ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ಟೀಸರ್ ನಿಂದಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ರಾಜಕುಮಾರ ಚಿತ್ರದ ಕಾಂಬಿನೇಷನ್ ಇಲ್ಲಿ ಮತ್ತೆ ಒಂದಾಗಿರೋದು ನಿರೀಕ್ಷೆಗಳನ್ನು ದುಪ್ಪಟ್ಟುಗೊಳಿಸಿದೆ. ಏಕೆಂದರೆ ‘ರಾಜಕುಮಾರ’ ಚಿತ್ರ ಸ್ಯಾಂಡಲ್ ವುಡ್ ನ ಸೂಪರ್ ಡೂಪರ್ ಹಿಟ್ ಸಿನಿಮಾ. ಅನೇಕ ವರ್ಷಗಳಿಂದ ಚಿತ್ರಮಂದಿರಕಡೆ ತಲೆ ಹಾಕದವರನ್ನೂ ರಾಜಕುಮಾರ ಥೀಯೆಟರ್ ಅಂಗಳಕ್ಕೆ ಕರೆತಂದಿತ್ತು. ಇದೇ ಕಾರಣಕ್ಕಾಗಿ ಯುವರತ್ನ ಸಿನಿಮಾದ ಮೇಲೂ ಎಲ್ಲರಿಗೂ ಸಾಕಷ್ಟು ನಿರೀಕ್ಷೆಗಳಿವೆ.
ಲಾಕ್ ಡೌನ್ ನಿಂದಾಗಿ ಚಿತ್ರೀಕರಣವನ್ನು ನಿಲ್ಲಿಸಿದ್ದ ಯುವರತ್ನ ಟೀಂ ಇದೀಗ, ಸಿನಿಮಾದ ಕೆಲಸಗಳಲ್ಲಿ ಬ್ಯೂಸಿಯಾಗಿದ್ದಾರೆ. ಇದರ ಮಧ್ಯೆ ಚಿತ್ರದ ನಿದೇಶಕ ಸಂತೋಷ್ ಆನಂದ್ ರಾಮ್ ಅವರು ‘ಯುವರತ್ನ’ನ ವಿಶಿಷ್ಟ ಸ್ಟಿಲ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ಸ್ಟಿಲ್ ನಲ್ಲಿ ಸಮರಕ್ಕೆ ಹೊರಟ ಭಾವದಲ್ಲಿರುವ ಪುನೀತ್ ಅವರ ಮುಖದ ಒಂದು ಭಾಗದ ಮೇಲೆ ಮಾತ್ರವೇ ಬೆಳಕು ಬೀಳುತ್ತಿದೆ.

ಈ ಸ್ಟಿಲ್ ಅನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್, ‘ಕೆಲವರಿಗೆ ಇಂಟ್ರೊಡಕ್ಷನ್ ಬೇಡ. ಅವರ ಬಗ್ಗೆ ಇನ್ ಫಾರ್ಮೇಷನ್ ಕೊಟ್ರೆ ಸಾಕು’ ಎಂಬ ಸಂಭಾಷಣೆಯ ಸಾಲನ್ನು ಬರೆದಿದ್ದಾರೆ.








