ನರಿ ಬುದ್ಧಿ ಬಿಡದ ಕುತಂತ್ರಿ ಚೀನಾದಿಂದ ಮತ್ತೊಮ್ಮೆ ಉದ್ಧಟತನ
ಹೊಸದಿಲ್ಲಿ, ಸೆಪ್ಟೆಂಬರ್01: ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಸೈನಿಕರು ಆಗಸ್ಟ್ 29 ಮತ್ತು ಅಗಸ್ಟ್ 30ರಂದು ಪಾಂಗೊಂಗ್ ತ್ಸೊದ ದಕ್ಷಿಣ ದಂಡೆಯಲ್ಲಿ ‘ಉಭಯ ದೇಶಗಳ ನಡುವಿನ ನಿರ್ಣಯವನ್ನು ಉಲ್ಲಂಘನೆ ಮಾಡಿ ಪ್ರಚೋದನಾರಿ ಕಾರ್ಯಾಚರಣೆ ಮಾಡಿದ್ದಾರೆ ಎಂದು ಭಾರತೀಯ ಸೇನೆಯು ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ. ಚೀನಾ ವಾಸ್ತವ ಗಡಿ ರೇಖೆಯ ಬಳಿ ಯಥಾ ಸ್ಥಿತಿ ಕಾಯ್ದುಕೊಳ್ಳದೆ ಉದ್ಧಟತನ ಪ್ರದರ್ಶಿಸುತ್ತಿದೆ ಎಂದು ಭಾರತೀಯ ಪಡೆ ತಿಳಿಸಿವೆ.
2020 ರ ಆಗಸ್ಟ್ 29 ಮತ್ತು ಅಗಸ್ಟ್ 30 ರ ರಾತ್ರಿ, ಪೂರ್ವ ಲಡಾಖ್ನಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಕುರಿತು ಇರುವ ಒಮ್ಮತದ ನಿರ್ಣಯವನ್ನು ಪಿಎಲ್ಎ ಪಡೆಗಳು ಉಲ್ಲಂಘಿಸಿವೆ ಮತ್ತು ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಚೋದನಕಾರಿ ಮಿಲಿಟರಿ ಚಳುವಳಿಗಳನ್ನು ನಡೆಸಿದವು.
ಭಾರತೀಯ ಪಡೆಗಳಿಗೆ ಪಿಎಲ್ಎ ಕಾರ್ಯಾಚರಣೆ ನಡೆಸುವ ಕುರಿತು ಅರಿತದ್ದ ಹಿನ್ನೆಲೆಯಲ್ಲಿ ಸದರ್ನ್ ಬ್ಯಾಂಕ್ ಆಫ್ ಪಾಂಗೊಂಗ್ ತ್ಸೋ ಸರೋವರದಲ್ಲಿ ಪೂರ್ವಭಾವಿಯಾಗಿ ತೀವ್ರ ಕಟ್ಟೆಚ್ಚರ ವಹಿಸಿದ್ದವು. ಇದರಿಂದಾಗಿ ಚೀನಾದ ಉದ್ದೇಶಕ್ಕೆ ತಡೆ ಉಂಟಾಗಿದೆ.
ಭಾರತೀಯ ಸೈನ್ಯವು ಮಾತುಕತೆಯ ಮೂಲಕ ಶಾಂತಿಯನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ ಆದರೆ ಅದರ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಸಹ ಅಷ್ಟೇ ಕಟಿ ಬದ್ಧವಾಗಿದೆ. ಸಮಸ್ಯೆಗಳನ್ನು ಪರಿಹರಿಸಲು ಚುಶುಲ್ನಲ್ಲಿ ಬ್ರಿಗೇಡ್ ಕಮಾಂಡರ್ ಮಟ್ಟದ ಸಭೆ ಪ್ರಗತಿಯಲ್ಲಿದ್ದರೂ ಚೀನಾ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಕರ್ನಲ್ ಅಮನ್ ಆನಂದ್ ಹೇಳಿದ್ದಾರೆ.








