“ಕೇಳದೆ ಬಂದೆ ನೀನು”… ಎಂಬ ಬ್ಯೂಟಿಫುಲ್ ಆಲ್ಬಂ ನೀಡಿದ್ದ ಅಧ್ವಿಕ್ ಮತ್ತು ತಂಡ, ಇದೀಗ “ಸೇರು ನನ್ನ ತೋಳಲ್ಲಿ” ಎನ್ನುವ ಮತ್ತೊಂದು ರೊಮ್ಯಾಂಟಿಕ್ ಲವ್ ಆಲ್ಬಂ ರಿಲೀಸ್ ಮಾಡಿದೆ. ಈ ಆಲ್ಬಂನಲ್ಲಿ ಲೈಫ್ 260 ಚಿತ್ರದಲ್ಲಿ ನಟಿಸಿದ್ದ ಅರ್ಜುನ್ ಕಿಶೋರ್ ಚಂದ್ರ ಬಣ್ಣ ಹಚ್ಚಿದ್ದು, ನಾಯಕಿಯಾಗಿ ಭಿನ್ನ ಚಿತ್ರದ ನಟಿ ಪಾಯಲ್ ರಾಧಾಕೃಷ್ಣ ಕಾಣಿಸಿಕೊಂಡಿದ್ದಾರೆ. ಹಾಗೇ ವಿಶೇಷ ಪಾತ್ರದಲ್ಲಿ ಆರ್ ಜೆ ವಿನಾಯಕ್ ಜೋಷಿ ಮಿಂಚಿದ್ದಾರೆ.
ಸೇರು ನನ್ನ ತೋಳಲ್ಲಿ ಗೀತೆಗೆ ಅರ್ಜುನ್ ಚಂದ್ರಶೇಖರ್ ಸಾಹಿತ್ಯವಿದ್ದು, ಬೆಂಗಳೂರು ಮತ್ತು ಚಿಕ್ಕಮಗಳೂರಿನ ಸುತ್ತಮುತ್ತ ಚಿತ್ರೀಕರಿಸಲಾಗಿರುವ ಈ ಹಾಡಿಗೆ ಅಭಿಮನ್ಯು ಸದಾನಂದ್ ಅವರ ಛಾಯಾಗ್ರಹಣವಿದೆ.








