಕ ಕೆ.ಜಿ.ಬೋಪಯ್ಯ ಅವರು ಶಂಕೆ ವ್ಯಕ್ತಪಡಿಸಿದ್ದಾರೆ. ಭಾರೀ ಮಳೆ, ಮಂಜಿನಿಂದಾಗಿ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಭಾಗಮಂಡಲದಲ್ಲಿ ಕಾವೇರಿ ತೀರದಲ್ಲಿ ಪ್ರವಾಹದ ಪರಿಸ್ಥಿತಯಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗದ ಸ್ಥಿತಿ ಬಂದೊದಗಿದೆ. ಜೆಸಿಬಿ ಸೇರಿದಂತೆ ವಾಹನಗಳು ಅತ್ತ ಕಡೆ ತೆರಳಲು ವಾಗಿದೆ. ಕಾವೇರಿ ಸನ್ನಿಧಿಯಲ್ಲಿಯೇ ಇರುವುದಾಗಿ ನಾರಾಯಣಾಚಾರ್ ಹಠ ಹಿಡಿದಿದ್ದ ನಾರಾಯಾಣಾಚಾರ್ ಮನವೊಲಿಕೆಗೆ ಅಧಿಕಾರಿಗಳು ಶತ ಪ್ರಯತ್ನ ಪಟ್ಟಿದ್ದರು. ಮಾಹಾಮಳೆಯಿಂದಾಗಿ ನಾರಾಯಣಾಚಾರ್ ಹುಡುಕಾಟಕ್ಕೆ ಭಾರೀ ಅಡ್ಡಿಯಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಟಾದಿಕಾರಿ ಕ್ಷಮಾಮಿಶ್ರ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ತದನಂತರದಲ್ಲಿ ಶಾಸಕ ಕೆ.ಜಿ.ಬೋಪಯ್ಯ, ಸುನೀಲ್ ಸುಬ್ರಹ್ಮಣಿ ಸಹ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಎಸಿ ತಂಪು ಒಳಿತಲ್ಲ ಎಚ್ಚರ: ಸಮ್ಮರ್ ಕೋಲ್ಡ್ ಎಂಬ ಮಾರಿಗೆ ಬಲಿಯಾಗಬೇಡಿ, ತಜ್ಞ ವೈದ್ಯರ ಎಚ್ಚರಿಕೆ ಇದು
ಬೇಸಿಗೆಯ ಸುಡುವ ಬಿಸಿಲಿನಿಂದ ರಕ್ಷಣೆ ಪಡೆಯಲು ಇಂದು ಪ್ರತಿಯೊಬ್ಬರೂ ಎಸಿ ಮೊರೆ ಹೋಗುತ್ತಿದ್ದಾರೆ. ಮನೆ, ಕಚೇರಿ ಮಾತ್ರವಲ್ಲದೆ ಪ್ರಯಾಣದ ವೇಳೆಯೂ ಎಸಿ ಅನಿವಾರ್ಯವಾಗಿದೆ. ಆದರೆ ಈ ತಂಪಾದ...








