ಬೆಂಗಳೂರು : ಇತ್ತೀಚೆಗೆ ಶಾಪ್ಸಿಯನ್ನು ಆರಂಭಿಸಿದ್ದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಇದೀಗ ಶೂನ್ಯ-ಕಮೀಷನ್ ಮಾರ್ಕೆಟ್ ಪ್ಲೇಸ್ ಅನ್ನು ಪರಿಚಯಿಸಿದೆ. ಫ್ಯಾಶನ್, ಗ್ರಾಸರಿ ಮತ್ತು ಗೃಹೋಪಯೋಗಿ ಉತ್ಪನ್ನಗಳ ವಿಭಾಗದಲ್ಲಿ ಸೂಕ್ತವಾದ ಮಾರಾಟಗಾರರು ಮತ್ತು ಆಯ್ಕೆಗಳನ್ನು ತರಲು ಇದು ನೆರವಾಗುತ್ತದೆ ಎಂಬುದನ್ನು ಫ್ಲಿಪ್ ಕಾರ್ಟ್ ನಂಬಿದೆ. ಈ ಯೋಜನೆಯಿಂದಾಗಿ ವಿಸ್ತಾರವಾದ ಉತ್ಪನ್ನಗಳ ಶ್ರೇಣಿ ಮತ್ತು ಕೆಟಲಾಗ್ ಗಳನ್ನು ಹೆಚ್ಚು ಮಾಡುವುದು ಮತ್ತು 2 ನೇ ಶ್ರೇಣಿಯ ನಗರಗಳು ಮತ್ತು ಪಟ್ಟಣಗಳಲ್ಲಿ ಇ-ಕಾಮರ್ಸ್ ಅನ್ನು ಬೆಳವಣಿಗೆ ಮಾಡುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ.
ಇಂದು ಫ್ಲಿಪ್ ಕಾರ್ಟ್ ಗೆ 2 ಮತ್ತು 3 ನೇ ಶ್ರೇಣಿಯ ನಗರಗಳಲ್ಲಿ ಶೇ.70 ರಷ್ಟು ಗ್ರಾಹಕರಿದ್ದಾರೆ. ಶಾಪ್ಸಿಯೊಂದಿಗೆ ಫ್ಲಿಪ್ ಕಾರ್ಟ್ ಈ ಪ್ರಮಾಣವನ್ನು ಶೇ.90 ಕ್ಕೆ ಹೆಚ್ಚಳ ಮಾಡುವ ಉದ್ದೇಶವನ್ನು ಹೊಂದಿದೆ. ಈ ಗುರಿಯನ್ನು ಸಾಧಿಸಲು ಸಾಮಾಜಿಕ ವಾಣಿಜ್ಯ ವೈಶಿಷ್ಟ್ಯತೆಗಳೊಂದಿಗೆ ಗ್ಯಾಮಿಫಿಕೇಶನ್ ನೆರವಾಗುತ್ತದೆ ಎಂದು ಫ್ಲಿಪ್ ಕಾರ್ಟ್ ನಂಬಿದೆ. ಅಂತಹ ಒಂದು ವೈಶಿಷ್ಟ್ಯತೆಯೆಂದರೆ ಶಾಪ್ ಮತ್ತು ಗಳಿಕೆ. ಅಲ್ಲಿ ಬಳಕೆದಾರರು ಒಂದು ನಿರ್ದಿಷ್ಟ ಸಾಪ್ತಾಹಿಕ/ಮಾಸಿಕ ಗುರಿಯನ್ನು ಸಾಧಿಸಲು ಹೆಚ್ಚಿನ ಪ್ರೋತ್ಸಾಹಕಗಳನ್ನು ಅನ್ ಲಾಕ್ ಮಾಡಲು ಸಾಧ್ಯವಾಗುತ್ತದೆ. ಈ ರೀತಿಯ ಗ್ಯಾಮಿಫಿಕೇಶನ್ ಮತ್ತಷ್ಟು ವೈರಲ್ ಗೆ ಕಾರಣವಾಗುತ್ತದೆ.
ಕಳೆದ ಒಂದು ದಶಕದಲ್ಲಿ ಫ್ಲಿಪ್ ಕಾರ್ಟ್ ತನ್ನ ಗ್ರಾಹಕರಿಗೆ ತಂತ್ರಜ್ಞಾನ ಮತ್ತು ನಾವೀನ್ಯತೆಯನ್ನು ಹೆಚ್ಚಿಸುವ ಮೌಲ್ಯವನ್ನು ಅನ್ಲಾಕ್ ಮಾಡಲು ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದೆ. ಇದು ಮುಂದಿನ ಪೀಳಿಗೆಯ ಸಾಮಾಜಿಕ ವಾಣಿಜ್ಯ ಪ್ಲಾಟ್ ಫಾರ್ಮ್ ನ ಯಶಸ್ಸಿಗೆ ಬಲವಾದ ಮತ್ತು ನಿರ್ಣಾಯಕವಾದ ನೆಲೆಯನ್ನು ರೂಪಿಸುತ್ತದೆ. ಶೂನ್ಯ ಕಮೀಷನ್ ಕಾರ್ಯತಂತ್ರಕ್ಕೆ ಪೂರಕವಾಗಿ ಮಾರಾಟಗಾರರು ಈಗಾಗಲೇ ಫ್ಲಿಪ್ ಕಾರ್ಟ್ ನ ಜಾಹೀರಾತು ತಂತ್ರಜ್ಞಾನ ಪ್ಲಾಟ್ ಫಾರ್ಮ್ ಅನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ, ಫ್ಲಿಪ್ ಕಾರ್ಟ್ ನ ಕಡಿಮೆ ಬೆಲೆಯ ಲಾಜಿಸ್ಟಿಕ್ ನೆಟ್ ವರ್ಜ್ ಮತ್ತು ಫ್ಲಿಪ್ ಕಾರ್ಟ್ ಪೇ ಲೇಟರ್ ನಂತಹ ಕೈಗೆಟುಕುವ ಕಾರ್ಯಕ್ರಮಗಳು ಸಾಮಾಜಿಕ ವಾಣಿಜ್ಯದ ಸಂದರ್ಭದಲ್ಲಿ ಗೇಮ್ ಚೇಂಜರ್ ವೇಗವರ್ಧಕಗಳಾಗಿ ಕಾರ್ಯನಿರ್ವಹಣೆ ಮಾಡುವ ಎರಡು ಪ್ರಮುಖ ಅಸ್ತ್ರಗಳಾಗಿವೆ.









