ತುಮಕೂರು: ಯುವಕರ ಗುಂಪೊಂದು ಗುರಾಯಿಸಿದ್ದಾನೆಂಬ ಕಾರಣಕ್ಕೆ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ನಗರದ ಬನಶಂಕರಿ ಹತ್ತಿರ ನಡೆದಿದೆ. ಯುವಕನ ಮೇಲೆ 15 ಜನ ಯುವಕರು ಸೇರಿಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕುಶಾಲ್ (23) ಹಲ್ಲೆಗೆ ಒಳಗಾದ ಯುವಕ. ಕುಶಾಲ್ ಬನಶಂಕರಿ 2ನೇ ಹಂತದ ಮರಳೂರು ದಿಣ್ಣೆಯ ನಿವಾಸಿ. ಬನಶಂಕರಿ ಬಳಿಯಿರುವ ಬಾಬಾ ಕೆಫೆ ಹತ್ತಿರ ಟೀ ಕುಡಿಯಲು ಹೋಗಿದ್ದ ವೇಳೆ ಕುಶಾಲ್ ಮೇಲೆ ಸುಮಾರು 15 ಯುವಕರಿದ್ದ ತಂಡ ಏಕಾಏಕಿ ಹಲ್ಲೆ ನಡೆಸಿದೆ ಎನ್ನಲಾಗಿದೆ.
ಮನಬಂದಂತೆ ಥಳಿಸುತ್ತಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಸದ್ಯ ಈ ಕುರಿತು ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ. ನಾನು ಟೀ ಕುಡಿಯುತ್ತಿದ್ದ ಸಂದರ್ಭದಲ್ಲಿ 15 ಜನರು ಹಲ್ಲೆ ಮಾಡಿದ್ದಾರೆ. ಏಕಾಏಕಿ ಬಂದು ಗುರಾಯಿಸುತ್ತೀಯಾ ಎಂದು 15 ಜನರ ಯುವಕರು ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾನೆ ಎನ್ನಲಾಗಿದೆ.








