ದೇಶದಲ್ಲಿ ಕೊರೊನಾ ವೈರಸ್ ಹರಡದಂತೆ ಸರ್ಕಾರಗಳು ಅನೇಕ ರೀತಿಯ ಕ್ರಮಗಳನ್ನು ತೆಗೆದುಕೊಂಡಿವೆ. ಆದರೂ ಸಹ ವೈರಸ್ ಹರಡುವಿಕೆ ಕಡಿಮೆ ಆಗುತ್ತಿಲ್ಲ. ಇದರ ಗಂಭೀರತೆ ಅರಿತ ಕೇಂದ್ರ ಸರ್ಕಾರ ದೇಶವನ್ನು 21 ದಿನಗಳ ಕಾಲ ಬಂದ್ ಮಾಡಿದೆ. ಇದರ ಬೆನ್ನೇಲೆ ವಿಜ್ಞಾನಿಗಳ ತಂಡವೊಂದು ಶಾಕ್ ನೀಡಿದೆ. ಸರ್ಕಾರಗಳು ಸರಿಯಾದ ರೀತಿಯಲ್ಲಿ ಪರೀಕ್ಷೆಗಳು ನಡೆಸದೆ ಇದ್ದರೆ ಮೇ ಹೊತ್ತಿಗೆ 13 ಲಕ್ಷಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಳ್ಳುವ ಸಾದ್ಯತೆ ಇದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಕೊರೊನಾ ಶಂಕಿತರನ್ನು ಸರಿಯಾಗಿ ಪರೀಕ್ಷೆ ಮಾಡುವ ವಿಚಾರದಲ್ಲಿ ವಿಳಂಬ ಮಾಡಿದರೇ ಕೊರೊನಾ ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುತ್ತದೆ.
ಕೊರೊನಾ ವಿಚಾರದಲ್ಲಿ ವಿಜ್ಞಾನಿಗಳ ತಂಡವೊಂದು ಆತಂಕಕಾರಿ ವಿಚಾರಗಳನ್ನು ಹೊರ ಹಾಕಿದ್ದಾರೆ. ದೇಶದಲ್ಲಿ ಪರೀಕ್ಷಾ ಪ್ರಮಾಣ ಬಹಳ ಕಡಿಮೆಯಿದೆ. ಕೊರೊನಾ ಹರಡುವಿಕೆ ಹೆಚ್ಚಾದರೂ ಮಾರ್ಚ್ 18ರ ಹೊತ್ತಿಗೆ ದೇಶದಲ್ಲಿ 11,500 ಜನರಿಗೆ ಮಾತ್ರ ಪರೀಕ್ಷೆ ಮಾಡಲಾಗಿದೆ. ಕೊರೊನಾ ಮಹಾಮಾರಿಗ ಈವರಿಗೂ ಯಾವುದೇ ರೀತಿ ಔಷಧಿ ಕಂಡು ಹಿಡಿದಿಲ್ಲ. ಜೊತಗೆ ಹಲವೆಡೆ ಕೊರೊನಾ ಹರಡುವಿಕೆ 2ನೇ ಹಂತ ಮತ್ತು 3ನೇ ಹಂತದ ತಲುಪುತ್ತಿದೆ. ಬೇರೆ ದೇಶಗಳು ಪ್ರಾರಂಭದಲ್ಲಿ ನಿರ್ಲಕ್ಷ್ಯ ದೋರಣೆ ತೆಳೆದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗಿದೆ. ಭಾರತವು ಕೂಡ ಪರೀಕ್ಷೆ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ಮುಂದುವರೆಸಿದರೆ ಅಪಾಯ ಪಕ್ಕಾ ಎಂದು ವಿಜ್ಜಾನಿಗಳು ಎಚ್ಚರಿಸಿದ್ದಾರೆ. 21 ದಿನಗಳ ಕಾಲ ಇಡೀ ದೇಶವೇ ಲಾಕ್ಡೌನ್ ಆದರೆ ಒಂದು ಮಟ್ಟಿಗೆ ಕೊರೋನಾ ಹರಡುವಿಕೆಯನ್ನು ತಡೆಗಟ್ಟಬಹುದು. ಆದರೆ, ಅಷ್ಟು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳುವುದೇ ಸದ್ಯಕ್ಕೆ ಇರುವ ದೊಡ್ಡ ಸವಾಲು.
ಎಲ್ಲಾ ವೈರಸ್ ಗಿಂತ ಅಪಾಯಕಾರಿ
ಈ ಹಿಂದೆ ಸಾಕಷ್ಟು ವೈರಸ್ ಗಳು ಬಂದು ಹೋಗಿವೆ. ಅವುಗಳಿಗೆ ಹೋಲಿಸಿದರೇ ಕೊರೊನಾ ವೈರಸ್ ಅಪಾಯಕಾರಿಯಾಗಿದೆ. ಇದು ಮನುಷ್ಯನ ದೇಹ ಸೇರಿದ ತಕ್ಷಣ ತನ್ನ ಪ್ರಭಾವ ತೋರುತ್ತದೆ. ಜೊತೆಗೆ ಇನ್ನೊಬ್ಬರ ದೇಹ ಸೇರಲು ರೆಡಿ ಆಗಿರುತ್ತದೆ. ಅಲ್ಲದೆ ಕೊರೊನಾ ವೈರಸ್ ದೇಹಕ್ಕೆ ಸೇರಿ ಒಂದು ಗಂಟೆಗೆಯಲ್ಲಿ 10 ಸಾವಿರ ವೈರಸ್ ಸೃಷ್ಟಿಯಾಗುತ್ತವೆ. ಇದಾದ ಬಳಿಕ ದೇಹದಲ್ಲಿರುವ ವೈರಸ್ ಲಕ್ಷಾಂತರ ವೈರಸ್ ಗಳಾಗಿ ಪರಿವರ್ತನೆ ಅಗುತ್ತದೆ. ಜೊತೆಗೆ ಈ ವೈರಸ್ ದೇದ ಬಿಳಿ ರಕ್ತಕಳಗಳನ್ನು ನಾಶ ಮಾಡುತ್ತದೆ.
2028ರ ಮೈತ್ರಿ ಚರ್ಚೆ: ಬಿಜೆಪಿ ಜಿಲ್ಲಾ ಘಟಕದಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ
2028ರ ವಿಧಾನಸಭಾ ಚುನಾವಣೆಗೆ ಜೆಡಿಎಸ್–ಬಿಜೆಪಿ ಮೈತ್ರಿ ವಿಚಾರವಾಗಿ ರಾಜಕೀಯ ಸಂದೇಶಗಳು ಹೊರಬರುತ್ತಿರುವ ಹಿನ್ನೆಲೆ, ಬಿಜೆಪಿಯ ಜಿಲ್ಲಾ ಘಟಕದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಟಿಕೆಟ್ ಆಕಾಂಕ್ಷಿಗಳಲ್ಲಿ ಗೊಂದಲ ಹೆಚ್ಚಾಗಿದೆ...








