ಅವನ್ಯಾರೋ ಐಎಎಸ್ಸೋ, ಐಪಿಎಸ್ಸೋ ಇದ್ನಲ್ಲ : ಅಣ್ಣಾಮಲೈ ವಿರುದ್ಧ ಸಿದ್ದು ಕಿಡಿ Annamalai saaksha tv
ಚಾಮರಾಮನಗರ : ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನವರು ರಾಜಕೀಯಕ್ಕಾಗಿ ಕ್ಯಾತೆ ತೆಗೆದಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಚಾಮರಾಜನಗರದಲ್ಲಿ ನಡೆದ ಕಾಂಗ್ರೆಸ್ ಜನಜಾಗೃತಿ ಸಮಾವೇಶದಲ್ಲಿ ಸಿದ್ದರಾಮಯ್ಯ ಮಾತನಾಡಿ, ಮೇಕೆದಾಟು ವಿಚಾರವಾಗಿ ತಮಿಳುನಾಡಿನವರು ರಾಜಕೀಯಕ್ಕಾಗಿ ಖ್ಯಾತೆ ತೆಗೆದಿದ್ದಾರೆ.
ಅವನ್ಯಾರೋ ಐಎಎಸ್ಸೋ, ಐಪಿಎಸ್ಸೋ ಇದ್ನಲ್ಲ ಅಣ್ಣಾಮಲೈ ಈಗ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ.
ಆ ಅಣ್ಣಾಮಲೈ ಅಲ್ಲಿ ಮೇಕೆದಾಟು ವಿರೋಧಿಸಿ ಧರಣಿ ಕೂರ್ತಾನೆ. ಈ ಸಿ.ಟಿ.ರವಿ ಇದಾನಲ್ಲ, ಈತನನ್ನ ಲೂಟಿ ರವಿ ಅಂತಾನೂ ಕರೀತಾರೆ.
ಇವನು ತಮಿಳುನಾಡಿನವರ ಜೊತೆ ಕೈ ಜೋಡಿದ್ದಾನೆ. ಅದಕ್ಕಾಗಿಯೇ ಮೇಕೆದಾಟು ಯೋಜನೆ ವಿಳಂಬ ಆಗ್ತಿದೆ.
ಇದನ್ನ ವಿರೋಧಿಸಿ ನಾವು ಜನವರಿ 9 ರಂದು ಪಾದಯಾತ್ರೆ ಆರಂಭ ಮಾಡ್ತಿದ್ದೀವಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದೇ ವೇಳೆ ವಸತಿ ಸಚಿವ ವಿ.ಸೋಮಣ್ಣ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿ, ಆ ಸೋಮಣ್ಣ ನಾನು ಗುಂಡ್ಲುಪೇಟೆಯಲ್ಲಿ ನಿಂತ್ಕೋತೀನಿ, ಹನೂರಲ್ಲಿ ನಿಂತ್ಕೋತೀನಿ ಅಂತ ಓಡಾಡುತ್ತಿದ್ದ.
ಒಂದೇ ಒಂದು ಮನೆ ಕೊಟ್ಟಿಲ್ಲ. ನಮ್ಮ ಸರ್ಕಾರದ ಮನೆಯ ಬಿಲ್ ಕೂಡ ಕ್ಲಿಯರ್ ಮಾಡಿಲ್ಲ. ನಾನು ಯಾಕಯ್ಯ ಮನೆ ಕೊಟ್ಟಿಲ್ಲ ಅಂತ ಕೇಳ್ದೆ.
ಏನ್ ಮಾಡೋದು ಸರ್. ದುಡ್ಡು ಕೊಟ್ಟಿಲ್ಲ ಅಂದ. ಆ ವಿಜಯೇಂದ್ರನಿಗೂ ಸೋಮಣ್ಣನಿಗೂ ಆಗಿ ಬರೋದಿಲ್ಲ.
ಆದ್ದರಿಂದ ವಸತಿ ಇಲಾಖೆಗೆ ಅನುದಾನ ಕೊಟ್ಟಿರಲಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.









