ತುಮಕೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಮತ್ತೋರ್ವ ಆರೋಪಿ ಜೈಲಿಂದ ಮಧ್ಯಂತರ ಜಾಮೀನಿನ ಮೇಲೆ ಹೊರ ಬಂದಿದ್ದಾನೆ.
ಎ8 ರವಿಶಂಕರ್ (Ravishankar) ಕೊನೆಗೂ ತುಮಕೂರು ಜೈಲಿನಿಂದ (Tumakuru Central Jail) ಬಿಡುಗಡೆಯಾಗಿದ್ದಾನೆ. ಚಿತ್ರದುರ್ಗ (Chitradurga) ಮೂಲದ ರವಿಶಂಕರ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ8 ಆರೋಪಿಯಾಗಿ ತುಮಕೂರು ಜೈಲು ಸೇರಿದ್ದ. ಈ ವ್ಯಕ್ತಿಗೆ ಬೇಲ್ ಸಿಕ್ಕು 15 ದಿನಗಳು ಕಳೆದಿದ್ದವು. ಈಗ ಬಿಡುಗಡೆಯ ಭಾಗ್ಯ ಸಿಕ್ಕಿದೆ.
ಡಿ ಗ್ಯಾಂಗ್ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ನಡೆಸಿ 57ನೇ ಸಿಸಿಹೆಚ್ ನ್ಯಾಯಾಲಯ ಆರೋಪಿ ರವಿಶಂಕರ್ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. 2 ಲಕ್ಷ ರೂ. ಬಾಂಡ್ ಹಾಗೂ ಇಬ್ಬರ ಶ್ಯೂರಿಟಿಯನ್ನೂ ನ್ಯಾಯಾಲಯ ಕೇಳಿತ್ತು. ಎಲ್ಲ ಪ್ರಕ್ರಿಯೆಗಳು ಇಂದು ಮುಗಿದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.