ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಗೆ (Darshan) ಮತ್ತೊಂದು ಶಾಕ್ ಎದುರಾಗಿದ್ದು, ಅವರ ಗನ್ ಸೀಜ್ ಮಾಡಲಾಗಿದೆ.
ಕಮಿಷನರ್ ಆದೇಶ ನೀಡಿದ ಬೆನ್ನಲ್ಲೇ ಗನ್ ಸೀಜ್ ಮಾಡಲಾಗಿದೆ. ತಾತ್ಕಾಲಿಕವಾಗಿ ಗನ್ ಪರವಾನಗಿ ರದ್ದು ಮಾಡಲಾಗಿತ್ತು. ಪರವಾನಗಿ ರದ್ದು ಮಾಡುವ ವಿಷಯವಾಗಿ ದರ್ಶನ್ ಗೆ ಆರ್ ಆರ್ ನಗರ ಪೊಲೀಸರು ನೋಟಿಸ್ ನೀಡಿದ್ದರು. ಆದರೆ, ಇದಕ್ಕೆ ಉತ್ತರಿಸಿದ್ದ ದರ್ಶನ್ ನನಗೆ ಗನ್ ಬೇಕು ಎಂದಿದ್ದರು. ಆದರೆ, ಯಾವುದೇ ಕಾರಣಕ್ಕೂ ಪ್ರಕರಣದ ಸಾಕ್ಷಿಗಳನ್ನು ಬೆದರಿಸುವ ಕಾರ್ಯ ಮಾಡುವುದಿಲ್ಲ ಎಂದಿದ್ದರು.
ಇಂದು ಪೊಲೀಸ್ ಕಮಿಷನರ್ ಗನ್ ಲೈಸೆನ್ಸ್ ತಾತ್ಕಾಲಿಕವಾಗಿ ರದ್ದು ಮಾಡುವುದಾಗಿ ಹೇಳಿದರು. ಈ ಹಿನ್ನೆಲೆಯಲ್ಲಿ ಖುದ್ದು ದರ್ಶನ್ ಮನೆಗೆ ತೆರಳಿ ಪೊಲೀಸರು ಗನ್ ಸೀಜ್ ಮಾಡಿದ್ದಾರೆ. ಚೆನ್ನಮ್ಮನಕೆರೆಯ ವಿಜಯಲಕ್ಷ್ಮಿ ಫ್ಲ್ಯಾಟ್‌ನಲ್ಲಿದ್ದ ದರ್ಶನ್ ಗನ್ ಸೀಜ್ ಮಾಡಲಾಗಿದೆ ಎಂಬ ಮಾಹಿತಿ ಪೊಲೀಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ.