ಕೃಷಿಯ ಜೊತೆಗೆ ಪಶು ಸಂಗೋಪನೆ ಕಾರ್ಯದಲ್ಲಿ ನಿರತರಾಗಿರುವ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ
ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ 2019ರ ಮೇ 28ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಕರ್ನಾಟಕದ ಸಿಂಗಮ್ ಎಂದೇ ಹೆಸರು ಮಾಡಿದ್ದ ದಕ್ಷ ಅಧಿಕಾರಿಯ ರಾಜೀನಾಮೆ ಸಹಜವಾಗಿಯೇ ಜನರಿಗೆ ಬೇಸರ ಮೂಡಿಸಿತ್ತು. ನಡುವೆ ಅವರು ರಾಜಕೀಯ ಸೇರುತ್ತಾರೆ, ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿಗಳು ಹರಡಿದ್ದವು. ಅಷ್ಟೇ ಅಲ್ಲ ಅವರು ಸಿನಿಮಾವೊಂದರಲ್ಲಿ ಬಣ್ಣ ಹಚ್ಚಲಿದ್ದಾರೆ ಎಂದು ಸುದ್ದಿಯಾಗಿತ್ತು.
ಈ ನಡುವೆ ಅವರು ತನ್ನೂರು ತಮಿಳುನಾಡಿನ ಕರೂರಿನಲ್ಲಿ ಜನರೊಂದಿಗೆ ಬೆರೆತು ವಿವಿಧ ಚಟುವಟಿಕಗೆಳಲ್ಲಿ ಅವರನ್ನು ತೊಡಗಿಕೊಂಡಿದ್ದಾರೆ. ಜೊತೆಗೆ ಕೃಷಿ ಕಾರ್ಯದಲ್ಲಿ ತಮ್ಮನ್ನು ತೊಡಗಿಕೊಂಡಿದ್ದಾರೆ. ಅಣ್ಣಾಮಲೈ ಅವರು ಕರೂರು ಜಿಲ್ಲೆಯ ತೊಟ್ಟಂಪಟ್ಟಿಯಲ್ಲಿ ಕೃಷಿ, ಪಶು ಸಂಗೋಪನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ತಮಿಳು ಮಾಧ್ಯಮವೊಂದು ವರದಿ ಮಾಡಿದ್ದು, ಅವರು ತಮ್ಮನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವ ಫೋಟೋ ಗಳು ವೈರಲ್ ಆಗಿದೆ.









