ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಜಾಲದ ತನಿಖೆ ಮತ್ತೆ ಸ್ಫೋಟಕ ತಿರುವು ಪಡೆದುಕೊಳ್ಳುತ್ತಿದೆ. ಡ್ರಗ್ಸ್ ಜಾಲದಲ್ಲಿ ಸ್ಯಾಂಡಲ್ವುಡ್ನ ಪಂಚಭಾಷಾ ನಟಿ ಇರುವುದು ಸಿಸಿಬಿ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಕನ್ನಡ ಮಾತ್ರವಲ್ಲ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯ ಚಿತ್ರಗಳಲ್ಲಿ ಆ ಸ್ಟಾರ್ ನಟಿ ಅಭಿನಯ ಮಾಡಿದ್ದಾಳೆ.
ಡ್ರಗ್ಸ್ ನಶೆಯ ನಂಟಿನ ಆರೋಪದ ಮೇರೆಗೆ ದಿ.ಮುತ್ತಪ್ಪ ರೈ ಪುತ್ರ ರಿಕ್ಕಿ ರೈನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಿಚಾರಣೆ ವೇಳೆ ರಿಕ್ಕಿ ರೈ `ಆ ಸ್ಟಾರ್ ನಟಿ’ಯ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಆ ನಟಿ ನನಗೆ ಕ್ಲೋಸ್ ಫ್ರೆಂಡ್. ಸ್ಯಾಂಡಲ್ವುಡ್ ಮಾತ್ರವಲ್ಲದೆ ಪಂಚ ಭಾಷಾ ತಾರೆಯಾಗಿದ್ದಾಳೆ. ಆ ನಟಿಯ ಜೊತೆಯಲ್ಲಿ ಸಾಕಷ್ಟು ಪಾರ್ಟಿಗಳನ್ನು ಮಾಡಿದ್ದೇವೆ ಎಂದು ರಿಕ್ಕಿ ರೈ ಬಾಯ್ಬಿಟ್ಟಿದ್ದಾನೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಅಷ್ಟೇ ಅಲ್ಲ, ಈ ಪಂಚ ಭಾಷಾ ನಟಿಗೆ ಡ್ರಗ್ಸ್ ಪೆಡ್ಲರ್ ಆದಿತ್ಯ ಆಳ್ವಾ ನಂಟು ಇದೆಯಂತೆ. ಆದಿತ್ಯ ಆಳ್ವನ ರೆಸಾರ್ಟ್ ಹಾಗೂ ಫಾರ್ಮ್ಹೌಸ್ಗಳಲ್ಲಿ ನಡೆಯುತ್ತಿದ್ದ ಹಲವು ಡ್ರಗ್ಸ್ ಪಾರ್ಟಿಗಳಲ್ಲಿ ನಟಿ ಪಾಲ್ಗೊಳ್ಳುತ್ತಿದ್ದಳು. ಆದರೆ, ನಾನು ಡ್ರಗ್ಸ್ ತೆಗೆದುಕೊಳ್ಳುತ್ತಿರಲಿಲ್ಲ ಎಂದು ರಿಕ್ಕಿ ಹೇಳಿಕೊಂಡಿದ್ದಾನೆ.
ಡ್ರಗ್ಸ್ ತೆಗೆದುಕೊಳ್ಳುತ್ತಿಲ್ಲ ಎಂದು ರಿಕ್ಕಿ ರೈ ಹೇಳುತ್ತಿದ್ದರೂ, ಆತನ ಮೊಬೈಲ್ನಲ್ಲಿ ಸಿಕ್ಕ ಮಾಹಿತಿಗೂ ತಾಳೆ ಆಗುತ್ತಿಲ್ಲ. ಹೀಗಾಗಿ ಸಿಸಿಬಿ ಪೊಲೀಸರು ಇಂದು ಮತ್ತೊಮ್ಮೆ ರಿಕ್ಕಿ ರೈನನ್ನು ವಿಚಾರಣೆ ಬರುವಂತೆ ಬುಲಾವ್ ನೀಡಿದ್ದಾರೆ.