ರಾಜ್ಯದಲ್ಲಿ ಬಸ್ ಟಿಕೆಟ್ ದರ ಏರಿಕೆ ಮಾಡಿದ ಶಾಕ್ ನಿಂದ ಜನರು ನಿಧಾನವಾಗಿ ಹೊರ ಬರುತ್ತಿರುವ ಬೆನ್ನಲ್ಲೇ ಬಿಎಂಟಿಸಿ ಪ್ರಯಾಣಿಕರ ಜೇಬಿಗೆ ಮತ್ತೊಂದು ದೊಡ್ಡ ಬರೆ ಎಳೆದಿದೆ. ಇದೀಗ BMTC ಪಾಸ್ ದರಗಳನ್ನು ಏರಿಕೆ ಮಾಡಿದೆ. ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಪಾಸ್ ದರ ಏರಿಕೆ ಮಾಡಿ ಇಂದಿನಿಂದಲೇ ಜಾರಿಗೆ ಬರುವಂತೆ ಎಂದು ಆದೇಶ ಹೊರಡಿಸಿದೆ. ಬಸ್ ಪಾಸ್ ದರ ಏರಿಕೆ ಪಟ್ಟಿ ಹೀಗಿದೆ.
ಸಾಮಾನ್ಯ ದಿನದ ಪಾಸು 70 ರೂಪಾಯಿಯಿಂದ 80 ರೂ.ಏರಿಕೆ
ವಾರದ ಪಾಸು 300 ರೂಪಾಯಿಯಿಂದ 350 ರೂ.
ಮಾಸಿಕ ಪಾಸು 1050 ರೂಪಾಯಿಯಿಂದ 1200 ರೂ.
ವಜ್ರ ಬಸ್ಸಿನ ದಿನದ ಪಾಸು 120 ರೂಪಾಯಿಯಿಂದ 140 ರೂಪಾಯಿಗೆ ಏರಿಕೆ
ವಜ್ರ ಬಸ್ಸಿನ ಮಾಸಿಕ ಪಾಸು 1,800 ರೂಪಾಯಿಯಿಂದ 2,000 ರೂಪಾಯಿಗೆ ಏರಿಕೆ
ವಾಯುವಜ್ರ ಬಸ್ ಪಾಸು 3,755 ರಿಂದ 4,000ವರೆಗೂ ಏರಿಕೆ
ವಿದ್ಯಾರ್ಥಿ ವಜ್ರ ಮಾಸಿಕ ಪಾಸು 1,200 ರಿಂದ 1,400 ರೂಪಾಯಿಗೆ ಹೆಚ್ಚಳವಾಗಿದೆ.








