ಯಾರಾದ್ರೂ ಲಂಚ ಕೇಳಿದ್ರೆ ರೆಕಾರ್ಡ್ ಮಾಡಿ ನನಗೆ ಕಳುಹಿಸಿ – ಪಂಜಾಬ್ ಮುಖ್ಯಮಂತ್ರಿ.
ಪಂಜಾಬ್ ನ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಭ್ರಷ್ಟಾಚಾರವನ್ನ ಮಟ್ಟ ಹಾಕಲಿಕ್ಕೆ ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ಪಂಜಾಬ್ ಜನತೆ ಮತದಾನ ಮಾಡುವ ಮೂಲಕ ತಮ್ಮ ಜವಾಬ್ದಾರಿಯನ್ನು ಪೂರೈಸಿದ್ದಾರೆ, ಮುಂದಿನ ಜವಾಬ್ದಾರಿ ನನ್ನದು. ಇಂದು ನಾನು ಪಂಜಾಬ್‌ಗೆ ದೊಡ್ಡ ಘೋಷಣೆ ಮಾಡಲಿದ್ದೇನೆ. ಇದು ಪಂಜಾಬ್‌ನ ಜನರಿಗೆ ಅವರ ದೈನಂದಿನ ಜೀವನದಲ್ಲಿ ಸಾಕಷ್ಟು ಅನುಕೂಲವನ್ನು ಉಂಟುಮಾಡಲಿದೆ. ಇಂದು ನಾನು ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡುತ್ತಿದ್ದೇನೆ. ಎಂದು ಭಗವಂತ್ ಸಿಂಗ್ ಮಾನ್ ಹೇಳಿದ್ದಾರೆ.
ಈ ಸಹಾಯವಾಣಿ ಸಂಖ್ಯೆಯನ್ನು ಶಹೀದ್ ಭಗತ್ ಸಿಂಗ್ ಅವರ ಪುಣ್ಯತಿಥಿಯಂದು ಮಾರ್ಚ್ 23 ರಂದು ಬಿಡುಗಡೆ ಮಾಡಲಾಗುತ್ತದೆ. ಇದೇ ರೀತಿ ದೆಹಲಿಯಲ್ಲೂ ಲಂಚ ಕೇಳುವವರ ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್ ಮಾಡಲಾಯಿತು. ಲಂಚ ಕೇಳುವುದನ್ನ ಅಲ್ಲಿ ನಿಯಂತ್ರಿಸಲಾಯಿತು. ಇದರ ನಂತರ ಜನರು ಮತ್ತೆ ಮತ್ತೆ ಕೇಜ್ರಿವಾಲ್ ಸರ್ಕಾರವನ್ನು ಗೆಲ್ಲಿಸಲು ಪ್ರಾರಂಭಿಸಿದರು. ಮುಂದಿನ ದಿನಗಳಲ್ಲಿ ಇದೇ ರೀತಿಯ ಸಹಾಯವಾಣಿ ಸಂಖ್ಯೆಗಳನ್ನು ನೀಡುತ್ತೆವೆ ಎಂದು ಭಗವಂತ್ ಮಾನ್ ಹೇಳಿದ್ದಾರೆ.
ಇದು ನನ್ನ ವಾಟ್ಸಾಪ್ ನಂಬರ್ ಆಗಿರುತ್ತದೆ ಎಂದು ಭಗವಂತ್ ಮಾನ್ ಹೇಳಿದ್ದಾರೆ. ಯಾರಾದರೂ ಲಂಚ ಕೇಳಿದರೆ, ನಿರಾಕರಿಸಬೇಡಿ, ಅದನ್ನು ರೆಕಾರ್ಡ್ ಮಾಡಿ ನನಗೆ ಕಳುಹಿಸಿ. ತಪ್ಪಿತಸ್ಥರು ಯಾರೇ ಆಗಿರಲಿ, ಆ ಭ್ರಷ್ಟರನ್ನು ಯಾವುದೇ ಸಂದರ್ಭದಲ್ಲೂ ಬಿಡುವುದಿಲ್ಲ. ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಪಂಜಾಬ್‌ನಲ್ಲಿ ಮೊದಲ ಬಾರಿಗೆ ಎಎಪಿ ಸರ್ಕಾರ
ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಮೊದಲ ಬಾರಿಗೆ ಸರ್ಕಾರ ರಚಿಸಿದೆ. ಇಲ್ಲಿಯವರೆಗೆ ಪಂಜಾಬ್‌ನಲ್ಲಿ ಕಾಂಗ್ರೆಸ್ ಮತ್ತು ಅಕಾಲಿದಳ ಆಡಳಿತವಿತ್ತು. ದೆಹಲಿಯ ನಂತರ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದ ಮೊದಲ ಪೂರ್ಣ ಪ್ರಮಾಣದ ರಾಜ್ಯ ಪಂಜಾಬ್ ಆಗಿದೆ.
ಚುನಾವಣೆಯಲ್ಲಿ 92 ಸ್ಥಾನಗಳನ್ನು ಗೆದ್ದರು
ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ದಾಖಲೆಯ ಸಾಧನೆ ಮಾಡಿದೆ. ಎಎಪಿ 117 ಸ್ಥಾನಗಳಲ್ಲಿ 92 ಸ್ಥಾನಗಳನ್ನು ಗೆದ್ದಿದೆ. ಅಧಿಕಾರದಲ್ಲಿದ್ದ ಕಾಂಗ್ರೆಸ್ 77ರಲ್ಲಿ ಕೇವಲ 18ಕ್ಕೆ ಕುಸಿದಿತ್ತು. ಆದರೆ ಅಕಾಲಿದಳ ಕೇವಲ 3 ಸ್ಥಾನಗಳನ್ನು ಪಡೆದಿದೆ. ಪಂಜಾಬ್ ಬದಲಾವಣೆಗಾಗಿ ಭಗವಂತ್ ಮಾನ್ ಅವರನ್ನು ಸಿಎಂ ಮಾಡಲು ಜನರು ಮತ ಹಾಕಿದರು. ಮಾನ್ ಅವರನ್ನು ಆಮ್ ಆದ್ಮಿ ಪಕ್ಷವು ಪಂಜಾಬ್‌ನ ಮುಖ್ಯಮಂತ್ರಿಯನ್ನಾಗಿ ಮಾಡಿತು.








